More

    ಕ್ರೀಡಾಸ್ಫೂರ್ತಿ ನಿಮ್ಮಿಂದ ಕಲಿಯಬೇಕಿಲ್ಲ ; ವಿದೇಶಿ ಆಟಗಾರರಿಗೆ ಅಶ್ವಿನ್ ತಿರುಗೇಟು

    ದುಬೈ: ಕೆಕೆಆರ್ ತಂಡದ ನಾಯಕ ಇವೊಯಿನ್ ಮಾರ್ಗನ್ ಹಾಗೂ ನ್ಯೂಜಿಲೆಂಡ್ ವೇಗಿ ಟಿಮ್ ಸೌಥಿ ಅವರಿಂದ ಕ್ರೀಡಾಸ್ಫೂರ್ತಿಯ ಬಗ್ಗೆ ಪಾಠ ಕಲಿಯಬೇಕಿಲ್ಲ, ಅವರ ಉಪನ್ಯಾಸ ಅಗತ್ಯವಿಲ್ಲ. ಮೊದಲು ಅವಹೇಳನಕಾರಿ ಹೇಳಿಕೆಗಳನ್ನು ಅವರು ನಿಲ್ಲಿಸಲಿ ಎಂದು ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಭಾರತ ತಂಡದ ಸ್ಪಿನ್ನರ್ ಆರ್.ಅಶ್ವಿನ್ ತಿರುಗೇಟು ನೀಡಿದ್ದಾರೆ. 2019ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ತಲೆಗೆ ಬಿದ್ದ ಚೆಂಡು ಬೌಂಡರಿ ಗೆರೆ ದಾಟಿತ್ತು. ಆವಾಗ ನಿಮ್ಮ ಕ್ರೀಡಾ ಸ್ಫೂರ್ತಿ ಎಲ್ಲಿಗೆ ಹೋಗಿತ್ತು ಎಂದು ಪ್ರಶ್ನಿಸಿದ್ದಾರೆ.

    ಮಂಗಳವಾರ ಶಾರ್ಜಾದಲ್ಲಿ ಕೆಕೆಆರ್-ಡೆಲ್ಲಿ ನಡುವಿನ ಪಂದ್ಯದ ವೇಳೆ ಅಶ್ವಿನ್, ಸಹ-ಬ್ಯಾಟ್ಸ್‌ಮನ್ ರಿಷಭ್ ಪಂತ್‌ಗೆ ಬಡಿದು ಚೆಂಡು ದೂರ ಹೋದಾಗ ಹೆಚ್ಚುವರಿ ರನ್ ಕದಿಯಲು ಯತ್ನಿಸಿದ್ದರಿಂದ ಮೈದಾನದಲ್ಲೇ ಪರಸ್ಪರ ಮಾತುಕತೆ ನಡೆದಿತ್ತು. ಮಾರ್ಗನ್, ಸೌಥಿ ಕ್ರೀಡಾಸ್ಫೂರ್ತಿ ಬಗ್ಗೆ ಕೆಣಕಿದ್ದಕ್ಕೆ ಸರಣಿ ಟ್ವೀಟ್ ಮಾಡಿರುವ ಆರ್.ಅಶ್ವಿನ್, ನಾನು ಹಿಂತಿರುಗಿ ನೋಡಿದಾಗ ಫೀಲ್ಡರ್ ಚೆಂಡನ್ನು ಎಸೆದಿದ್ದರು. ಬ್ಯಾಟರ್ ರಿಷಭ್ ಪಂತ್‌ಗೆ ಆ ಚೆಂಡು ಬಿದ್ದಿದೆ ಎಂದು ನನಗೆ ಗೊತ್ತಿರಲಿಲ್ಲ. ಹೀಗಾಗಿ ರನ್ ಓಡಿದೆ. ಆದರೆ, ಕ್ರೀಡಾಸ್ಫೂರ್ತಿ ಮರೆತರು ಎಂಬ ಮಾರ್ಗನ್ ಮಾತನ್ನು ನಾನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. ಕ್ರೀಡಾ ಸ್ಫೂರ್ತಿಯ ಬಗ್ಗೆ ವಿಶ್ವಕಪ್ ಫೈನಲ್‌ನಲ್ಲಿ ನಡೆದ ಬೆನ್ ಸ್ಟೋಕ್ಸ್ ಪ್ರಕರಣವನ್ನು ಅಶ್ವಿನ್ ಮೆಲುಕು ಹಾಕಿದ್ದಾರೆ. ನಿಮ್ಮಿಂದ ನಾನು ಪಾಠ ಕಲಿಯಬೇಕಿಲ್ಲ, ನನಗೆ ನನ್ನ ಶಿಕ್ಷಕರು ಹಾಗೂ ಪಾಲಕರು ಸರಿಯಾಗಿ ಪಾಠ ಹೇಳಿಕೊಟ್ಟಿದ್ದಾರೆ. ನೀವು ನಿಮ್ಮ ಮಕ್ಕಳಿಗೆ ಸರಿಯಾಗಿ ಪಾಠ ಮಾಡಿ ಎಂದು ಹೇಳಿದ್ದಾರೆ.

    * ಘಟನೆಯ ವಿವರ..
    ಮಂಗಳವಾರ ಶಾರ್ಜಾದಲ್ಲಿ ಕೆಕೆಆರ್-ಡೆಲ್ಲಿ ನಡುವಿನ ಪಂದ್ಯದ ವೇಳೆ ಅಶ್ವಿನ್, ಸಹ-ಬ್ಯಾಟ್ಸ್‌ಮನ್ ರಿಷಭ್ ಪಂತ್‌ಗೆ ಬಡಿದು ಚೆಂಡು ದೂರ ಹೋದಾಗ ಹೆಚ್ಚುವರಿ ರನ್ ಕದಿಯಲು ಯತ್ನಿಸಿದ್ದರಿಂದ ಮೈದಾನದಲ್ಲೇ ಪರಸ್ಪರ ಮಾತುಕತೆ ನಡೆದಿತ್ತು. ಡೀಪ್‌ನಲ್ಲಿದ್ದ ಫೀಲ್ಡರ್ ರಾಹುಲ್ ತ್ರಿಪಾಠಿ ಎಸೆದ ಚೆಂಡು ರಿಷಭ್ ಪಂತ್‌ಗೆ ತಾಗಿತು. ಈ ವೇಳೆ ಅಶ್ವಿನ್ ಮತ್ತೊಂದು ರನ್ ಕಸಿದರು. ಇದರಿಂದ ಸಿಟ್ಟಿಗೆದ್ದ ಮಾರ್ಗನ್, ಇದು ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿದೆ ಎಂದು ಮೈದಾನದಲ್ಲೇ ಅಶ್ವಿನ್ ವಿರುದ್ಧ ಸಿಟ್ಟಾದರು. ಬಳಿಕ ಅಶ್ವಿನ್ ಟಿಮ್ ಸೌಥಿ ಎಸೆತದಲ್ಲಿ ಔಟಾಗಿ ನಿರ್ಮಿಸುತ್ತಿದ್ದಾಗ, ಮೋಸ ಮಾಡಿದ್ದಕ್ಕೆ ಹೀಗಾಯಿತು ಎಂದು ಸೌಥಿ ಕೆಣಕಿದರು. ಇದರಿಂದ ಸಿಟ್ಟಾದ ಅಶ್ವಿನ್, ಮಾರ್ಗನ್ ಹಾಗೂ ಬೌಲರ್ ಟಿಮ್ ಸೌಥಿಗೆ ಮೈದಾನದಲ್ಲೇ ಮಾತಿನ ಚಕಮಕಿ ನಡೆಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ದಿನೇಶ್ ಕಾರ್ತಿಕ್ ಪರಿಸ್ಥಿತಿ ತಿಳಿಗೊಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts