More

    ಬೆಕ್ಕನ್ನು ನೋಡಿದ್ರೆ ದುರಾದೃಷ್ಟ ಅಂದುಕೊಳ್ಳುವವರು ಈ ಸ್ಟೋರಿನಾ ಓದಲೇ ಬೇಕು: 10 ಲಕ್ಷ ಬಂಪರ್​ ಬಹುಮಾನ!

    ದುಬೈ: ಬೆಕ್ಕನ್ನು ನೋಡಿದರೆ ದುರಾದೃಷ್ಟ ಅಂದುಕೊಳ್ಳುವವರು ಈ ಸ್ಟೋರಿನಾ ಓದಲೇ ಬೇಕು. ಅಪಶಕುನ ಎಂಬ ಕುಖ್ಯಾತಿಯನ್ನು ಹೊತ್ತುಕೊಂಡಿರುವ ಬೆಕ್ಕಿನಿಂದಲೇ ಕೆಲ ಹುಡುಗರು ಬರೋಬ್ಬರಿ 10 ಲಕ್ಷ ರೂ. ಬಹುಮಾನ ಪಡೆದುಕೊಂಡಿದ್ದಾರೆ.

    ಮಹಡಿ ಮೇಲಿಂದ ಬೀಳುತ್ತಿದ್ದ ಬೆಕ್ಕನ್ನು ರಕ್ಷಿಸಿದ ಹುಡುಗರ ತಂಡವೊಂದಕ್ಕೆ 10 ಲಕ್ಷ ರೂ. ಬಹುಮಾನ ಒಲಿದು ಬಂದಿದೆ. ಗರ್ಭಿಣಿ ಬೆಕ್ಕೊಂದು ಆಕಸ್ಮಿಕವಾಗಿ ಕಟ್ಟಡದಿಂದ ಬೀಳುವುದನ್ನು ನೋಡಿದ ಹುಡುಗರ ತಂಡವೊಂದು ಅದನ್ನು ಅಗಲವಾದ ಬಟ್ಟೆಯಿಂದ ಹಿಡಿಯುವ ಮೂಲಕ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.

    ಈ ಘಟನೆ ದುಬೈನಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋ ನೋಡಿದ ದುಬೈ ರಾಜ ಶೇಖ್​ ಮೊಹಮ್ಮದ್​ ಬೀಪ್​ ರಶೀದ್​, ಬೆಕ್ಕಿನ ಜೀವವನ್ನು ಕಾಪಾಡಿದ ಹುಡುಗರಿಗೆ 10 ಲಕ್ಷ ರೂ. ಬಹುಮಾನವನ್ನು ಘೋಷಣೆ ಮಾಡಿದ್ದಾರೆ. ಬೆಕ್ಕು ರಕ್ಷಣೆ ಮಾಡಿದ ನಾಲ್ವರು ತಂಡದಲ್ಲಿ ಕೇರಳ ನಿವಾಸಿ ಅಶ್ರಫ್​ ಕೂಡ ಒಬ್ಬರಾಗಿದ್ದಾರೆ. ಅಶ್ರಫ್​ ದುಬೈನಲ್ಲಿ ಸೆಕ್ಯುರಿಟಿ ಗಾರ್ಡ್​ ಆಗಿ ಕೆಲಸ ಮಾಡುತ್ತಿದ್ದಾರೆ.

    ಕಟ್ಟಡದ ಎರಡನೇ ಮಹಡಿಯ ಕೆಳಗೆ ಬೆಕ್ಕು ತೆವಳುತ್ತಿರುವುದನ್ನು ಇಬ್ಬರು ಗಮನಿಸಿದರು. ತಕ್ಷಣ ಒಂದು ಬೆಡ್ ಶೀಟ್ ಹಿಡಿದು ನಿಂತರು. ಕೊನೆಗೆ ಬೆಕ್ಕು ಬೆಡ್​ಶೀಟ್​ ಮೇಲೆ ಬೀಳುವ ಮೂಲಕ ಪ್ರಾಣಾಪಾಯದಿಂದ ಪಾರಾಯಿತು. ಬೆಕ್ಕುನ್ನು ಮಾತ್ರ ಅವರು ಉಳಿಸಲಿಲ್ಲ. ಬೆಕ್ಕು ಗರ್ಭಿಣಿಯಾಗಿರುವುದರಿಂದ ಇನ್ನೂ ಹೊರ ಜಗತ್ತಿಗೆ ಕಾಲಿಡದ ಬೆಕ್ಕಿನ ಕಂದಮ್ಮಗಳನ್ನು ಕಾಪಾಡಿದ್ದಾರೆ.

    ರಕ್ಷಿಸಿದ ನಾಲ್ವರಲ್ಲಿ ಅತೀಬ್​ ಮೆಹ್ಮೂದ್​ (ಪಾಕಿಸ್ತಾನಿ ಸೇಲ್ಸ್​ಮ್ಯಾನ್​), ನಸ್ಸೀರ್​ (ಭಾರತದ ಡ್ರೈವರ್​), ಮೊಹಮ್ಮದ್​ ರಶೀದ್​ (ವಿಡಿಯೋ ಮೇಕರ್​) ಮತ್ತು ಇನ್ನೊಬ್ಬ ಅಶ್ರಫ್​. ನಾಲ್ವರಲ್ಲಿ ಮೂವರು ಒಬ್ಬರಿಗೊಬ್ಬರು ತುಂಬಾ ಪರಿಚಿತರಾಗಿದ್ದಾರೆ. ಅಪಶಕುನ ಎಂದು ಬೈದುಕೊಳ್ಳುವ ಬೆಕ್ಕಿನಿಂದಲೇ ನಾಲ್ವರಿಗೆ ಅದೃಷ್ಟದ ಬಾಗಿಲು ತೆರೆದಿದೆ. (ಏಜೆನ್ಸೀಸ್​)

    ‘ರೇಪ್‌ ಮಾಡೋ ಯೋಚ್ನೆ ಇರ್ಲಿಲ್ಲ… ಮೂರು ದಿನ ಇದೇ ಜಾಗದಲ್ಲಿ ನೋಡಿ ನಾಲ್ಕನೇ ದಿನ ಹೀಗೆ ಮಾಡಿದ್ವಿ’

    ಮೈಸೂರಲ್ಲಿ ಗ್ಯಾಂಗ್​ ರೇಪ್​: ಸಂತ್ರಸ್ತೆಯ ಗೆಳೆಯನ ವಿರುದ್ಧವೇ ಕೇಸ್​? ಸ್ಫೋಟಕ ತಿರುವು ಕೊಟ್ಟ ತಂದೆ-ಮಗನ ನಡೆ

    ಮೈಸೂರು ಗ್ಯಾಂಗ್​ರೇಪ್​ ಕೇಸ್​: ವಿದ್ಯಾರ್ಥಿನಿ ಮೇಲೆ ಅಟ್ಟಾಹಾಸ ಮೆರೆದಿದ್ದ ಕಾಮಾಂಧರು ಸಿಕ್ಕಿಬಿದ್ದಿದ್ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts