More

    ವಿದ್ಯಾರ್ಥಿಗಳಿಗೆ ಅಶ್ಲೀಲ ವಿಡಿಯೋಗಳನ್ನು ಕಳಿಸಿದ ಆರೋಪ: ಉಪನ್ಯಾಸಕನ ವಿರುದ್ಧ FIR, ಕಾಲೇಜಿನಿಂದ ಸಸ್ಪೆಂಡ್​

    ಬೆಂಗಳೂರು: ವಿದ್ಯಾರ್ಥಿಗಳಿಗೆ ಅಶ್ಲೀಲ ವಿಡಿಯೋಗಳನ್ನು ಕಳಿಸಿದ ಆರೋಪ ಹೊತ್ತಿರುವ ಉಪನ್ಯಾಸಕ ಮಧುಸೂಧನ್​ನನ್ನು ನಿಟ್ಟೆ ಮೀನಾಕ್ಷಿ ಶಿಕ್ಷಣ ಸಂಸ್ಥೆ ಅಮಾನತು ಮಾಡಿದೆ. ಆರೋಪಿ ವಿರುದ್ಧ ಎಫ್​ಐಆರ್ ದಾಖಲಾದ ಹಿನ್ನಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

    ಪ್ರಕರಣದ ವಿವರಣೆಗೆ ಬರುವುದಾದರೆ, ಯಲಹಂಕ ಬಾಗಲೂರು ಕ್ರಾಸ್ ಬಳಿ ಇರುವ ಪ್ರತಿಷ್ಠಿತ ನಿಟ್ಟೆ ಮೀನಾಕ್ಷಿ ಇಂಜಿನಿಯರಿಂಗ್ ಕಾಲೇಜಿನ ಮೆಕಾನಿಕಲ್ ವಿಭಾಗದ ಉಪನ್ಯಾಸಕ ಮಧುಸೂಧನ್ ವಯ್ಯಕ್ತಿಕವಾಗಿ ಅಶ್ಲೀಲ ವಿಡಿಯೋಗಳನ್ನ ವಿದ್ಯಾರ್ಥಿಗಳಿಗೆ ಕಳಿಸಿದ್ದಾರೆ ಎನ್ನಲಾಗಿದೆ.

    ಈ ಬಗ್ಗೆ ಈಶಾನ್ಯ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಎಪ್.ಐಆರ್ ದಾಖಲಾಗಿತ್ತು. ಕೇಂದ್ರ ಸರ್ಕಾರದ ಸೈಬರ್ ಟಿಪ್ ಆಧಾರದ ಮೇಲೆ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ನಿಟ್ಟೆ ಮೀನಾಕ್ಷಿ ಇಂಜನಿಯರಿಂಗ್ ಕಾಲೇಜು‌ ಆಡಳಿತ ಮಂಡಳಿ ಮಧೂಸೂಧನ್​ನನ್ನು ಅಮಾನತು ಮಾಡಿ‌ ಆದೇಶ ಹೊರಡಿಸಿದೆ. ಇದರ ಜೊತೆಗೆ ಕಾಲೇಜಿನ ಎಲ್ಲಾ ದಾಖಲೆಗಳನ್ನ ನೀಡಿ ಹೊರಡುವಂತೆ ಸೂಚನೆ ನೀಡಿದ್ದೇವೆ ಎಂದು ಕಾಲೇಜು ಪ್ರಿನ್ಸಿಪಾಲ್ ನಾಗರಾಜ್ ತಿಳಿಸಿದ್ದಾರೆ.

    ಘಟನೆಯ ಬಗ್ಗೆ ನಿಟ್ಟೆ ಮೀನಾಕ್ಷಿ ಕಾಲೇಜು ಆಡಳಿತ ಮಂಡಳಿ ವಿಷಾದ ವ್ಯಕ್ತಪಡಿಸಿದ್ದು, ಉಪಾನ್ಯಾಸಕ ಈ ರೀತಿ ವಿಡಿಯೋ ಕಳಿಸಿರುವುದು ಗೊತ್ತಿಲ್ಲ. ಈ ಬಗ್ಗೆ ಎಫ್​ಐಆರ್ ದಾಖಲಾದ ತಕ್ಷಣ ಉಪಾನ್ಯಸಕನ ಮೇಲೆ ಕ್ರಮ ಕೈಗೊಂಡಿದ್ದೇವೆ ಅಂತಾ ಪ್ರಿನ್ಸಿಪಾಲ್ ನಾಗರಾಜ್ ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)

    ದೀಪಾವಳಿ ಗಿಫ್ಟ್​: ಈ ರಾಜ್ಯದಲ್ಲಿ ಅ.27ರವರೆಗೆ ಸಂಚಾರ ನಿಯಮ ಉಲ್ಲಂಘಿಸಿದ್ರು ಯಾವುದೇ ದಂಡ ವಿಧಿಸಲ್ಲ!

    ಸ್ನೇಹಿತನ ಮನೆಯಲ್ಲೇ ಚಿನ್ನಾಭರಣ ಕದ್ದು ಎಸ್ಕೇಪ್​ ಆಗಿದ್ದ ಪೊಲೀಸ್​ ಕಾನ್ಸ್​ಟೇಬಲ್​ ಬಂಧನ!

    ಹಿಂದು ಹುಡುಗಿಯನ್ನು ಅಪಹರಿಸಿದ ಆರೋಪಿ ಪರ ತೀರ್ಪು ನೀಡಿದ ಪಾಕ್​ ಕೋರ್ಟ್! ಕಣ್ಣೀರಿಟ್ಟ ಸಂತ್ರಸ್ತೆಯ ಪಾಲಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts