More

    ಥಾಯ್ಲೆಂಡ್​ ನದಿಯಲ್ಲಿ ಸೂಟ್​ಕೇಸ್​ ಪತ್ತೆ: ಬ್ರಿಟಿಷ್​ ವ್ಯಕ್ತಿ-ವೇಶ್ಯೆ ನಡುವಿನ ಭಯಾನಕ ಕತೆ ಇದು!

    ಲಂಡನ್​: ಥಾಯ್ಲೆಂಡ್​ ಮೂಲದ ವೇಶ್ಯೆಯನ್ನು ಆಕೆಯ ತವರಿನಲ್ಲೇ ಹತ್ಯೆ ಮಾಡಿ ಸ್ವದೇಶಕ್ಕೆ ಪರಾರಿಯಾದ ಆರೋಪ ಹೊತ್ತಿರುವ ಬ್ರಿಟಿಷ್​ ಮೂಲದ ವ್ಯಕ್ತಿ, ಹಸ್ತಾಂತರ ಹೋರಾಟದಲ್ಲಿ ಸೋಲನ್ನು ಅನುಭವಿಸಿದ್ದು, ಬ್ಯಾಂಕಾಕ್​ನಲ್ಲಿ ಮುಂದಿನ ವಿಚಾರಣೆ ಎದುರಿಸಬೇಕಿದೆ.

    ಇಂಗ್ಲೆಂಡಡ್​ನ ಸ್ಟೋಕ್​ ಆನ್​ ಟ್ರೆಂಟ್​ ನಿವಾಸಿ ಶ್ಯಾನೆ ಲೂಕರ್​ (51) 2014ರಲ್ಲಿ ಥಾಯ್ಲೆಂಡ್​ ಪ್ರವಾಸ ವೇಳೆ ಕ್ಲಬ್​ ಡ್ಯಾನ್ಸರ್​ ಹಾಗೂ ವೇಶ್ಯೆ ಲಕ್ಸಮಿ ಮೊನೊಚಾಟ್​ (31) ಎಂಬಾಕೆಯನ್ನು ಕೊಂದು, ಆಕೆಯ ಮೃತದೇಹವನ್ನು ಸೂಟ್​ಕೇಸ್​ ಒಂದರಲ್ಲಿ ತುಂಬಿಟ್ಟಿದ್ದನು.

    ಲಕ್ಷಮಿ ನಾಪತ್ತೆಯಾದ ಒಂದು ವಾರದ ಬಳಿಕ ಆಕೆಯ ಮೃತದೇಹ ಥಾಯ್ಲೆಂಡ್​ನ ಕಾಂಚನಬುರಿ ಪ್ರಾಂತ್ಯದಿಂದ 95 ಮೈಲಿ ದೂರದಲ್ಲಿರುವ ನದಿಯೊಂದರಲ್ಲಿ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ಆರೋಪಿ ಲೂಕರ್​​ನನ್ನು 2017ರಲ್ಲಿ ಇಬಿಜಾ ರಾಷ್ಟ್ರದಲ್ಲಿ ಬಂಧಿಸಲಾಗಿತ್ತು. ಇಬಿಜಾದಲ್ಲಿ ಆರೋಪಿ ತನ್ನದೆಯಾದ ಸ್ವಂತ ಹೋಟೆಲ್​ ನಡೆಸುತ್ತಿದ್ದ. ಬಂಧನವಾದ ದಿನದಿಂದ ಇಂದಿನವರೆಗೂ ಲೂಕರ್​ ಕಾನೂನು ತಂಡ ಆತನ ಹಸ್ತಾಂತರಕ್ಕಾಗಿ ಹೋರಾಟ ಮಾಡುತ್ತಲೇ ಇದೆ.

    ಲೂಕರ್​ನನ್ನು ಹಸ್ತಾಂತರಿಸಬೇಕೆಂದು ಸ್ಪ್ಯಾನಿಷ್ ಹೈಕೋರ್ಟ್ ತೀರ್ಪು ನೀಡಿತು. ಆದರೆ ವಕೀಲರು ಸರಣಿ ಮೇಲ್ಮನವಿಗಳನ್ನು ಸಲ್ಲಿಸಿದರು. ಇದೀಗ ಹೊಸ ತೀರ್ಪು ನೀಡಿರುವ ಸ್ಟ್ರಾಸ್​ಬರ್ಗ್​ನಲ್ಲಿರುವ ಮಾನವ ಹಕ್ಕುಗಳ ಯುರೋಪಿಯನ್​ ನ್ಯಾಯಾಲಯ, ಲೂಕರ್​ ಥಾಯ್ಲೆಂಡ್​ ವಿಚಾರಣೆ ಎದುರಿಸಲೇಬೇಕೆಂದು ಆದೇಶಿಸಿದೆ.

    ಬ್ಯಾಂಕಾಕ್‌ನಲ್ಲಿ ರಾಯಲ್ ಥಾಯ್ಲೆಂಡ್​ ಪೊಲೀಸರು ಸಲ್ಲಿಸಿರುವ ವ್ಯಾಪಕ ಕೇಸ್ ಫೈಲ್‌ಗಳನ್ನು ಉಲ್ಲೇಖಿಸಿದ ನ್ಯಾಯಾಲಯ, ಲಕ್ಷಾಮಿಯನ್ನು ಕೊಲೆ ಮಾಡಿದ ವ್ಯಕ್ತಿ ಲುಕರ್ ಎಂದು ದಾಖಲೆಗಳು ಸಾಬೀತುಪಡಿಸುತ್ತವೆ ಎಂದು ನ್ಯಾಯಾಲಯ ಹೇಳಿದೆ.

    ಇದಕ್ಕೆ ಪ್ರತಿಯಾಗಿ ಲೂಕರ್​ಗೆ ಮರಣದಂಡನೆ ನೀಡುವುದಾಗಲಿ ಅಥವಾ ದುರುಪಯೋಗಪಡಿಸಿಕೊಳ್ಳುವುದಿಲ್ಲ ಎಂದು ಥಾಯ್ಲೆಂಡ್​ ಅಧಿಕಾರಿಗಳು ಇಯು ಕಾನೂನಿನಡಿಯಲ್ಲಿ ಅಗತ್ಯವಾದ ಭರವಸೆಗಳನ್ನು ನೀಡಿದ್ದಾರೆಂದು ವರದಿಯಾಗಿದೆ.

    ಘಟನೆಯ ವಿವರಣೆಗೆ ಬರುವುದಾದರೆ, ಆರೋಪಿ ಲೂಕರ್​ ಪ್ರವಾಸದ ವೇಲೆ ಥಾಯ್ಲೆಂಡ್​ನ ನಾನಾ ಪ್ಲಾಜಾದ ಹಾಟ್ ಲಿಪ್ಸ್ ಬಾರ್‌ನಲ್ಲಿದ್ದನು. ಈ ವಿಶೇಷ ಪ್ರದೇಶವು ಪ್ರತಿದಿನ ರಾತ್ರಿ ನೂರಾರು ವಿದೇಶಿ ಪುರುಷರನ್ನು ಮದ್ಯ ಮತ್ತು ಲೈಂಗಿಕತೆಯ ಹುಡುಕಾಟದಲ್ಲಿ ಆಕರ್ಷಿಸುತ್ತದೆ. ಲಕ್ಷಾಮಿಯನ್ನು ಹಣ ಕೊಟ್ಟು ಬುಕ್​ ಮಾಡಿದ್ದ ಲೂಕರ್​ ಆಕೆಯೊಂದಿಗೆ ಸೆಕ್ಸ್​ ನಡೆಸಿ, ಬರ್ಬರವಾಗಿ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಆದರೆ, ಏಕೆ ಕೊಲೆ ಮಾಡಿದ ಎಂಬುದು ಇನ್ನು ಪ್ರಶ್ನೆಯಾಗಿಯೇ ಉಳಿದಿದೆ.

    ಲಕ್ಷಾಮಿ ಕೊಲೆಯ ಬಳಿಕ ಶಂಕಿತ ಆರೋಪಿಯಾಗಿದ್ದ ಲೂಕರ್​, ಆಕೆ ಲಕ್ಷಾಮಿ ಯಾರೆಂದು ಗೊತ್ತಿಲ್ಲ. ಆದರೆ, ಆಕೆಯೊಂದಿಗೆ ಸಮಯ ಕಳೆದಿದ್ದಾಗಿ ಒಪ್ಪಿಕೊಂಡಿದ್ದ. ಆದರೆ, ಆಕೆಯನ್ನು ಕೊಲೆ ಮಾಡಿಲ್ಲ ಎಂದು ಹೇಳಿದ್ದ. ಹೀಗಿರುವಾಗ ಥಾಯ್ಲೆಂಡ್​ ರಾಜಧಾನಿ ಬ್ಯಾಂಕಾಕ್​ನಿಂದ 70 ಮೈಲಿ ದೂರದಲ್ಲಿರುವ ಕಾಂಚನಬರಿ ಸಮೀಪದ ಮೇ ಕಾಂಗ್​ ನದಿಯಲ್ಲಿ ಸೂಟ್​ಕೇಸ್​ ಒಂದರಲ್ಲಿ ಲಕ್ಷಾಮಿ ಮೃತದೇಹ 2014ರ ನವೆಂಬರ್​ 9ರಂದು ಪತ್ತೆಯಾಗಿತ್ತು.

    ಆರಂಬಂಧಲ್ಲಿ ಆರೋಪಿ ಗುರುತು ಕಷ್ಟವಾಗಿತ್ತು. ಆದರೆ, ಥಾಯ್ ಬ್ಲಾಗ್ ಸ್ಟಿಕ್ಬಾಯ್ ನೀಡಿದ ಒಂದೇ ಒಂದು ಸುಳಿವಿನಿಂದ, ಲೂಕರ್​ನ ಇಡೀ ಮಾಹಿತಿಯನ್ನು ಕಲೆಹಾಕಲಾಗಿತ್ತು. ಅಷ್ಟರಲ್ಲಾಗಲೇ ಆತ ಊರು ಬಿಟ್ಟಿದ್ದ. ಲಕ್ಷಾಮಿ ಸಂಬಂಧಿಸಿದ ಪ್ರದೇಶವೊಂದರ ಸಿಸಿಟಿವಿ ಕ್ಯಾಮೆರಾದಲ್ಲೂ ಲೂಕರ್​ ಸೆರೆಯಾಗಿದ್ದು, ಘಟನೆಗೆ ಮತ್ತಷ್ಟು ಪುಷ್ಠಿ ನೀಡಿತು. ಬಳಿಕ ಆತನ ಡಿಎನ್​ಎ ಪರೀಕ್ಷೆ ನಡೆಸಿದಾಗ ಆತನೇ ಕೊಲೆಗಾರ ಎಂಬ ಅನುಮಾನ ದೊಡ್ಡದಾಯಿತು. ಬಳಿಕ 2017ರಲ್ಲಿ ಆತನನ್ನು ಇಬಿಜಾದಲ್ಲಿ ಬಂಧಿಸಿ ಥಾಯ್ಲೆಂಡ್​ಗೆ ಕರೆತರಲಾಗಿತ್ತು.

    ಅಂದಿನಿಂದ ಆರೋಪಿಯ ಕಾನೂನು ತಂಡ ಹಸ್ತಾಂತರ ಸಂಬಂಧ ಹೋರಾಟ ನಡೆಸುತ್ತಲೇ ಬಂದಿತ್ತು. ಆದರೆ, ಸಾಕ್ಷ್ಯಾಧಾರಗಳು ಲೂಕರ್​ ವಿರುದ್ಧ ಇದ್ದಿದ್ದರಿಂದ ಇದೀಗ ಥಾಯ್ಲೆಂಡ್​ ನ್ಯಾಯಾಲಯವನ್ನು ಎದುರಿಸಲೇಬೇಕೆಂದು ನಲ್ಲಿರುವ ಮಾನವ ಹಕ್ಕುಗಳ ಯುರೋಪಿಯನ್​ ನ್ಯಾಯಾಲಯ ಆದೇಶಿಸಿದೆ. (ಏಜೆನ್ಸೀಸ್​)

    ರೈಲಿನಲ್ಲಿ 21 ವರ್ಷದ ಯುವತಿಯ ಬರ್ಬರ ಹತ್ಯೆ! ಅಪ್ಪನನ್ನು ಜೈಲಿನಿಂದ ಬಿಡಿಸಲು ಹೊರಟವಳ ಬದುಕೇ ಅಂತ್ಯ

    ಚಾಮರಾಜನಗರದಲ್ಲಿ ಘೋರ ದುರಂತ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ, ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

    ಬೆಚ್ಚಿಬೀಳಿಸಿದ್ದ ಬಾಂಗ್ಲಾ ಯುವತಿ ಗ್ಯಾಂಗ್‌ ರೇಪ್‌: ಗುಪ್ತಾಂಗಕ್ಕೆ ಬಾಟ್ಲಿ ತುರುಕಿ ವಿಕೃತಿ ಮೆರೆದಿದ್ದವ ಇವನೇ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts