More

    ಆನೇಕಲ್​ ಹೊರವಲಯದಲ್ಲಿ ರೇವ್​ ಪಾರ್ಟಿ: ಅರ್ಧಂಬಂರ್ಧ ಬಟ್ಟೆ ಹಾಕಿ ನಶೆಯಲ್ಲಿ ತೇಲುತ್ತಿದ್ದ ಯುವಕ-ಯುವತಿಯರಿಗೆ ಶಾಕ್​!

    ಬೆಂಗಳೂರು: ಆನೇಕಲ್​ ಹೊರವಲಯದಲ್ಲಿ ರೇವ್​ ಪಾರ್ಟಿ ನಡೆಯುತ್ತಿದ್ದು, ಗಾಂಜಾ ಸೇರಿದಂತೆ ವಿವಿಧ ಡ್ರಗ್ಸ್ ಬಳಕೆಯಾಗುತ್ತಿದೆ. ಡ್ರಗ್ಸ್ ನಶೆಯಲ್ಲಿ ವಿದ್ಯಾರ್ಥಿಗಳು ತೇಲಿ ಹೋಗಿದ್ದು, ಬೆಂಗಳೂರು ಇನ್ನೊಂದು ಉಡ್ತಾ ಪಂಜಾಬ್ ಆಗುತ್ತಿದೆಯಾ ಎಂಬ ಆತಂಕ ಶುರುವಾಗಿದೆ.

    ಆನೇಕಲ್ ಹೊರವಲಯದ ಖಾಸಗಿ ರೆಸಾರ್ಟ್ ಒಂದರ ನಿರ್ಜನ ಪ್ರದೇಶದಲ್ಲಿ ರೇವ್​ ಪಾರ್ಟಿ ನಡೆಯುತ್ತಿದ್ದು, ಅರ್ಧಂಬಂರ್ಧ ಬಟ್ಟೆ ಹಾಕಿರುವ ಯುವಕ-ಯುವತಿಯರು ನಶೆಯಲ್ಲಿ ತೇಲಾಡುತ್ತಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿ ತಿಳಿದು ಮಧ್ಯರಾತ್ರಿಯೇ ಆನೇಕಲ್​ ಪೊಲೀಸರು ದಾಳಿ ಮಾಡಿದ್ದು, ಅನೇಕರನ್ನು ವಶಕ್ಕೆ ಪಡೆದಿದ್ದಾರೆ.

    ಮಧ್ಯರಾತ್ರಿ ಆಪರೇಷನ್ ಹೇಗಿತ್ತು?
    ಮಧ್ಯರಾತ್ರಿ ಪೊಲೀಸ್ ಎಂಟ್ರಿ ಕೊಡುತ್ತಿದ್ದ ಹಾಗೆ ಎದ್ನೋ ಬಿದ್ನೋ ಅಂತಾ ಯುವಕ-ಯುವತಿಯರು ಓಡಿದರು. ಮದ್ಯ ಹಾಗೂ ಡ್ರಗ್ಸ್ ಸೇವಿಸಿ ಅರೆ ನಗ್ನ ಸ್ಥಿತಿಯಲ್ಲಿದ್ದ ಕೆಲವರನ್ನು ಖಾಕಿ ತಮ್ಮ ವಶಕ್ಕೆ ಪಡೆದುಕೊಂಡರು. ರೇವ್ ಪಾರ್ಟಿಯ ಡ್ರಗ್ಸ್ ಜಾಲದಲ್ಲಿ ವಿದ್ಯಾರ್ಥಿಗಳು, ಶ್ರೀಮಂತರ ಮಕ್ಕಳೇ ಹೆಚ್ಚಾಗಿ ಭಾಗಿಯಾಗಿದ್ದಾರೆ. ಇನ್ನು ಡ್ರಗ್ಸ್ ಸೇವಿಸಿ ನಾವು ತಪ್ಪೇ ಮಾಡಿಲ್ಲ‌ ಅಂತಾ ಪೋಸು ಕೊಡುತ್ತಿದ್ದರು. 40 ಕ್ಕೂ ಹೆಚ್ಚು ಜನ ಪಾರ್ಟಿ ಮಾಡುತ್ತಿದ್ದರು. ಸದ್ಯ 11 ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅದರಲ್ಲಿ ಹತ್ತು ಜನ ಯುವಕರು, ಒಬ್ಬ ಯುವತಿ. ಸಾವಿರ ರೂ. ಪಡೆದು ಪಾರ್ಟಿಗೆ ಎಂಟ್ರಿ ಕೊಡುತ್ತಿದ್ದರು. ಪಾರ್ಟಿ ಆಯೋಜನೆ ಮಾಡಿದವರು ತ್ರಯಂಬಕ ಎಂಬ ಮ್ಯೂಸಿಕ್ ಸಂಸ್ಥೆ ಎಂಬ‌ ಮಾಹಿತಿ ಇದೆ.

    ಆನೇಕಲ್​​ನ ತಮ್ಮನಾಯಕನಹಳ್ಳಿಯ ಹಸಿರು ವ್ಯಾಲಿ ರೆಸಾರ್ಟ್​ನಲ್ಲಿ ರೇವ್​ ಪಾರ್ಟಿ ನಡೆದಿದೆ. ತಮ್ಮನಾಯಕನಹಳ್ಳಿ ಆನೇಕಲ್ ಪಟ್ಟಣದಿಂದ ಇಂಡ್ಲವಾಡಿಗೆ ಹೋಗುವ ಮಾರ್ಗ ಮಧ್ಯೆ ಸಿಗುತ್ತದೆ. ಈ ರೆಸಾರ್ಟ್​ ಜೆಡಿಎಸ್ ನಾಯಕರೊಬ್ಬರಿಗೆ ಸೇರಿರುವ ರೆಸಾರ್ಟ್ ಎನ್ನಲಾಗಿದೆ. ರೆಸಾರ್ಟ್ ಒಳಗಿನ ಕಾಡಂಚಿನ ನಿಷೇಧಿತ ಪ್ರದೇಶದಲ್ಲಿ ಪಾರ್ಟಿ ನಡೆಯುತ್ತಿತ್ತು. ನಾಲ್ಕರಿಂದ ಐದು ಜನ ಹುಡುಗಿಯರು ಕೂಡ ಪಾರ್ಟಿಯಲ್ಲಿ ಭಾಗಿಯಾಗಿದ್ದರು. (ಏಜೆನ್ಸೀಸ್​)

    ಇಂದು ದುಬೈನಲ್ಲಿ ಮುಂಬೈ ಇಂಡಿಯನ್ಸ್-ಚೆನ್ನೈ ಸೂಪರ್‌ಕಿಂಗ್ಸ್ ಕಾದಾಟ

    ಇಂದಿನಿಂದ ಐಪಿಎಲ್ ಸೆಕೆಂಡ್ ಇನಿಂಗ್ಸ್, 8 ತಂಡಗಳ ಪ್ಲೇಆಫ್​ ಲೆಕ್ಕಾಚಾರ ಹೇಗಿದೆ ಗೊತ್ತೇ?

    ಬೂಸ್ಟರ್ ಡೋಸ್ ಬೇಕಿಲ್ಲ; ಭಾರತದ ತಜ್ಞರ ಅಭಿಮತ, ಜನವರಿಯಲ್ಲಿ ಮಕ್ಕಳಿಗೂ ಲಸಿಕೆ ಲಭ್ಯ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts