ಸೈಬರ್ ವಂಚಕರಿಂದ ಎಚ್ಚರದಿಂದಿರಿ

blank

ಬಳ್ಳಾರಿ: ದಿನನಿತ್ಯದ ಮೊಬೈಲ್ ಬಳಕೆಯಲ್ಲಿ ವ್ಯವಹರಿಸುವಾಗ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕು. ಅದೇ ರೀತಿ ನಿಮ್ಮ ಸುತ್ತ-ಮುತ್ತಲಿನವರನ್ನು ಎಚ್ಚರಿಕೆಯಿಂದಿರಲು ತಿಳಿಸಬೇಕು ಎಂದು ಬಳ್ಳಾರಿ ವಲಯ ಪೊಲೀಸ್ ಮಹಾನಿರೀಕ್ಷಕ ಬಿ.ಎಸ್.ಲೋಕೇಶ್ ಕುಮಾರ್ ಸಲಹೆ ನೀಡಿದರು.

ನಗರದ ಜಿಪಂ ನಜೀರ್‌ಸಾಬ್ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಶನಿವಾರ ಆಯೋಜಿಸಿದ್ದ ವಂಚನೆ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ‘ಜಾಗೃತ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಮೊಬೈಲ್ ವ್ಯಸನಿಗಳಾಗಿದ್ದು, ಅದರಿಂದ ಎಷ್ಟು ಉಪಯೋಗವಿದೆಯೋ ಅಷ್ಟೇ ದುಷ್ಪರಿಣಾಮವಿದೆ. ಆದ್ದರಿಂದ ಜಾಗರೂಕರಾಗಿ ಬಳಸಬೇಕು ಎಂದರು.

ಸೈಬರ್‌ಜಾಲಕ್ಕೆ ಪ್ರತಿಯೊಬ್ಬರು ಬಲಿಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಅವಶ್ಯಕವಾಗಿದೆ. ಎಐ (ಕೃತಕ ಬುದ್ಧಿಮತ್ತೆ) ಬಂದಾಗಿನಿಂದ ಇನ್ನಷ್ಟು ಬ್ಲಾೃಕ್‌ಮೇಲ್ಗಳು ಹೆಚ್ಚಾಗುತ್ತಿವೆ. ಯುವ ಪೀಳಿಗೆಯು ಸೈಬರ್ ವಂಚಕರಿಂದ ಎಚ್ಚರಿಕೆ ವಹಿಸಿ, ಸುತ್ತಮುತ್ತಲಿನವರನ್ನೂ ಜಾಗೃತಿಗೊಳಿಸಬೇಕು ಎಂದು ತಿಳಿಸಿದರು.

ವಾಹನ, ರಸ್ತೆ ಸುರಕ್ಷತೆ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ವಿದೇಶಗಳಲ್ಲಿ ಹೇಗೆ ಸಂಚಾರಿ ನಿಯಮಗಳನ್ನು ಪಾಲಿಸುತ್ತೇವೆಯೋ, ಅದೇ ರೀತಿಯಾಗಿ ನಮ್ಮ ದೇಶದಲ್ಲಿಯೂ ನಿಯಮಗಳನ್ನು ಪಾಲಿಸಬೇಕು. ಸ್ವಸ್ಥ ವಾತಾವರಣ ನಿರ್ಮಾಣ ಮಾಡಲು ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ. ಪೊಲೀಸ್ ಇಲಾಖೆಯು ರೀಲ್ಸ್ ವೀಡಿಯೋಗಳ ಮೂಲಕ ಸೈಬರ್ ಕ್ರೈಂ ಬಗ್ಗೆ ಸಾಕಷ್ಟು ಜಾಗೃತಿ ನೀಡುತ್ತಿದ್ದರೂ ವಂಚನೆಗೊಳಗಾಗುವುದು ತಪ್ಪುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 3 ಸಾವಿರ ಅಪರಾಧ ಪ್ರಕರಣಗಳು ದಾಖಲಾದರೆ, ಅದರಲ್ಲಿ 2 ಸಾವಿರ ಪ್ರಕರಣಗಳು ಸೈಬರ್ ವಂಚನೆ ಪ್ರಕರಣಗಳಾಗಿವೆ. ಪ್ರಕರಣಗಳನ್ನು ತಡೆಗಟ್ಟಲು ಜಿಲ್ಲಾ ಪೊಲೀಸ್ ಇಲಾಖೆಯು ಜಾಗೃತಿಯ ಮೂಲಕ ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಪೊಲೀಸರು ಮತ್ತು ಸಾರ್ವಜನಿಕರು ಜತೆಗೂಡಿದರೆ ಸಂಭವಿಸುವ ಪ್ರಕರಣಗಳನ್ನು ತಡೆಗಟ್ಟಬಹುದು ಎಂದರು.

ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಜಾಗೃತ್ ವೆಬ್ಸೈಟ್‌ಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆ ನಿಯಮಗಳು, ಮಾದಕ ವಸ್ತುಗಳ ಜಾಗೃತಿ ಮತ್ತು ಪ್ರಕರಣ, ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಹಾಗೂ ಜಾತಿ ನಿಂದನೆ ಪ್ರಕರಣ ದಾಖಲಿಸಲು ಜಿಲ್ಲಾ ಪೊಲೀಸ್ ಇಲಾಖೆಯು ಜಾಗೃತ್ ಎಂಬ ವೆಬ್‌ಸೈಟ್‌ನ್ನು ಸಿದ್ದಪಡಿಸಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಪಾಲಿಕೆ ಮೇಯರ್ ಬಿ.ಶ್ವೇತಾ, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಪಿ.ರವಿಕುಮಾರ್, ಹನುಮಂತ ರೆಡ್ಡಿ, ಏಕನಾಥ ಘೋರ್ಪಡೆ, ಸೇರಿದಂತೆ ಎನ್‌ಜಿಒ ಸಂಘ-ಸಂಸ್ಥೆಗಳ ಮುಖ್ಯಸ್ಥರು, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

TAGGED:
Share This Article

ಋತುಸ್ರಾವದ ಸಮಯದಲ್ಲಿ ಮೊಸರು ಸೇವಸಬಹುದೇ.. ಬೇಡವೇ; ಗೊಂದಲಕ್ಕೆ ಇಲ್ಲಿದೆ ಪರಿಹಾರ | Health Tips

ಮೊಸರು ಅಥವಾ ಉಪ್ಪಿನಕಾಯಿ ತಿನ್ನುವುದರಿಂದ ಋತುಸ್ರಾವದ ಸಮಯದಲ್ಲಿ ಸಮಸ್ಯೆಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಯಾವುದೇ ಆಹಾರವು…

ಉಸಿರಾಟದ ವ್ಯಾಯಾಮ ಗೊರಕೆ ಸಮಸ್ಯೆಗೆ ಪರಿಹಾರ; ಇದು ಸುಳ್ಳೋ-ಸತ್ಯವೋ.. ವೈದ್ಯರು ಹೇಳೋದೇನು? | Health Tips

ನಿದ್ರಿಸುವಾಗ ಗೊರಕೆ ಹೊಡೆಯುವ ವ್ಯಕ್ತಿಗೆ ಮಾತ್ರವಲ್ಲದೆ ಸುತ್ತಮುತ್ತಲಿನವರಿಗೂ ತೊಂದರೆಯ ಅನುಭವವಾಗುತ್ತದೆ. ಸಾಮಾನ್ಯವಾಗಿ ಇದನ್ನು ಲಘುವಾಗಿ ತೆಗೆದುಕೊಳ್ಳಲಾಗುತ್ತದೆ.…

Vastu Tips : ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ!ಸಾಲದ ಸುಳಿಗೆ ಸಿಲುಕುತ್ತೀರಿ..!

Vastu Tips: ದೃಷ್ಟ ಚೆನ್ನಾಗಿದ್ದರೆ ಕೆಲವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಕೆಲವರು  ಐಷಾರಾಮಿ ಜೀವನ ನಡೆಸಲು ಕಷ್ಟಪಡುತ್ತಾರೆ. ಅವರು…