More

    ದಿನವೊಂದಕ್ಕೆ 5 ಸರಗಳ್ಳತನ ಆದ್ರೆ ದುಡ್ಡಿಗಾಗಿ ಅಲ್ಲ! ಬಂಧಿತ ಖದೀಮನ ಮಾತು ಕೇಳಿ ಪೊಲೀಸರೇ ಶಾಕ್​

    ಹೈದರಾಬಾದ್​: ನಗರದ ಮೂರು ಕಮಿಷನರೇಟ್​ ವ್ಯಾಪ್ತಿಯಲ್ಲಿ ನಿತ್ಯವು ತನ್ನ ಕೈಚಳಕವನ್ನು ತೋರಿಸಿ ಪೊಲೀಸರಿಗೆ ಸಿಗದೇ ಯಾಮಾರಿಸುತ್ತಿದ್ದ ಖತರ್ನಾಕ್​ ಖದೀಮನನ್ನು ಬೇಟೆಯಾಡಲು ಸುಮಾರು 200 ಪೊಲೀಸರು ಹಿಂದೆ ಬಿದ್ದಿದ್ದರು. ಕೊನೆಗೂ ಖದೀಮನನ್ನು ಕಳೆದ ವಾರ ಗುಜರಾತಿನ ಅಹಮದಾಬಾದ್​​ನಲ್ಲಿ ಬಂಧಿಸುವಲ್ಲಿ ಅಲ್ಲಿನ ಪೊಲೀಸರು ಯಶಸ್ವಿಯಾಗಿದ್ದು, ಆತನನ್ನು ಹೈದರಾಬಾದ್​ಗೆ ಕರೆತರಲು ಸಾಕಷ್ಟು ಅಡೆತಡೆಗಳು ಎದುರಾಗಿವೆ. ಇನ್ನು ಖದೀಮ ಹಿನ್ನೆಲೆಯನ್ನು ಕೇಳಿದ ಪೊಲೀಸರು ನಿಜಕ್ಕೂ ಬೆರಗಾಗಿದ್ದಾರೆ.

    ಬಂಧಿತ ಖದೀಮನನ್ನು ಉಮೇಶ್​ ಖತಿಕ್​ ಎಂದು ಗುರುತಿಸಲಾಗಿದೆ. ಸರಗಳ್ಳತನವೇ ಈತನ ಪ್ರವೃತ್ತಿಯಾಗಿತ್ತು. ಆಘಾತಕಾರಿಯೆಂದರೆ ಈತ ದಿನವೊಂದಕ್ಕೆ ಬರೋಬ್ಬರಿ 5 ಚಿನ್ನದ ಸರವನ್ನು ಎಗರಿಸುತ್ತಿದ್ದ. ಪೊಲೀಸ್​ ಮೂಲಗಳ ಪ್ರಕಾರ ಈತನ ಹೆಸರು ಉಮೇಶ್​ ಅಲಿಯಾಸ್​ ಲಾಲೊ ಗುಲಾಬ್ಜಿ ಖತಿಕ್​ ಎಂದು. ಅಪ್ರಾಪ್ತ ವಯಸ್ಸಿನಿಂದಲೇ ಸರಗಳ್ಳತನವನ್ನು ಈತ ಮೈಗೂಡಿಸಿಕೊಂಡಿದ್ದಾನೆ. ಅನೇಕ ಬಾರಿ ಬಂಧನವಾದರೂ ಜಾಮೀನಿನ ಮೇಲೆ ಹೊರಬರುತ್ತಿದ್ದ. ಆದರೂ ತನ್ನ ಕೃತ್ಯವನ್ನು ಮಾತ್ರ ನಿಲ್ಲಿಸುತ್ತಿರಲಿಲ್ಲ. ತನ್ನ ಪತ್ನಿಯ ಪ್ರೀತಿಗಾಗಿ ಸರಗಳ್ಳತನ ಮಾಡುತ್ತಿದ್ದನಂತೆ.

    ಪ್ರತಿ ಬಾರಿಯೂ ಬಹಳ ನಾಜೂಕಾಗಿ ಸರಗಳ್ಳತನ ಮಾಡುತ್ತಿದ್ದ. ನಗರಕ್ಕೆ ಬರುತ್ತಿದ್ದ ತನ್ನನ್ನು ಯಾರು ಟ್ರ್ಯಾಕ್​ ಮಾಡದಂತೆ ಮೊಬೈಲ್​ನಲ್ಲಿನ ಸಿಮ್​ ಕಾರ್ಡ್​ ತೆಗೆದು ಹಾಕುತ್ತಿದ್ದ. ಇದೇ ರೀತಿ ಇದೇ ತಿಂಗಳ 19ರಂದು ಹೈದರಾಬಾದ್​, ಸೈಬರಬಾದ್​ ಮತ್ತು ರಾಚಕೊಂಡ ಪೊಲೀಸ್​ ಕಮಿಷನರೇಟ್​ ವ್ಯಾಪ್ತಿಯಲ್ಲಿ ಒಂದೇ ದಿನ ಐದು ಸರವನ್ನು ಎಗರಿಸಿ, ಪರಾರಿಯಾಗಿದ್ದ.

    ಇದನ್ನು ಸವಾಲಾಗಿ ತೆಗೆದುಕೊಂಡ ಪೊಲೀಸರು ಆತನ ಶೋಧ ಕಾರ್ಯಾಚರಣೆಗೆ ಇಳಿದಾಗ, ಅಷ್ಟರಲ್ಲಾಗಲೇ ಖದೀಮ ಅಹಮದಾಬಾದ್​ ಸೇರಿಕೊಂಡಿದ್ದ. ಸಿಸಿಟಿವಿ ಫುಟೇಜ್​ ಮತ್ತು ಆಧಾರ್​ ಕಾರ್ಡ್​ ಮಾಹಿತಿ ಆಧಾರದ ಮೇಲೆ ಆರೋಪಿಯ ಸುಳಿವು ಹಿಡಿದ ಪೊಲೀಸರು ಆತನ ಬಗ್ಗೆ ಅಹಮದಬಾದ್​ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ, ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಪರಾರಿಯಾಗಿದ್ದ ಆರೋಪದ ಮೇಲೆ ಖತಿಕ್ ನನ್ನು ಅಹಮದಾಬಾದ್​ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

    ಹೈದರಾಬಾದ್ ಪೊಲೀಸರು ಆತನನ್ನು ತಮ್ಮ ವಶಕ್ಕೆ ನೀಡುವಂತೆ ಕೇಳಿಕೊಂಡಾಗ ಅಹಮದಾಬಾದ್ ಪೊಲೀಸರು ಟ್ರಾನ್ಸಿಟ್ ವಾರೆಂಟ್ ಮೇಲೆ ಕರೆದುಕೊಂಡು ಹೋಗಬಹುದು ಎಂದು ಸಲಹೆ ನೀಡಿದ್ದರು. ಆದರೆ ಒಮಿಕ್ರಾನ್ ಪ್ರಕರಣಗಳ ಉಲ್ಲೇಖದ ಹಿನ್ನೆಲೆಯಲ್ಲಿ ಅವರನ್ನು ಕರೆತರಬೇಕೇ? ಎಂಬುದನ್ನು ನಿರ್ಧರಿಸಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. ಮತ್ತೊಂದೆಡೆ ಉಮೇಶ್ ಖತಿಕ್ ವಿರುದ್ಧ ರಾಜಸ್ಥಾನ, ಗುಜರಾತ್, ಕರ್ನಾಟಕದಂತಹ ರಾಜ್ಯಗಳಲ್ಲಿ ಪ್ರಕರಣಗಳಿದ್ದು, ಆ ರಾಜ್ಯಗಳ ಪೊಲೀಸರು ಕೂಡ ಆತನನ್ನು ಬಂಧಿಸಲು ಸಜ್ಜಾಗಿದ್ದಾರೆ. (ಏಜೆನ್ಸೀಸ್​)

    ಒಬ್ಬನ ಹಿಂದೆ ಬಿದ್ದ 200 ಪೊಲೀಸರು! ಕೈಗೆ ಸಿಗದೇ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವ ಈತ ಯಾರು?

    ಒಬ್ಬರು ಪ್ಯಾಂಟ್ ಧರಿಸಿಲ್ಲ, ಮತ್ತೊಬ್ಬರು ಟಾಪ್ ಮರೆತರು! ಹಿಗ್ಗಾಮುಗ್ಗಾ ಟ್ರೋಲ್ ಆದ ಬಾಲಿವುಡ್ ಹಾಟ್ ಬೆಡಗಿಯರು…

    ಮಸೀದಿ ಕೆಡವಿ ಹನುಮ ಮಂದಿರ ಕಟ್ತೀವಿ… ಎಂದು ಪುನರುಚ್ಚರಿಸುತ್ತಲೇ ಬುರ್ಖಾ ನಿಷೇಧಕ್ಕೂ ಆಗ್ರಹಿಸಿದ ಕಾಳಿ ಮಠ ಸ್ವಾಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts