More

    ಬಸವಣ್ಣನಿಗೆ ಹಾಲು ಕುಡಿಸಲು ಹರಿದುಬಂದ ಭಕ್ತರ ದಂಡು: ದೇವಸ್ಥಾನದ ಬಾಗಿಲನ್ನೇ ಮುಚ್ಚಿಸಿದ ಪೊಲೀಸರು!

    ಬಾಗಲಕೋಟೆ: ಜನ ಮರಳೋ ಜಾತ್ರೆ ಮರಳೋ ಅಂತಾರೆ. ಅದಕ್ಕೆ ಪೂರಕವಾದ ಘಟನೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ಶನಿವಾರ (ಮಾ.5) ರಾತ್ರಿ ನಡೆದಿದೆ. ಬಸವಣ್ಣನ ಮೂರ್ತಿ ಹಾಲು ಕುಡಿಯುತ್ತಿದೆ ಎಂಬ ಸುದ್ದಿ ರಾತ್ರೋರಾತ್ರಿ ಹರಡಿ, ತಂಡೋಪ ತಂಡವಾಗಿ ಜನರು ದೇವಸ್ಥಾನದ ಕಡೆ ಹರಿದು ಬರುತ್ತಿದ್ದಾರೆ.

    ಸಾಕಷ್ಟು ಜನರು ದಿಢೀರನೇ ದಾಂಗುಡಿ ಇಡುವುದನ್ನು ನೋಡಿ ಜನರನ್ನು ಚದುರಿಸಿ ದೇಗುಲಗಳಿಗೆ ಬೀಗ ಹಾಕಲಾಗಿದೆ. ಗುಳೇದಗುಡ್ಡದ ಅರಳಿಕಟ್ಟಿ ಬಸವಣ್ಣನ ದೇಗುಲದಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಬಸವಣ್ಣ ಹಾಲು ಕುಡಿಯುತ್ತಿದೆ ಎನ್ನುವ ಸುದ್ದಿ ಹರಡುತ್ತಿದ್ದಂತೆ ಹೆಚ್ಚಿನ ಜನರು ಹಾಲು ಹಿಡಿದುಕೊಂಡು ಬಂದು ಚಮಚದಲ್ಲಿ ಹಾಲು‌ ಕುಡಿಸಲು ಶುರು ‌ಮಾಡಿದರು.

    ಚಮಚದಲ್ಲಿನ ಹಾಲು ಕೆಳಗೆ ಬಿದ್ದರೂ ಬಸವಣ್ಣ ಹಾಲು ಕುಡಿದ ಅಂತಾ ಜನರು ನಂಬುತ್ತಿದ್ದಾರೆ. ಈ ಸುದ್ದಿ ಪಟ್ಟಣಕ್ಕೆ ಹರಡಿ ರಾತ್ರೋ ರಾತ್ರಿ ದೇಗುಲಕ್ಕೆ ಭಕ್ತರು ಲಗ್ಗೆ ಇಡುತ್ತಿದ್ದಾರೆ. ಬಸವಣ್ಣನ ಪವಾಡ ಅಂತಾ ಅದನ್ನು ನೋಡೋಕೆ ಜಮಾಯಿಸುತ್ತಿದ್ದಾರೆ.

    ಬಸವೇಶ್ವರ ದೇಗುಲಗಳಿಗೆ ಜನರು ಹರಿದು ಬರುತ್ತಿದ್ದು, ಸದ್ಯ ದೇಗುಲಗಳನ್ನೇ ಪೊಲೀಸರು ಬಂದ್ ಮಾಡಿಸಿದ್ದಾರೆ. ಅಲ್ಲದೆ, ದೇಗುಲಗಳ ಕಾವಲಿನಲ್ಲಿದ್ದಾರೆ. (ದಿಗ್ವಿಜಯ ನ್ಯೂಸ್​)

    ನೈಋತ್ಯ ರೈಲ್ವೆಗೆ ಕವಚ: ಹೊಸ ತಂತ್ರಜ್ಞಾನ ಅಳವಡಿಕೆಗೆ ಮಾರ್ಗಗಳ ಆಯ್ಕೆ

    ಹೋಟೆಲ್​ನಲ್ಲಿ ಗ್ಯಾಸ್ ಸಿಲಿಂಡರ್​ ಸ್ಫೋಟ; ಏಳು ಸಿಬ್ಬಂದಿಗೆ ಗಂಭೀರ ಗಾಯ…

    ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಸವಶ್ರೀ ಪ್ರಶಸ್ತಿ ಪ್ರದಾನ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts