More

    ಬಾಗೇಪಲ್ಲಿ ತಾಲೂಕಿನ ಹಲವು ಗ್ರಾಮಗಳಲ್ಲಿ ಭೂಕಂಪನದ ಅನುಭವ: ಭಾರೀ ಶಬ್ದಕ್ಕೆ ಬೆದರಿದ ಜನ

    ಚಿಕ್ಕಬಳ್ಳಾಪುರ: ಬಾಗೇಪಲ್ಲಿ ತಾಲೂಕಿನ ಕದಿರನ್ನಗಾರಿಪಲ್ಲಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಭೂಕಂಪನದ ಅನುಭವವಾಗಿದೆ. ಇಂದು ರಾತ್ರಿ ಭೂಮಿಯೊಳಗೆ ಸ್ಫೋಟದ ಅನುಭವದ ಜೊತೆಗೆ ಭೂಮಿ ಕಂಪಿಸಿದೆ.

    ಭೂಮಿಯಿಂದ ಕೇಳಿಬಂದ ಭಾರೀ ಶಬ್ದಕ್ಕೆ ಜನ ಬೆದರಿದ್ದಾರೆ. ಬಾಗೇಪಲ್ಲಿ ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಭೂಕಂಪನದ ಅನುಭವವಾಗಿದೆ. ಪೆದ್ದ ತುಮಕೇಪಲ್ಲಿ, ಲಘುಮದ್ದೇಪಲ್ಲಿ, ಗುರ್ರಾಲದಿನ್ನೆ, ಶಂಖವಾರಂಪಲ್ಲಿ, ಯಲ್ಲಂಪಲ್ಲಿ, ಮದ್ದಲಖಾನೆ, ಈರಗಂಟಪಲ್ಲಿ ಹಾಗೂ ಟೆಂಕಮಾಕಲಪಲ್ಲಿಯಲ್ಲಿ ಕಂಪನಿಸಿದ ಅನುಭವವಾಗಿದೆ.

    9.30 ನಿಮಿಷ ಹಾಗೂ 9.45 ನಿಮಿಷದ ಸುಮಾರಿಗೆ ಎರಡು ಬಾರಿ ಭಾರೀ ಶಬ್ದ ಹಾಗೂ ಭೂಕಂಪನದ ಅನುಭವಕ್ಕೆ ಗ್ರಾಮಸ್ಥರು ಬೆದರಿದ್ದಾರೆ. ಹತ್ತಾರು ಗ್ರಾಮಗಳ ಜನರು ಭಯಭೀತಿಯಿಂದಲೇ ಕಾಲ ಕಳೆಯುತ್ತಿದ್ದಾರೆ. ಪೆದ್ದತುಮಕೇಪಲ್ಲಿಯಲ್ಲಿ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಮಲ್ಲಸಂದ್ರ, ಸಡ್ಲವಾರಿಪಲ್ಲಿ, ರಾಯದುರಗಂಪಲ್ಲಿಗಳಲ್ಲಿಯೂ ಸ್ಫೋಟ ಮತ್ತು ಭೂಕಂಪನದ ಅನುಭವ ಆಗಿದೆ.

    ಈ ಬಗ್ಗೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಡಾ. ಮನೋಜ್ ರಾಜನ್ ಪ್ರತಿಕ್ರಿಯೆ ನೀಡಿದ್ದು, ನಮ್ಮ ಹುಡುಗರು 8 ಗಂಟೆಯಿಂದ 10 ಗಂಟೆಯವರೆಗೆ ಮೂರು ವೀಕ್ಷಣಾಲಯಗಳನ್ನು ಪರಿಶೀಲಿಸಿದ್ದು, ಯಾವುದೇ ಭೂಕಂಪನ ಸಂಕೇತಗಳು ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.

    ಮಗಳಿಗಾಗಿ 36 ವರ್ಷದಿಂದ ಗಂಡಿನ ವೇಷದಲ್ಲಿರುವ ಈ ತಾಯಿಯ ಕತೆ ಕೇಳಿದ್ರೆ ಕಣ್ತುಂಬಿ ಬರುತ್ತದೆ!

    ಹಿಂದು ಯುವಕ-ಮುಸ್ಲಿಂ ಯುವತಿಯ ಲವ್ ಸ್ಟೋರಿ: ಮದುವೆಯಾದ ಬಳಿಕ ನಡೀತು ಭಾರೀ ಹೈಡ್ರಾಮಾ!

    ಇನ್ನೊಂದಿಷ್ಟು ಇಲ್ಲಿವೆ…ಮತ್ತಷ್ಟು ಹಾಟ್​ ಫೋಟೋಗಳನ್ನು ಹರಿಬಿಟ್ಟು ಟ್ರೋಲಿಗರಿಗೆ ಸವಾಲೆಸೆದ ಇರಾ ಖಾನ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts