More

    ತಾಳೆಎಣ್ಣೆ ರಫ್ತು ನಿಷೇಧ ಹಿಂದಕ್ಕೆ: ಇಂಡೋನೇಷ್ಯಾ ಮಹತ್ವದ ಘೋಷಣೆ: ಸೋಮವಾರ ಜಾರಿಗೆ

    ಇಂಡೋನೇಷ್ಯಾ: ಜಗತ್ತಿನ ಅತಿದೊಡ್ಡ ತಾಳೆಎಣ್ಣೆ ಉತ್ಪಾದಕ ರಾಷ್ಟ್ರ ಇಂಡೋನೇಷ್ಯಾ ಸೋಮವಾರದಿಂದ ತಾಳೆಎಣ್ಣೆ ಮೇಲಿನ ರ್ತು ನಿಷೇಧ ಹಿಂಪಡೆಯಲಿದೆ. ಏಪ್ರಿಲ್​ 28ರಿಂದ ಕಚ್ಚಾ ತಾಳೆ ಎಣ್ಣೆ ರ್ತು ನಿಷೇಧ ಜಾರಿಗೆ ಬಂದಿತ್ತು. ಭಾರತಕ್ಕೆ ಇದು ಕೊಂಚ ನಿರಾಳತೆಯನ್ನು ಒದಗಿಸಲಿದೆ. ಜಗತ್ತಿನ ಅತಿದೊಡ್ಡ ತಾಳೆ ಎಣ್ಣೆ ಉತ್ಪಾದಕ ರಾಷ್ಟ್ರ ಇಂಡೋನೇಷ್ಯಾ “ಲೋಕಲ್​ ಫಸ್ಟ್​’ ನೀತಿ ಘೋಷಿಸಿತ್ತು. ಇದರಂತೆ, ತಾಳೆ ಎಣ್ಣೆ ರ್ತು ನಿಷೇಧ ಜಾರಿಗೊಳಿಸಿತ್ತು.

    ವರ್ಚುವಲ್​ ಆಗಿ ದೇಶವನ್ನು ಉದ್ದೇಶಿಸಿ ಮಾತನಾಡಿದ ಇಂಡೋನೇಷ್ಯಾ ಅಧ್ಯಕ್ಷ ಜೋಕೋ ವಿಡೋಡಿ ಕಚ್ಚಾ ತಾಳೆ ಎಣ್ಣೆ ರ್ತು ನಿಷೇಧ ಹಿಂಪಡೆಯುತ್ತಿರುವುದಾಗಿ ಘೋಷಿಸಿದರು. ದೇಶದ ಬಳಕೆಗೆ ಬೇಕಾದ ಖಾದ್ಯ ತೈಲ ದಾಸ್ತಾನು ನಿಶ್ಚಿತ ಪ್ರಮಾಣಕ್ಕಿಂತ ಹೆಚ್ಚು ಸಂಗ್ರಹವಾಗಿದೆ. ಹೀಗಾಗಿ ರ್ತು ನಿಷೇಧ ಹಿಂಪಡೆಯಲು ತೀರ್ಮಾನಿಸಲಾಗಿದೆ ಎಂದು ಅವರು ವಿವರಿಸಿದರು.

    ಖಾದ್ಯತೈಲ ಭಾರತದ ಅವಲಂಬನೆ ಪ್ರಮಾಣ
    ಇಂಡೋನೇಷ್ಯಾದಿಂದ ಭಾರತವು ಪ್ರತಿ ತಿಂಗಳು 4 ದಶಲಕ್ಷ ಟನ್​ ತಾಳೆ ಎಣ್ಣೆ ಆಮದು ಮಾಡಿಕೊಳ್ಳುತ್ತದೆ. ಭಾರತಕ್ಕೆ ತಾಳೆ ಎಣ್ಣೆ ಆಮದು ಪ್ರಮಾಣ ಏಪ್ರಿಲ್​ನಲ್ಲಿ 6 ಲಕ್ಷ ಟನ್​ಗೆ ಏರಿದೆ. ಮಾರ್ಚ್​ನಲ್ಲಿ ಇದು 5,39,793 ಟನ್​ ಆಗಿತ್ತು. ಮೇ ತಿಂಗಳ ಬೇಡಿಕೆ 6.5 ಲಕ್ಷ ಟನ್​ ಆಗಬಹುದು ಎಂದು ಮುಂಬೈನ ವ್ಯಾಪರೋದ್ಯಮ ಒಂದು ತಿಳಿಸಿದೆ.

    ಯೂಕ್ರೇನ್​ ಬಿಕ್ಕಟ್ಟು ಕಾರಣ
    ರಷ್ಯಾ ಸಮರದ ಕಾರಣ ದೇಶೀಯವಾಗಿ ಖಾದ್ಯ ತೈಲದ ಬೆಲೆ ಏರಿಕೆ ಆಗತೊಡಗಿದೆ. ಇದನ್ನು ತಡೆಗಟ್ಟಲು ಎಲ್ಲ ರಾಷ್ಟ್ರಗಳು ಕೂಡ ತಮ್ಮದೇ ಆದ ಕ್ರಮಗಳನ್ನು ಅನುಸರಿಸತೊಡಗಿವೆ. ಇದರಂತೆ, ಇಂಡೋನೇಷ್ಯಾ ಹೊಸ ತಾಳೆ ಎಣ್ಣೆ ರ್ತು ನೀತಿಯನ್ನು ಪ್ರಕಟಿಸಿತ್ತು.

    ಯಾವುದಕ್ಕೆ ಬಳಕೆ?
    ಭಾರತದಲ್ಲಿ ಇದು ಪ್ರಾಥಮಿಕವಾಗಿ ಅಡುಗೆಗೆ ಬಳಕೆಯಾಗುತ್ತದೆ. ಉಳಿದಂತೆ ಲಿಪ್​ಸ್ಟಿಕ್​ನಿಂದ ಹಿಡಿದು ಐಸ್​ಕ್ರೀಮ್​ ತನಕ ಬಳಕೆಯಾಗುತ್ತದೆ. ತಾಳೆ ಎಣ್ಣೆ ಅಗ್ಗ ಮತ್ತು ಬಹೂಪಯೋಗಿ ಎಂಬ ಕಾರಣಕ್ಕೆ ಬಹಳ ಬೇಡಿಕೆಯನ್ನು ಹೊಂದಿದೆ.

    ಪೂರೈಕೆ ವಿವರ

    ಅಮೆರಿಕದ ಕೃಷಿ ಇಲಾಖೆಯ ದತ್ತಾಂಶ ಪ್ರಕಾರ, 2021ರಲ್ಲಿ ತಾಳೆಎಣ್ಣೆ ಉತ್ಪಾದನೆ 76.5 ದಶಲಕ್ಷ ಟನ್​ ಇದ್ದು, ಇದರಲ್ಲಿ 58% ಇಂಡೋನೇಷ್ಯಾದ್ದು. ಮಲೇಷ್ಯಾದಲ್ಲಿ ಶೇಕಡ 26 ಮತ್ತು ಇತರೆ ರಾಷ್ಟ್ರಗಳ ಪಾಲು ಶೇಕಡ 5 ಮತ್ತು ಇನ್ನೂ ಕಡಿಮೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts