More

    ಪ್ರಧಾನಿ ಮೋದಿ ಅಧಿಕಾರ ಕೊಟ್ಟ ಬೆನ್ನಲ್ಲೇ ಬಳ್ಳಾರಿಯಲ್ಲಿ ಟಫ್​ ರೂಲ್ಸ್​ ಜಾರಿ: ಹೊರಗೆ ಬಂದ್ರೆ ಬೀಳಬಹುದು ದಂಡ

    ಬಳ್ಳಾರಿ: ಪ್ರಧಾನಿ ನರೇಂದ್ರ ಮೋದಿ ಅವರು ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ಕೊಟ್ಟ ಬೆನ್ನಲ್ಲೇ ಬಳ್ಳಾರಿಯಲ್ಲಿ ನಾಳೆಯಿಂದ ಸಂಪೂರ್ಣ ಲಾಕ್​ಡೌನ್ ಮಾಡುವುದಾಗಿ ಜಿಲ್ಲಾಧಿಕಾರಿ ಪವನ್​ ಮಾಲ್ಪಾಟಿ ಅವರು ತಿಳಿಸಿದ್ದಾರೆ. ​

    ಸುದ್ದಿಗಾರರ ಜತೆ ಮಾತನಾಡಿ ಪವನ್​ ಮಾಲ್ಪಾಟಿ, ನಾಳೆ ಬೆಳಗ್ಗೆಯಿಂದ ಕಠಿಣ ಲಾಕ್​ಡೌನ್​ ಆರಂಭವಾಗಲಿದೆ. ಮುಂದಿನ ಐದು ದಿನಗಳ ಕಾಲ ಕಠಿಣ ‌ಲಾಕ್​ಡೌನ್​ ಮುಂದುವರಿಯಲಿದೆ. ಬೆಳಗ್ಗೆ ಆರು ಗಂಟೆಯಿಂದ ‌ಹತ್ತು ಗಂಟೆವರೆಗೂ ಕೂಡ ಯಾವುದಕ್ಕೂ ಅವಕಾಶ ನೀಡುವುದಿಲ್ಲ. ಮೆಡಿಕಲ್​ಗೆ ಮಾತ್ರ ಅವಕಾಶ ಇರಲಿದೆ. ಕಿರಾಣಿ, ಮಾರುಕಟ್ಟೆ ಸೇರಿದಂತೆ ಯಾವುದಕ್ಕೂ ಅವಕಾಶ ಇರುವುದಿಲ್ಲ ಎಂದಿದ್ದಾರೆ.

    ಹಾಪ್​ಕಾಮ್ಸ್​ ಮತ್ತು ತರಕಾರಿಗೆ ತಳ್ಳೋಗಾಡಿಯಲ್ಲಿ ಮಾತ್ರ ಮಾರಾಟ ಮಾಡಲು ಅವಕಾಶ ನೀಡಲಾಗುವುದು. ಅನಾವಶ್ಯಕವಾಗಿ ಹೊರಗೆ ಬಂದರೆ, ನೂರರಿಂದ ನೂರೈವತ್ತು ರೂಪಾಯಿ ದಂಡ ವಿಧಿಸಲು ನಿರ್ಧಾರ ಮಾಡಲಾಗಿದೆ. ಹೋಮ್ ಕ್ವಾರೈಂಟೈನ್ ಇರುವವರನ್ನು ಕೋವಿಡ್ ಸೆಂಟಡ್​ಗೆ ಸೇರಿಸೋ ವಿಚಾರವನ್ನು ಗಂಭೀರವಾಗಿ ‌ಪರಿಗಣಿಸಿದ್ದೇವೆ ಎಂದು ತಿಳಿಸಿದರು.

    ಇದನ್ನೂ ಓದಿರಿ: ಮಗ ಎಲ್ಲದಕ್ಕೂ ತಾಯಿಯನ್ನೇ ನಾಮಿನಿ ಮಾಡಿ ಮೃತಪಟ್ಟರೆ ಆತನ ಪತ್ನಿಗೆ ಪಾಲು ಸಿಗಲ್ವಾ?

    ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯತಿ ಸದಸ್ಯರಿಂದ ಎಲ್ಲ ರೀತಿಯ ಜನಪ್ರತಿನಿಧಿಗಳ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲು ಪ್ರಧಾನಿ ಮೋದಿ ತಿಳಿಸಿದ್ದಾರೆ. ಆಕ್ಸಿಜನ್ ‌ಮಾನಿಟರ್‌ ಕಮಿಟಿ ಮಾಡಲು ತಿಳಿಸಿದ್ದಾರೆ. ಆಯುಷ್ನ 64 ಆಯುರ್ವೇದ ಔಷಧಿ ತೆಗೆದುಕೊಳ್ಳಲು ತಿಳಿಸಿದ್ದಾರೆ. ಸ್ಥಳೀಯತೆಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳಲು ಮೋದಿ ಹೇಳಿದ್ದಾರೆಂದರು.

    ಬಳ್ಳಾರಿಯಲ್ಲಿ ‌ನಾಳೆಯಿಂದ ಟಫ್ ರೂಲ್ಸ್ ಜಾರಿಯಲ್ಲಿರಲಿದ್ದು, ಮೇ 24ರ ಬೆಳಗ್ಗೆ ಆರು ಗಂಟೆವರೆಗೆ ಕಂಪ್ಲೀಟ್ ಲಾಕ್ಡೌನ್ ‌ಮಾಡಲು‌ ನಿರ್ಧಾರ ಮಾಡಲಾಗಿದೆ. ನಾಳೆ ಮಧ್ಯಾಹ್ನದ ವೇಳೆಗೆ ಜಿಂದಾಲ್ ‌ನಲ್ಲಿರುವ ಸಾವಿರ ಬೆಡ್ ಪೈಕಿ ಮುನ್ನೂರು ಬೆಡ್ ಓಪನ್ ಮಾಡ್ತೇವೆ. ಬಹುತೇಕ ವೈದ್ಯರು ಸಿಬ್ಬಂದಿ ನೇಮಕವಾಗಿದೆ. ಶಕ್ತಿಮೀರಿ ಕರೊನಾ ನಿಯಂತ್ರಣಕ್ಕೆ ಹೋರಾಟ ಮಾಡ್ತಿದ್ದೇವೆ. ಗ್ರಾಮೀಣ ಭಾಗದಲ್ಲಿ ಹೆಚ್ಚು ಹೆಚ್ಚು ಜಾಗೃತಿ ‌ಮೂಡಿಸುವ ಕಾರ್ಯಕ್ರಮ ‌ಮಾಡ್ತೇವೆ ಎಂದು ಪವನ್​ ಮಾಹಿತಿ ನೀಡಿದರು.

    ಲಾಕ್​ಡೌನ್​ ನಿರ್ಧಾರವನ್ನು ಜಿಲ್ಲಾಧಿಕಾರಿಗಳಿಗೆ ಬಿಟ್ಟ ಪ್ರಧಾನಿ ಮೋದಿ

    ಅಜ್ಜಿಯ ಬೌಲಿಂಗ್‌ ಏಟಿಗೆ ಎಲ್ಲವೂ ಕ್ಲೀನ್‌ಬೌಲ್ಡ್‌- ವಿಡಿಯೋ ನೋಡಿ ನೆಟ್ಟಿಗರಿಂದ ಶ್ಲಾಘನೆಗಳ ಸುರಿಮಳೆ

    ಕರೊನಾಗೆ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳ ಹೆಸರಲ್ಲಿ 10 ಲಕ್ಷ ರೂ. ಡೆಪಾಸಿಟ್​! ಸಂಕಷ್ಟಕ್ಕೆ ಮಿಡಿದ ಆಂಧ್ರ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts