More

    ATMನಲ್ಲಿ ಹಣ ಡ್ರಾ ಮಾಡುವಾಗ ಕೇಳಿಬಂತು ವಿಚಿತ್ರ ಶಬ್ದ: ಏನೆಂದು ತಿರುಗಿ ನೋಡಿದ ಮಹಿಳೆಗೆ ಕಾದಿತ್ತು ಶಾಕ್​

    ಟೆಕ್ಸಾಸ್​: ಅಮೆರಿಕದ ಟೆಕ್ಸಾಸ್​ನ ಎಟಿಎಂವೊಂದಕ್ಕೆ ಅಡಿಯಿಟ್ಟ ಮಹಿಳೆ, ಮೊಸಳೆಯನ್ನು ಕಂಡು ಬೆಚ್ಚಿಬಿದ್ದಿರುವ ಘಟನೆ ನಡೆದಿದೆ. ಮಕರದಿಂದ ಭಯಗೊಂಡ ಆಕೆ ತಕ್ಷಣವೇ ಪೊಲಿಸರಿಗೆ ಕರೆ ಮಾಡಿದಳು. ಪೊಲೀಸರು ವನ್ಯಜೀವಿ ವನ್ಯಜೀವಿ ಇಲಾಖೆ ಅಧಿಕಾರಿಗಳು ತಂಡದೊಂದಿಗೆ ಬಂದು ಮೂರೂವರೆ ಅಡ್ಡಿ ಉದ್ದದ ಮೊಸಳೆಯನ್ನು ಹಿಡಿದು ಸ್ಥಳಾಂತರಿಸಿದ್ದಾರೆ.

    ಈ ಘಟನೆ ಲೇಕ್ ವರ್ತ್‌ನ ಟೆಲಿಫೋನ್ ರಸ್ತೆಯ 3900 ಬ್ಲಾಕ್‌ನಲ್ಲಿ ಆ.31 ರ ಬುಧವಾರ ಮುಂಜಾನೆ 4 ಗಂಟೆಗೆ ಸಂಭವಿಸಿದೆ. ಮಹಿಳೆ ಎಟಿಎಂನಿಂದ ಹಣ ಡ್ರಾ ಮಾಡುವಾಗ ಏನೋ ಶಬ್ದ ಕೇಳಿ ಆ ಕಡೆ ತಿರುಗಿ ನೋಡಿದ್ದಾಳೆ. ತಕ್ಷಣ ಮೊಸಳೆ ಕಂಡು ಕಾಲನ್ನು ಹಿಂತೆಗೆದುಕೊಂಡು ಎಟಿಎಂನಿಂದ ಹೊರಗೆ ಬಂದು ಪೊಲೀಸರಿಗೆ ಕರೆ ಮಾಡಿ ಮಾಹಿತಿ ಮುಟ್ಟಿಸಿದಳು.

    ಮೊಸಳೆ ಹಿಡಿಯುವ ದೃಶ್ಯ ಎಂಟಿಎಂನಲ್ಲಿದ್ದ ಬಾಡಿಕ್ಯಾಮೆರಾದಲ್ಲಿ ಚಿತ್ರಿತವಾಗಿ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಟ್ಟಿಗರು ‘ಕ್ರಿಕಿ ಮೊಸಳೆ ಕಸ್ಟಡಿಯಲ್ಲಿದೆ’ ಎಂದು ಶೀರ್ಷಿಕೆ ನೀಡಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

    ವಿಡಿಯೋಗೆ 1.21 ಲಕ್ಷಕ್ಕೂ ಹೆಚ್ಚು ಜನರು ಕಾಮೆಂಟ್ ಮಾಡಿದ್ದಾರೆ. ಮೊಸಳೆಗಳು ಹಣವನ್ನು ನದಿಯ ದಡದಲ್ಲಿ ಇಡುತ್ತವೆ ಎಂದು ಭಾವಿಸಿದ್ದೆ ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು ರಜೆಯ ವಾರಾಂತ್ಯದ ರಜೆಯಲ್ಲಿ ಮೊಸಳೆಯು ಹಣವನ್ನು ಠೇವಣಿ ಇಡಲು ಬಂದಿದೆ ಎಂದು ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್​)

    ನೀರಲ್ಲಿ ವಾಹನ ಮುಳುಗಿದ್ರೂ ವಿಮೆ ಸಿಗುತ್ತೆ: ಇನ್ಶೂರೆನ್ಸ್ ಕ್ಲೇಮ್​ಗೆ ಈ ಅಂಶಗಳನ್ನು ಪಾಲಿಸಿ…

    ಅಸೆಂಬ್ಲಿ ವಾರ್​ 2023| ಚಿಕ್ಕಮಗಳೂರು ಜಿಲ್ಲಾ ನೋಟ: ಕಾಫಿ ನಾಡಿನಲ್ಲಿ ಗೆಲ್ಲೋರೆ ಕಿಂಗ್

    ಜನಸೇವಕ ವೈದ್ಯ ಡಾ.ಕಾಮರೆಡ್ಡಿಗೆ ವಿಜಯರತ್ನ ಗರಿ: ವಿಜಯವಾಣಿ, ದಿಗ್ವಿಜಯ ವಾಹಿನಿಯ ಪ್ರತಿಷ್ಠಿತ ಗೌರವ ಪ್ರದಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts