ಬಳ್ಳಾರಿ : ಶಿವಮೊಗ್ಗದಲ್ಲಿ ಈಚೆಗೆ ನಡೆದ ಭಾರತೀಯ ವೈದ್ಯಕೀಯ ಸಂಘದ ರಾಜ್ಯಮಟ್ಟದ 2023-24ರ ವಾರ್ಷಿಕ ಕ್ರೀಡಾಕೂಟದಲ್ಲಿ ಬಳ್ಳಾರಿ ವೈದ್ಯರುಗಳ ಪಾರಮ್ಯ ಮೆರೆದಿದ್ದಾರೆ.
ವಿಮ್ಸ್‌ನ ಟ್ರಾಮಾ ಕೇರ್ ಸೆಂಟರ್‌ನ ಅಧೀಕ್ಷಕ ಡಾ.ಶಿವನಾಯ್ಕ ಅವರು ಟೆನಿಸ್ ಸಿಂಗಲ್ಸ್‌ನಲ್ಲಿ ವಿಜೇತರಾಗಿ ಪ್ರಶಸ್ತಿ ಪಡೆದುಕೊಂಡರು.
ಡಾ.ಶಿವನಾಯ್ಕ ಹಾಗೂ ಡಾ.ರಾಜಶೇಖರ ಗೌಡ ನಡುವೆ ನಡೆದ ಫೈನಲ್ ಪಂದ್ಯದಲ್ಲಿ 6-6 ಪಾಯಿಂಟ್‌ಗಳಿಸುವ ಮೂಲಕ ಸಮಬಲ ಸಾಧಿಸಿದ್ದರು.
ನಂತರ ನಡೆದ ಟೈಬ್ರೇಕರ್‌ನಲ್ಲಿ ಶಿವನಾಯ್ಕ ಟ್ರೋಫಿ ತನ್ನದಾಗಿಸಿಕೊಂಡರು. ಇನ್ನು ಡಬಲ್ಸ್‌ನಲ್ಲಿಯೂ ಈ ಇಬ್ಬರು ಬೆಳ್ಳಿ ಪದಕ ಪಡೆದರು.
TAGGED:Ballari