More

    ಸಿಎಂ ಮಮತಾ ಬ್ಯಾನರ್ಜಿ ಸ್ವರ್ಧಿಸುತ್ತಿರುವ ಉಪಚುನಾವಣೆಯನ್ನು ರದ್ದು ಮಾಡಲಾಗದು: ಹೈಕೋರ್ಟ್​

    ಕೋಲ್ಕತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸ್ಫರ್ಧಿಸಲಿರುವ ಭವಾನಿಪುರ್​ ಉಪಚುನಾವಣೆಯನ್ನು ರದ್ದು ಮಾಡಲು ಸಾಧ್ಯವಿಲ್ಲ. ಚುನಾವಣೆಯು ನಿಗದಿಯಂತೆ ಗುರುವಾರ ನಡೆಯಲಿದೆ ಎಂದು ಕೋಲ್ಕತ ಹೈಕೋರ್ಟ್​ ತಿಳಿಸಿದೆ.

    ಭವಾನಿಪುರ್​ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಸಲು “ಸಾಂವಿಧಾನಿಕ ತುರ್ತುಸ್ಥಿತಿ”ಯನ್ನು ಉಲ್ಲೇಖಸಿರುವ ಚುನಾವಣಾ ಆಯೋಗದ ವಾದವನ್ನು ಪ್ರಶ್ನಿಸಿ ಹೈಕೋರ್ಟ್​ನಲ್ಲಿ ಪಿಐಎಲ್ ಸಲ್ಲಿಸಲಾಗಿತ್ತು. ಇದಕ್ಕೆ ಸಮರ್ಥನೆ ನೀಡಿದ್ದ ಚುನಾವಣಾ ಆಯೋಗ, ಅರ್ಜಿದಾರರು ಸಾಂವಿಧಾನಿಕ ತುರ್ತುಸ್ಥಿತಿ ಎಂಬ ಪದದ ಅರ್ಥವನ್ನು ತಪ್ಪಾಗಿ ನಿರೂಪಿಸಲು ಪ್ರಯತ್ನಿಸುತ್ತಿದ್ದಾರೆ, ಆದರೆ, ಮತದಾರರ ಮೇಲೆ ಇದು ಯಾವುದೇ ರೀತಿಯ ಪ್ರಭಾವ ಬೀರುವುದಿಲ್ಲ ಎಂದು ಸಮರ್ಥಿಸಿಕೊಂಡಿತ್ತು.

    2011 ಮತ್ತು 2016ರಲ್ಲೇ ಮಮತಾ ಬ್ಯಾನರ್ಜಿಯವರು ಭವಾನಿಪುರ್​ನಿಂದ ಸ್ಫರ್ಧಿಸಿರುವುದರಿಂದ ಕ್ಷೇತ್ರದ ಮೇಲೆ ಅವರಿಗೆ ಹಿಡಿತವಿದೆ. ಮಮತಾ ಅವರ ಹಾದಿಯನ್ನು ಸುಗಮ ಮಾಡಿಕೊಡಲೆಂದು ಟಿಎಂಸಿ (ತೃಣಮೂಲ ಕಾಂಗ್ರೆಸ್​) ಶಾಸಕ ಸೋವಂದೇಬ್ ಚಟ್ಟೋಪಾಧ್ಯಾಯ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಗುರುವಾರ ನಡೆಯುವ ಚುನಾವಣೆಯಲ್ಲಿ ಸಿಎಂ ಉಳಿಸಿಕೊಳ್ಳಬೇಕಾದರೆ ಮಮತಾ ಬ್ಯಾನರ್ಜಿ ಗೆಲ್ಲಲೇ ಬೇಕಿದೆ.

    ಮಮತಾ ವಿರುದ್ಧನ ಬಿಜೆಪಿ ಅಭ್ಯರ್ಥಿ 41 ವರ್ಷದ ಕೋಲ್ಕತ ಹೈಕೋರ್ಟ್​ ಲಾಯರ್​ ಪ್ರಿಯಾಂಕಾ ತೆಬ್ರೆವಾಲ್​ ಕಣಕ್ಕಿಳಿದಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷ ಭರ್ಜರಿ ಬಹುಮತದೊಂದಿಗೆ ಬಂಗಾಳದಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿದಿದೆ. ಮಮತಾ ಬ್ಯಾನರ್ಜಿ ಅವರು 3ನೇ ಅವಧಿಗೆ ಸಿಎಂ ಆಗಿದ್ದಾರೆ. ಆದರೆ, ಕಳೆದ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಲ್ಲಿ ಸುವೆಂಧು ಅಧಿಕಾರಿ ವಿರುದ್ಧ ಸ್ಪರ್ಧಿಸಿದ್ದ ಮಮತಾ ಅವರು ಸೋತಿದ್ದರು.

    ಸೋತರು ತಮ್ಮ ಪಕ್ಷ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮತ್ತೆ ಸಿಎಂ ಆಗಿದ್ದಾರೆ. ಆದರೆ, ತಮ್ಮ ಸಿಎಂ ಸ್ಥಾನವನ್ನು ಖಾಯಂ ಆಗಿ ಉಳಿಸಿಕೊಳ್ಳಬೇಕಾದಲ್ಲಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲೇ ಬೇಕಿದೆ. ಅಕ್ಟೋಬರ್​ 3ರಂದು ಫಲಿತಾಂಶ ಹೊರಬೀಳಲಿದೆ. (ಏಜೆನ್ಸೀಸ್​)

    ಬ್ಲಾಕ್‌ನಲ್ಲಿ ಟಿಕೆಟ್‌ ಮಾರಾಟ: ಇದುವರೆಗೆ ಹೇಳಿರದ ಬಹುದೊಡ್ಡ ಸೀಕ್ರೆಟ್‌ ರಟ್ಟು ಮಾಡಿದ ಚನ್ನಣ್ಣನವರ್‌

    ಉಪ ಚುನಾವಣೆಗೆ ಜೆಡಿಎಸ್ ರೆಡಿ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ

    ಗಂಡಂದಿರನ್ನ ಕಳ್ಕೊಂಡು ತವರಿಗೆ ಬಂದ ಮಗಳ ಕಣ್ಣಿಗೆ ಬಿತ್ತು ತಾಯಿ-ದೊಡ್ಡಪ್ಪನ ಲವ್ವಿಡವ್ವಿ… ಮುಂದಾಗಿದ್ದು ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts