More

    ಬೀದಿ ನಾಯಿಗಳಿಗೆ ಊಟ ಹಾಕಲು ಬಂದ ಮಹಿಳೆಗೆ ಮರ್ಮಾಂಗ ತೋರಿದ ಕಾನ್ಸ್​ಟೇಬಲ್: ಸ್ಥಳದಲ್ಲೇ ಹೈಡ್ರಾಮ

    ಬೆಂಗಳೂರು: ಬೀದಿ ನಾಯಿಗಳಿಗೆ ಊಟ ಹಾಕಲು ಬಂದ ಮಹಿಳೆಯೊಬ್ಬರಿಗೆ ಪೊಲೀಸ್​ ಕಾನ್ಸ್​ಟೇಬಲ್​ ಒಬ್ಬ ತನ್ನ ಮರ್ಮಾಂಗ ತೋರಿ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಈ ಘಟನೆ ಸೋಮವಾರ ರಾತ್ರಿ ಯಲಹಂಕದ ನ್ಯೂಟೌನ್​ನ ಹೌಸಿಂಗ್​ ಬೋರ್ಡ್​ ಬಳಿ ನಡೆದಿದೆ.

    ಅಮೃತಹಳ್ಳಿ ಠಾಣೆಯ ಹೆಡ್​​ಕಾನ್​ಸ್ಟೇಬಲ್ ಚಂದ್ರಶೇಖರ್ ಗಂಭೀರ ಆರೋಪ ಕೇಳಿಬಂದಿದೆ. ಘಟನೆ ಸಂಬಂಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದ್ದು, ಈಶಾನ್ಯ ವಿಭಾಗದ ಡಿಸಿಪಿ ಸಿ. ಕೆ. ಬಾಬಾ ಅವರು ಆರೋಪಿ ಹೆಡ್​ಕಾನ್ಸ್​​ಟೇಬಲ್​ನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

    ಸೋಮವಾರ ರಾತ್ರಿ ಬರ್ತಡೇ ಪಾರ್ಟಿ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಮಾರ್ಗ ಮಧ್ಯೆ ಚಂದ್ರಶೇಖರ್​ ಮೂತ್ರ ವಿಸರ್ಜನೆಗೆಂದು ಬೈಕ್​ ನಿಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಹಿಳೆಯೊಬ್ಬರು ಬೀದಿ ನಾಯಿಗಳಿಗೆ ಊಟ ಕೊಡಲೆಂದು ಹೊರಗೆ ಬಂದಿದ್ದಾರೆ. ಈ ವೇಳೆ ಮಹಿಳೆಯನ್ನು ನೋಡಿದ ಆರೋಪಿ ಕಾನ್ಸ್​ಟೇಬಲ್ ಆಕೆಗೆ​ ಮರ್ಮಾಂಗವನ್ನು ತೋರಿಸಿ, ಅಸಹ್ಯವಾಗಿ ವರ್ತಿಸಿರುವುದಾಗಿ ಆರೋಪಿಸಲಾಗಿದೆ.

    ಅನುಚಿತವಾಗಿ ವರ್ತಿಸಿದ ಕಾನ್ಸ್​ಟೇಬಲ್​ ಮತ್ತು ಮಹಿಳೆಯ ನಡುವೆ ಸ್ಥಳದಲ್ಲೇ ಮಾತಿನ ಚಕಮಕಿ ನಡೆದಿದ್ದು, ಅದನ್ನು ವಿಡಿಯೋ ಮಾಡಿಕೊಂಡಿರುವ ಸ್ಥಳೀಯರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಬೆಂಗಳೂರು ಪೊಲೀಸ್​ ಟ್ವಿಟರ್​ ಖಾತೆಗೆ ಟ್ಯಾಗ್​ ಮಾಡಿದ್ದಾರೆ. ಸ್ಥಳೀಯರು ಬರುತ್ತಿದ್ದಂತೆ ಪಾನಮತ್ತರಾಗಿದ್ದರ ಕಾನ್ಸ್​ಟೇಬಲ್​ ಸ್ಥಳದಲ್ಲೇ ಹೈಡ್ರಾಮ ಮಾಡಿರುವುದು ವಿಡಿಯೋದಲ್ಲಿದೆ.

    ಇಂದು ಪೇದೆಯಿಂದ ಹೆಣ್ಣು ಮಗಳೊಬ್ಬಳು ಕಿರುಕುಳ ಅನುಭವಿಸಿದ್ದಾಳೆ. ಇದನ್ನು ತಡೆಯದಿದ್ದರೆ, ನಾಳೆ ನಿಮ್ಮ ಹೆಣ್ಣು ಮಕ್ಕಳಿಗೂ ಈ ರೀತಿ ಆಗಬಹುದು. ನಾವು ಇದನ್ನು ಬೆಂಗಳೂರು ಪೊಲೀಸರಿಗೆ ತಿಳಿಸಬೇಕಿದೆ. ಪೊಲೀಸರು ಆರೋಪಿ ವಿರುದ್ಧ ಕಠಿಣ ಕ್ರಮವನ್ನು ಖಚಿತಪಡಿಸಬೇಕಿದೆ ಎಂದು ಟ್ವೀಟ್​ ಮೂಲಕ ಮನವಿ ಮಾಡಲಾಗಿತ್ತು. ಅಲ್ಲದೆ, ಸಹೋದ್ಯೋಗಿಗಳನ್ನು ಕರೆತಂದು ನರೆಯವರಿಗೆ ಬೆದರಿಕೆ ಹಾಕಿರುವ ಆರೋಪವಿದ್ದು, ಸಿಸಿಟಿವಿ ದೃಶ್ಯವನ್ನು ನೀಡಲು ನೆರೆಯವರು ಹೆದರುತ್ತಿದ್ದಾರೆ ಎಂದು ಟ್ವೀಟ್​ನಲ್ಲಿ ತಿಳಿಸಲಾಗಿದೆ.

    ಡಿವೋರ್ಸ್​ ಪರಿಹಾರ ನೀಡಲು ದುಬೈ ಪ್ರಧಾನಿಗೆ ಕೋರ್ಟ್​ ಆದೇಶ: ಪರಿಹಾರ ಮೊತ್ತ ಕೇಳಿದ್ರೆ ಬೆರಗಾಗೋದು ಖಂಡಿತ!

    50 ಕೋಟಿ ರೂ. ದೋಚಿದ ಸೆಕೆಂಡ್​ ಹ್ಯಾಂಡ್​ ಐಟಂ ಎಂದ ಟ್ವಿಟ್ಟಿಗನಿಗೆ ಸಮಂತಾ​ ಕೊಟ್ಟ ಉತ್ತರ ಹೀಗಿತ್ತು…

    ದುಬಾರಿ ಆ್ಯಪಲ್ ವಾಚ್​ ಬುಕ್​ ಮಾಡಿದ್ದ ಖ್ಯಾತ ನಟನಿಗೆ ಶಾಕ್​ ಕೊಟ್ಟ ಆನ್​ಲೈನ್​ ಕಂಪನಿ: ಕೋರ್ಟ್​ನಲ್ಲಿ ಕೇಸ್​ ರಿವರ್ಸ್​ ​

    ಸುಳ್ಳು ಸುದ್ದಿ ಜಾಲ ಬಯಲು; 20 ಯೂಟ್ಯೂಬ್ ಚಾನೆಲ್, ಎರಡು ವೆಬ್​ಸೈಟ್ ನಿಷೇಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts