More

    ವಿದೇಶಿ ಸಂಸತ್ತಿನಲ್ಲಿ ಮೊದಲ ಬಾರಿಗೆ ಮೊಳಗಿದ ಕನ್ನಡ: ಕೆನಡಾ ಸಂಸದ ಚಂದ್ರ ಆರ್ಯರಿಂದ ಕನ್ನಡದಲ್ಲೇ ಭಾಷಣ

    ಒಟ್ಟಾವಾ: ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ವಿದೇಶಿ ಸಂಸತ್​ ಒಂದರಲ್ಲಿ ಕನ್ನಡ ಭಾಷೆ ಮೊಳಗಿದೆ. ಕರ್ನಾಟಕದಲ್ಲೇ ಕನ್ನಡದ ಉಳಿವಿಗಾಗಿ ಹೋರಾಡುತ್ತಿರುವ ಈ ಸಂದರ್ಭದಲ್ಲಿ ದೂರದ ಕೆನಡಾದಲ್ಲಿ ಕನ್ನಡ ಭಾಷೆಗೆ ಗೌರವ ಸಿಕ್ಕಿರುವುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿಯೇ ಸರಿ.

    ಕೆನಡಾದ ಸಂಸತ್​ ಸದಸ್ಯರಾಗಿ ಆಯ್ಕೆಯಾಗಿರುವ ಕರ್ನಾಟಕದ ಚಂದ್ರ ಆರ್ಯ ಅವರು ಕೆನಡಾ ಪಾರ್ಲಿಮೆಂಟ್​ನಲ್ಲಿ ಕನ್ನಡದಲ್ಲೇ ಭಾಷಣ ಮಾಡಿ ಎಲ್ಲರ ಗಮನ ಸೆಳೆಯುವುದರ ಜತೆಗೆ ಕನ್ನಡಿಗರ ಮನವನ್ನು ಗೆದ್ದರು.

    ಚಂದ್ರ ಆರ್ಯ ಅವರು ಕೆನಡಾ ಸಂಸತ್ತಿನಲ್ಲಿ ಮಾಡಿದ ಭಾಷಣದ ಸಾರಾಂಶ ಹೀಗಿದೆ. ಮಾನ್ಯ ಸಭಾಪತಿ ಕೆನಡಾ ದೇಶದ ಸಂಸತ್ತಿನಲ್ಲಿ ನನ್ನ ಮಾತೃಭಾಷೆ ಕನ್ನಡದಲ್ಲಿ ಮಾತನಾಡಲು ಅವಕಾಶ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ. ಭಾರತ ದೇಶದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ದ್ವಾರಾರು ಗ್ರಾಮದ ವ್ಯಕ್ತಿಯೊಬ್ಬ ಕೆನಾಡದಲ್ಲಿ ಸಂಸತ್​ ಸದಸ್ಯನಾಗಿ ಆಯ್ಕೆಯಾಗಿ ಮತ್ತು ಕನ್ನಡದಲ್ಲಿ ಮಾತನಾಡುವುದು ಸುಮಾರು 5 ಕೋಟಿ ಕನ್ನಡಿಗರಿಗೆ ಹೆಮ್ಮೆಯ ಕ್ಷಣವಾಗಿದೆ. ಕೆನಡಾ ದೇಶದ ಕನ್ನಡರಿಗರು 2018ನೇ ಇಸವಿಯಲ್ಲಿ ಕೆನಡಾದ ಈ ಸಂಸತ್ತಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು. ರಾಷ್ಟ್ರಕವಿ ಕುವೆಂಪು ಬರೆದಿರುವ ಮತ್ತು ನಟಸಾರ್ವಭೌಮ ಡಾ. ರಾಜ್​ಕುಮಾರ್​ ಹಾಡಿರುವ ಭಾವಗೀತೆಯ ಕೆಲವು ಪದಗಳೊಂದಿಗೆ ನನ್ನ ಭಾಷಣವನ್ನು ಮುಗಿಸುತ್ತಿದ್ದೇನೆ. ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರೂ ಧನ್ಯವಾದಗಳು ಸಭಾಪತಿ.

    ಇದಿಷ್ಟು ಚಂದ್ರ ಆರ್ಯ ಅವರು ಕೆನಡಾ ಸಂಸತ್ತಿನಲ್ಲಿ ಆಡಿದ ಮಾತು. ಭಾಷಣದ ವಿಡಿಯೋ ತುಣುಕನ್ನು ತಮ್ಮ ಟ್ವಿಟರ್​ನಲ್ಲಿ ಅಪ್​ಲೋಡ್​ ಮಾಡಿರುವ ಚಂದ್ರ ಆರ್ಯ ಅವರು ನಾನು ನನ್ನ ಮಾತೃಭಾಷೆ ಕನ್ನಡವನ್ನು ಕೆನಡಾ ಸಂಸತ್ತಿನಲ್ಲಿ ಮಾತನಾಡಿದೆ. ಇದೊಂದು ಬಹುದೊಡ್ಡ ಇತಿಹಾಸ ಹೊಂದಿರುವ ಸಂದರವಾದ ಭಾಷೆ. ಸುಮಾರು 50 ಮಿಲಿಯನ್​ಗೂ ಹೆಚ್ಚು ಮಂದಿ ಈ ಭಾಷೆಯನ್ನು ಮಾತನಾಡುತ್ತಾರೆ. ಭಾರತದಿಂದಾಚೆಗೆ ವಿದೇಶಿ ನೆಲದ ಸಂಸತ್ತಿನಲ್ಲಿ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಮಾತನಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ.

    ಇದೀಗ ಚಂದ್ರ ಆರ್ಯ ಅವರು ಅಪ್​ಲೋಡ್​ ಮಾಡಿರುವ ವಿಡಿಯೋ ಕನ್ನಡಿಗರ ಹೃದಯ ಮುಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈಗಾಗಲೇ ವಿಡಿಯೋ 90 ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, 10 ಸಾವಿರಕ್ಕೂ ಹೆಚ್ಚು ಲೈಕ್ಸ್​ ಪಡೆದುಕೊಂಡಿದೆ. 2 ಸಾವಿರಕ್ಕೂ ಹೆಚ್ಚು ರೀಟ್ವೀಟ್​ ಆಗಿದ್ದು, ಸಾಕಷ್ಟು ಕನ್ನಡಿಗರು ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.

    ಸೂಪರ್​ ಹೀರೋ ಶಿವಣ್ಣ!: ’ಅವನೇ…’ ನಿರ್ದೇಶಕನ ಜತೆ ’ಅಶ್ವತ್ಥಾಮ’…

    ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿಗೆ ಮತ್ತೆ ಸಂಕಷ್ಟ: ದಿಢೀರ್​ ಶಾಕ್​ ಕೊಟ್ಟ ಸರ್ಕಾರ

    ತಾಳೆಎಣ್ಣೆ ರಫ್ತು ನಿಷೇಧ ಹಿಂದಕ್ಕೆ: ಇಂಡೋನೇಷ್ಯಾ ಮಹತ್ವದ ಘೋಷಣೆ: ಸೋಮವಾರ ಜಾರಿಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts