More

    ಚಲಿಸುವ ಬೈಕ್​ ಮೇಲೆಯೇ ರೊಮ್ಯಾನ್ಸ್​: ಚಾ.ನಗರದಲ್ಲಿ ಪ್ರೇಮಿಗಳಿಬ್ಬರ ಹುಚ್ಚಾಟದ ವಿಡಿಯೋ ವೈರಲ್!​

    ಚಾಮರಾಜನಗರ: ಪ್ರೀತಿಯ ವಿಚಾರದಲ್ಲಿ ಕೆಲವೊಂದು ದೃಶ್ಯಗಳನ್ನು ಇಷ್ಟು ದಿನ ಸಿನಿಮಾಗಳಲ್ಲಿ ಮಾತ್ರ ನೋಡುತ್ತಿದ್ದೆವು. ಬೈಕ್​ ಮೇಲೆ ಪ್ರೇಯಸಿಯನ್ನು ಕೂರಿಸಿಕೊಂಡು ರೊಮ್ಯಾನ್ಸ್​ ಮಾಡುವುದು ಸಿನಿಮಾಗಳಲ್ಲಿ ಮಾತ್ರ ಕಾಣ ಸಿಗುತ್ತಿದ್ದವು. ಆದರೆ, ಇಂದಿನ ಕೆಲ ಯುವಕ-ಯುವತಿಯರು ಅದನ್ನು ನಿಜ ಜೀವನದಲ್ಲೂ ಅನುಸರಿಸುತ್ತಿರುವುದಕ್ಕೆ ಈ ಒಂದು ವಿಡಿಯೋ ತಾಜಾ ನಿದರ್ಶನವಾಗಿದೆ.

    ಹೌದು, ಪ್ರೇಮಿಗಳಿಬ್ಬರ ಲವ್ವಿ-ಡವ್ವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಬೈಕ್​ನ​ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿ‌ಯನ್ನು ಕೂರಿಸಿಕೊಂಡು ಬಾಯ್​ಫ್ರೆಂಡ್​ ಜಾಲಿ ರೈಡ್ ಜತೆಗೆ ರೊಮ್ಯಾನ್ಸ್​ ಮಾಡಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ. ಸಾರ್ವಜನಿಕ ಪ್ರದೇಶ ಎಂಬ ಅರಿವು ಇಲ್ಲದೇ ಬೈಕ್​ ಮೇಲೆಯೇ ಪರಸ್ಪರ ಚುಂಬಿಸುವ ಮೂಲಕ ಅಶಿಸ್ತನ್ನು ಮೆರೆದಿದ್ದಾರೆ.

    ಕೆಲವೊಂದಕ್ಕೆ ಗೌಪ್ಯತೆ ಎಂಬುದು ಇರುತ್ತದೆ. ಅದನ್ನು ಸಾರ್ವಜನಿಕರ ಎದುರಲ್ಲೇ ಆ ಚೌಕಟ್ಟು ಮೀರುವುದು ಉದ್ಧಟತನದ ಪರಮಾವಧಿಯೇ ಸರಿ. ಜನರು ಹಾಗೂ ವಾಹನಗಳ ಸಂಚಾರವಿದ್ದರೂ ಡೋಂಟ್ ಕೇರ್ ಎನ್ನದ ಪ್ರೇಮಿಗಳಿಬ್ಬರು ಹಾಡ ಹಗಲಿನಲ್ಲೇ ಬೈಕ್​ ಮೇಲೆ ಚೆಲ್ಲಾಟ ಆಡಿದ್ದಾರೆ. ಚಲಿಸುವ ಬೈಕ್​ ಮೇಲೆಯೇ ಪರಸ್ಪರ ಲಿಪ್​ಲಾಕ್​ ಮಾಡುವ ಮೂಲಕ ರೊಮ್ಯಾನ್ಸ್​ ಮಾಡಿದ್ದಾರೆ. ಈ ದೃಶ್ಯವನ್ನು ಹಿಂಬದಿಯ ಸವಾರರು ತಮ್ಮ ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ. ಪ್ರೇಮಿಗಳ ಈ ಹುಚ್ಚಾಟವನ್ನು ನೋಡಿದ ದಾರಿಹೋಕರು ಮನಸ್ಸಿನಲ್ಲೇ ಬೈದುಕೊಂಡು ತಮ್ಮ ಪಾಡಿಗೆ ಮುಂದೆ ಸಾಗಿದ್ದಾರೆ.

    ಜನರನ್ನೂ ಲೆಕ್ಕಿಸದೇ ಕಿ.ಮೀಟರ್​ಗಟ್ಟಲೇ ಈ ಪ್ರೇಮಿಗಳು ಬೈಕ್​ ಮೇಲೆ ಚೆಲ್ಲಾಟ ಆಡಿದ್ದಾರೆ. ಟ್ಯಾಂಕ್ ಮೇಲೆ ಕುಳಿತಿರುವ ಯುವತಿ, ಪ್ರಿಯಕರನನ್ನು ಬಿಗಿದಪ್ಪಿಕೊಂಡು ಸಾಗುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಪ್ರೇಮಿಗಳ ಈ ಹುಚ್ಚಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದು, ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಪ್ರಶಾಂತ್​ ನೀಲ್​ ತಪ್ಪು ಮಾಡಿದ್ರಾ? KGF-2 ಯಶಸ್ಸಿನ ನಡುವೆಯೇ ಚಿತ್ರತಂಡಕ್ಕೆ ಎದುರಾಯ್ತು ಹೊಸ ಸಂಕಷ್ಟ!

    21ನೇ ವಯಸ್ಸಿಗೆ ಅಮೇಜಾನ್​ ಲಂಡನ್​ನಲ್ಲಿ ಕೆಲಸ ಗಿಟ್ಟಿಸಿದ ಕುವರಿ: ಸಂಬಳ ಕೇಳಿದ್ರೆ ಹುಬ್ಬೇರೋದು ಖಂಡಿತ!

    ಬಗೆದಷ್ಟು ಹೊರ ಬರ್ತಿದೆ PSI ಪರೀಕ್ಷಾ ಅಕ್ರಮ: ಮುನ್ನಾಭಾಯಿ MBBS ಸ್ಟೈಲ್​ನಲ್ಲಿ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts