More

    ದಿವ್ಯಾ ಉರುಡುಗರ ಕೊನೆಯ ಪ್ರೋಮೋ ನೋಡಿ ಕಲರ್ಸ್​ ಕನ್ನಡ​ ವಿರುದ್ಧ ತಿರುಗಿಬಿದ್ದ ವೈಷ್ಣವಿ ಫ್ಯಾನ್ಸ್​!

    ಬೆಂಗಳೂರು: ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್ 8ನೇ ಆವೃತ್ತಿಯು ಕರೊನಾ ಲಾಕ್​ಡೌನ್​ನಿಂದಾಗಿ 75 ದಿನಗಳಿಗೆ ಮೊಟಕುಗೊಳಿಸುವ ಮೂಲಕ ಕಲರ್ಸ್​ ಕನ್ನಡ ವೀಕ್ಷಕರಿಗೆ ಶಾಕ್​ ನೀಡಿತ್ತು. ಮತ್ತೆ ಶುರುವಾಗುತ್ತೆ ಎಂಬ ಯಾವ ಸುಳಿವು ಇರಲಿಲ್ಲ. ಇದೀಗ ಕರೊನಾ ಲಾಕ್​ಡೌನ್​ ಸಡಿಲವಾಗುತ್ತಿದ್ದಂತೆ ಬಿಗ್​ಬಾಸ್​ ಆರಂಭಕ್ಕೆ ಕ್ಷಣಗಣನೇ ಆರಂಭವಾಗಿದೆ. ಹೌದು. ಇಂದು ಸಂಜೆಯಿಂದಲೇ ಬಿಗ್​ಬಾಸ್ ಎರಡನೇ ಇನ್ನಿಂಗ್ಸ್​ ಆರಂಭಿಸಲಿದೆ.

    ಇಂದು ಸಂಜೆ 12 ಮಂದಿಯನ್ನು ನಿರೂಪಕ ಸುದೀಪ್,​ ಬಿಗ್​ಬಾಸ್​ ಮನೆಗೆ ಕಳುಹಿಸಿಕೊಡಲಿದ್ದಾರೆ. ಆಲ್ಫಾಬಿಕಕಲ್​ ಆರ್ಡರ್​ನಲ್ಲಿ ಸ್ಪರ್ಧಿಗಳು ಮನೆಗೆ ಎಂಟ್ರಿ ನೀಡಲಿದ್ದಾರೆ. ಎರಡನೇ ಇನ್ನಿಂಗ್ಸ್​ ಕುರಿತು ಕಲರ್ಸ್​ ಕನ್ನಡ ವಾಹಿನಿ ತುಂಬಾ ಪ್ರಮೋಷನ್​ ಮಾಡುತ್ತಿದ್ದು, ಕೊನೇ ಸಮಯದಲ್ಲಿ ದಿವ್ಯಾ ಉರುಡುಗ ಅವರ ಪ್ರೋಮೋ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಬಿಗ್​ಬಾಸ್​ ಮನೆಗೆ ಹೋಗಲು ದಿವ್ಯಾ ಸ್ವಂತ ಮನೆಯನ್ನು ಬಿಡುತ್ತಿರುವ ದೃಶ್ಯವಿದೆ.

    ದಿವ್ಯಾ ಉರುಡುಗರನ್ನು ಶೋನಲ್ಲಿ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದರೆ, ಪ್ರೋಮೋ ಬೆನ್ನಲ್ಲೇ ವೈಷ್ಣವಿ ಅಭಿಮಾನಿಗಳು ದಿವ್ಯಾ ಅವರ ಹೊಸ ಪ್ರೋಮೋ ಅನ್ನು ಅಣುಕಿಸಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ ಮಾಡುತ್ತಿದ್ದಾರೆ.

    ದಿವ್ಯಾ ಅವರ ಹೊಸ ಪ್ರೋಮೋ ಮೇಲೆ ವೈಷ್ಣವಿ ಅವರ ಫ್ಯಾನ್ಸ್​ ದಾಳಿ ಮಾಡಿರುವುದು ನೋಡಿದರೆ, ಮುಂದೆ ಮೂರನೇ ಮಹಾಯುದ್ಧ ನಡೆಯುವ ಸಾಧ್ಯತೆ ಇದೆ ಎಂದು ಅಣುಕಿಸಲಾಗಿದೆ. ಅಲ್ಲದೆ, ಬಿಗ್​ಬಾಸ್​ನಲ್ಲಿ ದಿವ್ಯಾ ಉರುಡುಗ ಅವರಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ ಎಂದು ಕಿಡಿಕಾರಿದ್ದು, ದಿವ್ಯಾ ಮತ್ತು ವೈಷ್ಣವಿ ಅಭಿಮಾನಿಗಳ ನಡುವೆ ಕಿತ್ತಾಟ ನಡೆಯುತ್ತಿದೆ.

    ಇನ್ನು ಶೋನಲ್ಲಿ ದಿವ್ಯಾ ಉರುಡುಗ ಮತ್ತು ವೈಷ್ಣವಿ ಮೊದಲ ಇನ್ನಿಂಗ್ಸ್​ನಲ್ಲಿ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದ್ದರು. ಮನೆಯಿಂದ ಹೊರಬಂದ ನಂತರವೂ ಇಬ್ಬರು ಅಪಾರ ಗಮನವನ್ನು ಮತ್ತು ಖ್ಯಾತಿಯನ್ನು ಪಡೆದಿದ್ದು, ಅವರು ಕೂಡ ಇದನ್ನು ನಿರೀಕ್ಷಿಸಿರಲಿಲ್ಲ. ಇದೀಗ ಮತ್ತೆ ಮನೆಗೆ ಎಂಟ್ರಿ ನೀಡುತ್ತಿದ್ದು ಇಬ್ಬರ ಪೈಪೋಟಿ ವೀಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ. (ಏಜೆನ್ಸೀಸ್​)

    ಬಿಬಿಕೆ 2ನೇ ಇನ್ನಿಂಗ್ಸ್​ನಲ್ಲಿ ಈ ಸ್ಪರ್ಧಿಯದ್ದೇ ಹವಾ ಎಂದ ನೆಟ್ಟಿಗರು: ಟ್ರೋಫಿ ಗೆಲುವುದು ಖಚಿತವಂತೆ!

    ಬಿಗ್​ಬಾಸ್​ ಸೀಸನ್​ 8ರ ಎರಡನೇ ಇನ್ನಿಂಗ್ಸ್​ ಎಷ್ಟು ದಿನ? ಇಲ್ಲಿದೆ ಕುತೂಹಲಕರ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts