More

    ಸಾಧನೆ ಮಾಡ್ಬೇಕು ಅಂತ ಮನೆ ಬಿಟ್ಟು ಹೋಗಿ ಅಡ್ಡದಾರಿ ಹಿಡಿದಿದ್ದ ಮಾರಿಮುತ್ತು ಮೊಮ್ಮಗಳ ಜೀವನ ಬದಲಾಗಿದ್ಹೇಗೆ?

    ಬೆಂಗಳೂರು: ‘ಬಿಗ್​ ಬಾಸ್​ ಒಟಿಟಿ ಕನ್ನಡ’ದ ಮೊದಲ ಸೀಸನ್​ ಆರಂಭವಾಗಿ ಇಂದಿಗೆ ಮೂರು ದಿನಗಳು ಕಳೆದಿವೆ. ಈಗಾಗಲೇ ವೀಕ್ಷಕರಿಗೆ 16 ಸ್ಪರ್ಧಿಗಳ ಪರಿಚಯವಾಗಿದೆ. ಬಿಗ್​ಬಾಸ್​ ಕರ್ಟನ್​ ರೈಸರ್​ ಕಾರ್ಯಕ್ರಮದ ಬಳಿಕ ಮನೆಯೊಳಗೆ ಸ್ಪರ್ಧಿಗಳ ಮೊದಲ ದಿನವೇ ತಮ್ಮ ಕಹಿ ನೆನಪುಗಳನ್ನು ಹಂಚಿಕೊಂಡರು.

    ಸ್ಪರ್ಧಿಗಳಲ್ಲಿ ಒಬ್ಬರಾದ ಜಯಶ್ರೀ ಆರಾಧ್ಯ ಒಮ್ಮೆ ಮನೆಯನ್ನು ಬಿಟ್ಟು ಓಡಿ ಹೋಗಿದ್ದಾಗಿ ಸಹ ಸ್ಪರ್ಧಿಗಳ ಎದುರು ತೆರೆದಿಟ್ಟರು. ಕುಟುಂಬದ ಸದಸ್ಯರ ಚುಚ್ಚು ಮಾತುಗಳನ್ನು ಸಹಿಸಲಾರದೇ ಒಮ್ಮೆ ನಾನು ಮನೆ ಬಿಟ್ಟು ಓಡಿ ಹೋಗಿದ್ದೆ. ನಾನು ದ್ವಿತೀಯ ಪಿಯುಸಿ ಡ್ರಾಪೌಟ್​. ನನ್ನ ಜೀವನದಲ್ಲಿ ಯಶಸ್ವಿಯಾಗದಿದ್ದಕ್ಕೆ ಕುಟುಂಬದ ಸದಸ್ಯರು ನನ್ನನ್ನು ಆಗಾಗ ಹೀಯಾಳಿಸುತ್ತಿದ್ದರು. ಅದನ್ನು ಸಹಿಸಲಾರದೇ ನಾನು ಮನೆ ಬಿಟ್ಟು ಹೋಗುವ ನಿರ್ಧಾರ ಮಾಡಿದ್ದೆ.

    ಮನೆ ಬಿಟ್ಟು ಹೋಗಿ ಏನಾದರೂ ಸಾಧನೆ ಮಾಡಬೇಕೆಂದುಕೊಂಡಿದ್ದೆ. ಆದರೆ, ನಂತರದ ದಿನಗಳಲ್ಲಿ ನನ್ನ ನಿರ್ಧಾರವೇ ನನಗೆ ಮುಳುವಾಯಿತು. ನಾನು ಜೂಜಾಟಕ್ಕೆ ದಾಸಳಾದ್ದರಿಂದ ಎಲ್ಲವನ್ನು ಕಳೆದುಕೊಂಡೆ. ಆದರೆ, ಕೆಟ್ಟ ದಿನಗಳ ಕರಗಿ ಹೋಗಿ ಒಳ್ಳೆಯ ದಿನಗಳು ಸಹ ನನ್ನ ಬಾಳಲ್ಲಿ ಬಂದಿತು. ಸಮಯ ಕಳೆದಂತೆ ಉದ್ಯಮಿಯಾಗಿ ಬದಲಾದೆ ಮತ್ತು ಪ್ರಸ್ತುತ ತನ್ನ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.

    ನನ್ನ ಪಾಲಕರನ್ನು ನಾನು ಮರಳಿ ಸೇರಿದ್ದೇನೆ. ನನ್ನ ಕುಟುಂಬದಲ್ಲಿ ಸಂಪಾದಿಸುವ ಏಕೈಕ ಮಹಿಳೆಯಾಗಿದ್ದು, ತಂದೆ ತಾಯಿ ಮತ್ತು ಅಣ್ಣನನ್ನು ನಾನು ನೋಡಿಕೊಳ್ಳುತ್ತಿದ್ದೇನೆ ಎಂದು ಜಯಶ್ರೀ ಆರಾಧ್ಯ ಬಿಗ್​ಬಾಸ್​ ಒಟಿಟಿ ವೇದಿಕೆಯಲ್ಲಿ ಹೇಳಿಕೊಂಡರು.

    ಕನ್ನಡ ಬಿಗ್ ಬಾಸ್ ಚೊಚ್ಚಲ ಓಟಿಟಿ (OTT) ಸೀಸನ್​ನಲ್ಲಿ 12ನೇ ಸ್ಪರ್ಧಿಯಾಗಿ ಜಯಶ್ರೀ ಆರಾಧ್ಯ, ಕನ್ನಡ ಕೆಲವು ಸಿನಿಮಾಗಳಲ್ಲಿ ನಟಿ ಪರಿಚಿತವಾಗಿರುವ ಮಾರಿಮುತ್ತು ಅವರ ಮೊಮ್ಮಗಳು ಕೂಡ ಹೌದು. ಉದ್ಯಮ ಮಾತ್ರವಲ್ಲದೆ, ಜಯಶ್ರೀ ಕಲಾವಿದೆಯಾಗಿಯು ಗುರುತಿಸಿಕೊಂಡಿದ್ದಾರೆ.

    ಸ್ಪರ್ಧಿಗಳ ಪಟ್ಟಿ ಈ ಕೆಳಕಂಡಂತಿದೆ
    ನಟರಾದ ರಾಕೇಶ್ ಅಡಿಗ, ಚೈತ್ರಾ ಹಳ್ಳಿಕೇರಿ, ಸಾನಿಯಾ ಅಯ್ಯರ್, ರೂಪೇಶ್ ಶಟ್ಟಿ, ಅರ್ಜುನ್ ರಮೇಶ್, ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್, ಪತ್ರಕರ್ತ ಸೋಮಣ್ಣ ಮಾಚಿಮಾಡ, ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗಿರುವ ಸೋನು ಶ್ರೀನಿವಾಸ ಗೌಡ, ಸ್ಪೂರ್ತಿ ಗೌಡ, ಕಿರಣ್ ಯೋಗೇಶ್ವರ್, ಲೋಕೇಶ್, ಉದಯ್ ಸೂರ್ಯ, ಅಕ್ಷತಾ ಕುಕ್ಕಿ, ಜಶ್ವಂತ್-ನಂದು ಮತ್ತು ಜಯಶ್ರೀ ಆರಾಧ್ಯ ಸ್ಪರ್ಧಿಗಳಾಗಿ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

    ನನ್ನ ಲೈಂಗಿಕ ಜೀವನ ಆಸಕ್ತಿಕರವಾಗಿಲ್ಲದಿರಬಹುದು! ಕರಣ್​ ಜೋಹರ್​ಗೆ ಟಾಂಗ್​ ಕೊಟ್ಟ ತಾಪ್ಸಿ ಪನ್ನು

    ಕಮಲ್​ ಹಾಸನ್​ ವಿರುದ್ಧ ಗಂಭೀರ ಆರೋಪ ಮಾಡಿದ ಖ್ಯಾತ ಕಿರುತೆರೆ ಕಲಾವಿದೆ: ಅಭಿಮಾನಿಗಳಿಗೆ ಶಾಕ್​!

    ಖಾಸಗಿ ವಿಡಿಯೋ ಲೀಕ್ ಆಗಿದ್ದು ಹೇಗೆ? ಬಿಗ್​ ಬಾಸ್​ ಮನೆಯಲ್ಲಿ ಕಣ್ಣೀರಿಡುತ್ತಲೇ ವಿವರಿಸಿದ ಸೋನು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts