More

    ವಿದ್ಯುತ್ ಸಂಪರ್ಕ ಕಲ್ಪಿಸಲು 90 ಸಾವಿರ ರೂ. ಲಂಚ: ಎಸಿಬಿ ಬಲೆಗೆ ಬಿದ್ದ ಬೆಸ್ಕಾಂ ನೌಕರ

    ಬೆಂಗಳೂರು: ರಾಜ್ಯ ಕೊಳಚೆ ನಿರ್ಮೂಲನ ಮಂಡಳಿ ವತಿಯಿಂದ ಕೊಟ್ಟಿರುವ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು 90 ಸಾವಿರ ರೂ. ಲಂಚ ಸ್ವೀಕರಿಸಿದ ಬೆಸ್ಕಾಂ ನೌಕರ, ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಸೆರೆಸಿಕ್ಕಿದ್ದಾನೆ.

    ಶ್ರೀರಾಂಪುರ ವಾರ್ಡ್ ಬೆಸ್ಕಾಂ ಲೈನ್‌ಮನ್/ಮೀಟರ್ ರೀಡರ್ ಮಂಜುನಾಥನ್ ಬಂಧಿತ ನೌಕರ.

    ಶ್ರೀರಾಂಪುರದ ಸ್ವತಂತ್ರಪಾಳ್ಯ ನಿವಾಸಿ, ಕೊಳಚೆ ನಿರ್ಮೂಲನ ಮಂಡಳಿ ವತಿಯಿಂದ ಹೊಸದಾಗಿ ಮನೆ ಕಟ್ಟಿಸಿಕೊಂಡಿದ್ದರು. ಮನೆಗೆ ಹೊಸ ವಿದ್ಯುತ್ ಮೀಟರ್ ಮತ್ತು ಆರ್‌ಆರ್ ನಂಬರ್ ಪಡೆಯಲು ಶ್ರೀರಾಂಪುರ ಬೆಸ್ಕಾಂ ಕಚೇರಿಗೆ ಅರ್ಜಿ ಸಲ್ಲಿಸಿ ಮಂಜುನಾಥನ್‌ನನ್ನು ಸಂಪರ್ಕ ಮಾಡಿದ್ದರು. ವಿದ್ಯುತ್ ಸೇವೆ ಒದಗಿಸಲು ಲೈನ್‌ಮನ್ 80 ಸಾವಿರ ರೂ. ಲಂಚವನ್ನು ಪಡೆದಿದ್ದರು. ಆದರೂ ಮತ್ತೆ 10 ಸಾವಿರ ರೂ. ಕೊಟ್ಟರೇ ವಿದ್ಯುತ್ ಸಂಪರ್ಕ ಕೊಡುವುದಾಗಿ ಹೇಳಿದ್ದರು.

    ನೊಂದ ಅರ್ಜಿದಾರ, ಈ ಕುರಿತು ಬೆಂಗಳೂರು ನಗರ ಎಸಿಬಿ ಕಚೇರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು, ಟ್ರ್ಯಾಪ್ ಕಾರ್ಯಾಚರಣೆಗೆ ಕೈಗೊಂಡಿದ್ದರು. ಆರೋಪಿ ಮಂಜುನಾಥನ್, 10 ಸಾವಿರ ರೂ. ಲಂಚ ಪಡೆಯುವಾಗ ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

    ಒಳ್ಳೆಯ ಕಥೆ ಸಿಕ್ಕರೆ ಕನ್ನಡದಲ್ಲೂ ನಟಿಸ್ತೀನಿ: ಪುಷ್ಪ ಗುಂಗಲ್ಲಿ ಶ್ರೀವಲ್ಲಿ ರಶ್ಮಿಕಾ ಜತೆ ಮಾತುಕತೆ

    ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಇಂದು ಭಾರತ-ಪಾಕ್ ಕಾದಾಟ

    ಆನಗೆ ಪುಷ್ಪಾ ಪೈಪೋಟಿ: ಎರಡೂ ಸಿನಿಮಾ ಒಂದೇ ದಿನ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts