More

    ಹೆಚ್ಚಿನ ಎತ್ತರ ತೋರಿಸಲು PSI ದೇಹದಾರ್ಢ್ಯತೆ ಪರೀಕ್ಷೆಗೆ ವಿಗ್​ ಬಳಕೆ! ಯುವಕರಿಬ್ಬರು ಸಿಕ್ಕಿಬಿದ್ದಿದ್ದೇ ರೋಚಕ

    ಬೆಳಗಾವಿ: ಪಿಎಸ್‌ಐ ದೇಹದಾರ್ಢ್ಯತೆ ಪರೀಕ್ಷೆ ಹಿನ್ನಲೆಯಲ್ಲಿ ತಲೆಗೆ ವಿಗ್‌ ಬಳಕೆ ಮಾಡಿ ನೇಮಕ ಪ್ರಾಧಿಕಾರಕಕ್ಕೆ ಮೊಸಮಾಡಲು ಯತ್ನಿಸಿದ್ದ ಇಬ್ಬರ ಯುವಕರನ್ನು ಬಂಧಿಸಲಾಗಿದೆ.

    ಬಂಧಿತರನ್ನು ಚಿಕ್ಕೋಡಿ ತಾಲ್ಲೂಕಿನ ಜಾಗನೂರ ಮೂಲದ ಬಾಳೇಶ ದುರದುಂಡಿ ಹಾಗೂ ಮೂಡಲಗಿ ತಾಲೂಕಿನ ಕುಲಗೋಡ ಮೂಲದ ಉಮೇಶ ಎನ್(28) ಎಂದು ಗುರುತಿಸಲಾಗಿದೆ.

    ಬೆಳಗಾವಿಯಲ್ಲಿ ಪೊಲೀಸ್ ಸಬ್​ ಇನ್‌ಸ್ಪೆಕ್ಟರ್ ಹುದ್ದೆಗೆ ದೇಹದಾರ್ಢ್ಯತೆ ಪರೀಕ್ಷೆ ನಡೆಯುತ್ತಿತ್ತು. ಇದರಲ್ಲಿ ಭಾಗವಹಿಸಿದ್ದ ಆರೋಪಿಗಳು ಹೆಚ್ಚಿನ ಎತ್ತರ ತೋರಿಸಲು ಪರೀಕ್ಷೆಗೆ ವಿಗ್ ಹಾಕಿಕೊಂಡು ಬಂದಿದ್ದರು. ಅನುಮಾನಗೊಂಡ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಬೆಳಗಾವಿ ತಾಲೂಕಿನ ಮಚ್ಚೆಯ ಕೆಎಸ್‌ಆರ್‌ಪಿ 2ನೇ ಪಡೆಯ ಮೈದಾನದಲ್ಲಿ ಪರೀಕ್ಷೆ ನಡೆಯುತ್ತಿತ್ತು. ಆರೋಪಿ ಬಾಳೇಶ, ವಿಗ್ ಹಾಕಿಕೊಂಡು ಅದರೊಳಗೆ ಥರ್ಮಾಕೋಲ್‌ನ 3 ತುಣುಕುಗಳನ್ನು ಹಾಕಿಕೊಂಡು ಹೆಚ್ಚಿನ ಎತ್ತರ ತೋರಿಸಲು ಯತ್ನಿಸಿದ್ದ. ಮತ್ತೊಬ್ಬ ಆರೋಪಿ ಉಮೇಶ ನಗರದ ಡಿ.ಎ.ಆರ್.ಮೈದಾನದಲ್ಲಿ ನಡೆದ ಫಿಜಿಕಲ್ ಪರೀಕ್ಷೆಯಲ್ಲಿ ವಿಗ್ ಹಾಕಿಕೊಂಡು ಸಿಕ್ಕಿಬಿದ್ದಾನೆ.

    ಇಬ್ಬರ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆ ಹಾಗೂ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

    ವಿಜಯಾನಂದ: ಮೋಷನ್ ಪೋಸ್ಟರ್ ಟೀಸರ್ ಬಿಡುಗಡೆ

    ಮಾಸ್ಟರ್​ ಭೇಟಿಯಾದ ಬ್ಲ್ಯಾಸ್ಟರ್​! ಒಂದೇ ಗಂಟೆಯಲ್ಲಿ 4 ಲಕ್ಷಕ್ಕೂ ಹೆಚ್ಚು ಲೈಕ್ಸ್​, ಫ್ಯಾನ್ಸ್​​ ಕ್ರೇಜಿ ಕಮೆಂಟ್ಸ್​

    ಕಾಬೂಲ್​ನತ್ತ ತಾಲಿಬಾನ್​; ಘಜನಿ ಹೆರಾತ್ ವಶಕ್ಕೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts