ಮಗಳಿಗಾಗಿ 36 ವರ್ಷದಿಂದ ಗಂಡಿನ ವೇಷದಲ್ಲಿರುವ ಈ ತಾಯಿಯ ಕತೆ ಕೇಳಿದ್ರೆ ಕಣ್ತುಂಬಿ ಬರುತ್ತದೆ!

ಚೆನ್ನೈ: ಮಗಳಿಗಾಗಿ ಕಳೆದ 36 ವರ್ಷದಿಂದ 57 ವರ್ಷದ ತಾಯಿಯೊಬ್ಬಳು ಪುರುಷನ ವೇಷದಲ್ಲಿದ್ದು, ಆಕೆಯ ಕತೆ ಓದುಗರ ಮನ ಮಿಡಿಯುವಂತಿದೆ. ಪುರುಷ ಪ್ರಧಾನ ಸಮಾಜದಲ್ಲಿ ಮಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳಲು ತನ್ನ ಹೆಣ್ತನವನ್ನು ಪಕ್ಕಕ್ಕಿಟ್ಟು ಮಹಾ ತ್ಯಾಗ ಮಾಡಿದ್ದಾರೆ. ಆ ಮಹಾತಾಯಿ ಸ್ಫೂರ್ತಿಯ ಕತೆ ಇಲ್ಲಿದೆ. ಮಹಾತಾಯಿಯ ಹೆಸರು ಪೆಚ್ಚಿಯಮ್ಮಾಳ್. ಇವರು ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕಟ್ಟುನಾಯಕಂಪಟ್ಟಿ ಗ್ರಾಮದ ನಿವಾಸಿ. ಮದುವೆಯಾದ ಬೆನ್ನಲ್ಲೇ ಪೆಚ್ಚಿಯಮ್ಮಾಳ್​ಗೆ ಜೀವನದ ಕಷ್ಟದ ಹಾದಿಗಳು ಎದುರಾದವು. ಮದುವೆಯಾದ 15 ದಿನದಲ್ಲೇ ಗಂಡ ಶಿವ ಮೃತಪಟ್ಟನು. … Continue reading ಮಗಳಿಗಾಗಿ 36 ವರ್ಷದಿಂದ ಗಂಡಿನ ವೇಷದಲ್ಲಿರುವ ಈ ತಾಯಿಯ ಕತೆ ಕೇಳಿದ್ರೆ ಕಣ್ತುಂಬಿ ಬರುತ್ತದೆ!