More

    ನಿನ್ನ ಜತೆ ಸೆಕ್ಸ್​ ಮಾಡಿದ್ದೀನಿ, ಆ ಭಾಗವನ್ನು ತುಂಬಾ ಇಷ್ಟಪಡ್ತೇನೆ! ಅರಿಯಾನಾಗೆ ಶಾಕ್​ ಕೊಟ್ಟ ಆರ್​ಜಿವಿ​

    ಹೈದರಬಾದ್​: ಸದಾ ವಿವಾದಗಳಿಂದಲೇ ಸುದ್ದಿಯಾಗುವ ಬಾಲಿವುಡ್​ ನಿರ್ದೇಶಕ ರಾಮ್​ಗೋಪಾಲ್​ ವರ್ಮಾ (ಆರ್​ಜಿವಿ) ಇತ್ತೀಚೆಗೆ ತಮ್ಮ ಮುಂದಿನ ಚಿತ್ರದ ನಟಿ ಅರಿಯಾನಾ ಗ್ಲೋರಿ ಜತೆಗೆ ಒನ್​ ಟು ಒನ್​ ಸಂದರ್ಶನದಲ್ಲಿ ಬೋಲ್ಡ್​ ಆಗಿ ಮಾತನಾಡಿರುವ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.

    ಜಿಮ್​ ಮಾಡುತ್ತಾ ಒಬ್ಬರಿಗೊಬ್ಬರು ಬೋಲ್ಡ್​ ಮಾತುಗಳನ್ನಾಡಿರುವ ಸಂದರ್ಶನದ ವಿಡಿಯೋ ಯೂಟ್ಯೂಬ್​ನಲ್ಲಿ ವೈರಲ್​ ಆಗಿದೆ. ಇಡೀ ಸಂದರ್ಶನದಲ್ಲಿ ದೇಹದ ಅಂಗಾಂಗ, ಸೆಕ್ಸ್​, ರೊಮ್ಯಾನ್ಸ್​, ಸಂಬಂಧ (ಅಫೇರ್​) ಮುಂತಾದ ವಿಚಾರಗಳ ಬಗ್ಗೆಯೇ ಇಬ್ಬರು ಮುಕ್ತವಾಗಿ ಚರ್ಚಿಸಿದ್ದಾರೆ. ಅಂದಹಾಗೆ ಈ ಸಂದರ್ಶನ ವರ್ಮ ಅವರು ಆಫೀಸ್​ನಲ್ಲೇ ನಡೆದಿದೆ.

    ಆರಂಭದಲ್ಲಿ ಬಿಗ್​ಬಾಸ್​ ಶೋ ಮತ್ತು ಕೆಲ ವಿಚಾರಗಳ ಬಗ್ಗೆ ಮಾತನಾಡಿದ ವರ್ಮಾ ಮತ್ತು ಅರಿಯಾನಾ, ನಂತರದಲ್ಲಿ ಬೋಲ್ಡ್​ ವಿಚಾರಗಳನ್ನು ಮಾತನಾಡಲು ಶುರು ಮಾಡಿದರು.

    ನೀವು ಸಲಿಂಗಕಾಮಿ ಲೈಂಗಿಕತೆಯನ್ನು ಇಷ್ಟಪಡುತ್ತೀರಾ ಎಂದು ಅರಿಯಾನಾ ಪ್ರಶ್ನಿಸಿದಾಗ, ಹೌದು. ನನಗೆ ಸಲಿಂಗಕಾಮಿ ಲೈಂಗಿಕತೆಯನ್ನು ನೋಡುವುದು ಇಷ್ಟ ಎಂದು ವರ್ಮ ಹೇಳಿದರು. ಸುಂದರ ಮಹಿಳೆಯರನ್ನು ನೋಡುವುದನ್ನು ಇಷ್ಟಪಡುತ್ತೇನೆ. ಇಬ್ಬರು ಮಹಿಳೆಯರು ಸಂಭೋಗಿಸಿದಾಗ, ನಾನು ಅದನ್ನು ನೋಡುವುದನ್ನು ಆನಂದಿಸುತ್ತೇನೆ ಎಂದರು. ಇದಕ್ಕೆ ಬದಲಾಗಿ ಅರಿಯಾನಾ ನನಗೆ ಸಲಿಂಗಕಾಮಿ ಲೈಂಗಿಕತೆಯನ್ನು ಇಷ್ಟಪಡುವುದಿಲ್ಲ ಎಂದು ತಿಳಿಸಿದರು.

    ತನ್ನ ಈ ಹಿಂದಿನ ಚಿತ್ರದ ನಾಯಕಿ ಅಪ್ಸರಾ ರಾಣಿ ಬಗ್ಗೆ ವರ್ಮ ಆಗಾಗ ಮೆಚ್ಚುಗೆ ಮಾತುಗಳನ್ನಾಡುವುದನ್ನು ನೋಡಿ ಅಪ್ಸರಾ ಜತೆಯಲ್ಲಿ ನಿಮಗೆ ಅಫೇರ್​ ಇದೆಯಾ ಎಂದು ಅರಿಯಾನಾ ಪ್ರಶ್ನಿಸಿದರು. ಈ ಪ್ರಶ್ನೆಯಿಂದ ಆಶ್ಚರ್ಯಚಕಿತರಾದ ಆರ್‌ಜಿವಿ, ಸಂಬಂಧದ ಬಗ್ಗೆ ತಮ್ಮದೇ ಆದ ವ್ಯಾಖ್ಯಾನವನ್ನು ನೀಡಿದರು. ಅಪ್ಸರಾರೊಂದಿಗೆ ಸಂಬಂಧ ಹೊಂದಿಲ್ಲ ಎಂದರು. ಆದರೆ, ಎಲ್ಲ ಸುಂದರ ಮಹಿಳೆಯರನ್ನು ಪ್ರೀತಿಸುವುದಾಗಿ ಹೇಳಿದರು.

    ಎಷ್ಟು ದಿನಗಳ ಕಾಲ ತಮ್ಮ ಸಂಬಂಧವನ್ನು ಮುಂದುವರಿಸಿದ್ದಾರೆ ಎಂದು ಆರ್​ಜಿವಿಯನ್ನು ಅರಿಯಾನಾ ಪ್ರಶ್ನಿಸಿದಾಗ, ಮಹಿಳೆಯರೊಂದಿಗೆ ಸಂಭೋಗಿಸಿದಾಗ ಮಾತ್ರ ನಾನು ಅವರನ್ನು ಪ್ರೀತಿಸುತ್ತೇನೆ ಎಂದರು. ಕೊನೆಯ ಬಾರಿಗೆ ಯಾರೊಂದಿಗಾದರೂ ಸಂಭೋಗಿಸಿದ್ದಾರಾ ಎಂದು ಕೇಳಿದಾಗ, ನೀವು ನನ್ನನ್ನು ನಂಬುತ್ತೀರಾ ಎಂದು ನನಗೆ ಗೊತ್ತಿಲ್ಲ, ಆದರೆ ನಾನು ಒಂದು ಗಂಟೆಯ ಹಿಂದಷ್ಟೇ ಲೈಂಗಿಕ ಸಂಬಂಧ ಹೊಂದಿದ್ದೇನೆ ಎಂದು ಆರ್​ಜಿವಿ ಹೇಳಿದಾಗ ಅರಿಯಾನಾ ತನ್ನ ಮುಖದಲ್ಲಿ ಆಶ್ಚರ್ಯ ವ್ಯಕ್ತಪಡಿಸಿದರು.

    ಪ್ರಸ್ತುತ ಅರಿಯಾನಾ ಜೊತೆ ಲೈಂಗಿಕ ಸಂಬಂಧ ಹೊಂದಿದ್ದೇನೆ ಎಂದು ಆರ್‌ಜಿವಿ ಹೇಳಿದಾಗ ಅರಿಯಾನಾಗೆ ಒಂದು ಕ್ಷಣ ಶಾಕ್​ ಆಯಿತು. ಮುಂದುವರಿದು ನಿಮ್ಮೊಂದಿಗೆ ಕೆಲಸ ಮಾಡುವಾಗ, ನನ್ನೊಳಗೆ ಕೆಲವು ಭಾವನೆಗಳು ಹುಟ್ಟಿಕೊಂಡಿವೆ ಮತ್ತು ನಾನು ನಿಮ್ಮೊಂದಿಗೆ ಸಂಭೋಗಿಸುತ್ತಿದ್ದೇನೆ ಎಂದು ವಿವರಿಸಿದರು. ನಾನು ಅದನ್ನು ಕಾವ್ಯಾತ್ಮಕವಾಗಿ ಹೇಳಲು ಪ್ರಯತ್ನಿಸಿದೇನೆ ಹೊರತು ಮನನೊಂದುಕೊಂಡಿಲ್ಲ ಎಂದರು.

    ಚಲನಚಿತ್ರಗಳು, ಟ್ವಿಟರ್, ವೋಡ್ಕಾ ಮತ್ತು ಹುಡುಗಿಯರು, ಇವುಗಳಲ್ಲಿ ಒಂದನ್ನು ಆಯ್ಕೆ ಮಾಡಲು ಕೇಳಿದಾಗ, ಆರ್​ಜಿವಿ ಹುಡುಗಿಯರನ್ನು ಆಯ್ಕೆ ಮಾಡಿದರು. ಇದಾದ ಬಳಿಕ ಆರ್​ಜಿವಿ ಅರಿಯಾನಾಗೆ ಎರಡು ಪ್ರಶ್ನೆಗಳನ್ನು ಕೇಳಿದರು. ಅದು ಈ ಕೆಳಕಂಡಂತಿದೆ.

    ಆರ್​ಜಿವಿ: ನಿಮ್ಮ ಗೆಳೆಯ ಇಷ್ಟಪಡುವ ನಿಮ್ಮ ದೇಹದ ಉತ್ತಮ ಭಾಗ ಯಾವುದು?
    ಅರಿಯಾನಾ: ನನಗೆ ಗೊತ್ತಿಲ್ಲ ಸರ್. ನನಗೆ ಗೆಳೆಯ ಇಲ್ಲ ಮತ್ತು ನಾನು ಉತ್ತರವನ್ನು ಹೇಳಿದರೆ ನೆಟ್ಟಿಗರು ಅದನ್ನು ದೊಡ್ಡದು ಮಾಡುತ್ತಾರೆ.

    ಆರ್​ಜಿವಿ: ನಾನು ಇಷ್ಟಪಡುವ ನಿಮ್ಮ ದೇಹದ ಅತ್ಯುತ್ತಮ ಭಾಗ ಯಾವುದು ಎಂದು ನೀವು ಭಾವಿಸುತ್ತೀರಿ?
    ಅರಿಯಾನಾ: ನಮ್ಮ ಮೊದಲ ಸಂದರ್ಶನದಲ್ಲಿ, ನೀವು ನನ್ನ ತೊಡೆಗಳನ್ನು ಇಷ್ಟಪಡುತ್ತೀರಿ ಎಂದು ಹೇಳಿದ್ದೀರಿ ಮತ್ತು ಅದನ್ನೇ ಇಷ್ಟಪಡುತ್ತೀರಿ ಎಂದು ನಾನು ಭಾವಿಸುತ್ತೇನೆ.

    ಆರ್​ಜಿವಿ: ನನ್ನ ಆದ್ಯತೆಗಳು ಕಾಲಕಾಲಕ್ಕೆ ಬದಲಾಗುತ್ತವೆ. ಇದೀಗ, ನಾನು ನಿಮ್ಮ ನಿತಂಬವನ್ನು ಇಷ್ಟಪಡುತ್ತೇನೆ.

    ಅದು ಏನೇ ಇರಲಿ, ತನ್ನ ಬಗ್ಗೆ ಟ್ವೀಟ್ ಮಾಡಿದ್ದಕ್ಕಾಗಿ ಅರಿಯಾನಾ ಆರ್‌ಜಿವಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು ಮತ್ತು ಆರ್‌ಜಿವಿಯನ್ನು “ನಿಜವಾದ ಜಂಟಲ್‌ಮ್ಯಾನ್” ಎಂದು ಕರೆದರು. ಇನ್ನು ಈ ಸಂದರ್ಶನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. (ಏಜೆನ್ಸೀಸ್​)

    ಅರಿಯಾನಾ ಜತೆ ಆರ್​ಜಿವಿ ಅಫೇರ್​? ಸಂದರ್ಶನದಲ್ಲಿದೆ ವರ್ಮರ ಬೋಲ್ಡ್​ ಮಾತುಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts