More

    ದುಷ್ಕರ್ಮಿಗಳಿಂದ ಗುಂಡಿನ ದಾಳಿಯ ಬೆನ್ನಲ್ಲೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿಗೆ Z ಕೆಟಗರಿ ಭದ್ರತೆ

    ನವದೆಹಲಿ: ಬೆಂಗಾವಲು ವಾಹನ ಮೇಲೆ ಗುಂಡಿನ ದಾಳಿ ನಡೆದ ಒಂದು ದಿನದ ಬೆನ್ನಲ್ಲೇ ಎಐಎಂಐಎಂ ಮುಖ್ಯಸ್ಥ ಹಾಗೂ ಲೋಕಸಭಾ ಸಂಸದ ಅಸಾದುದ್ದೀನ್ ಓವೈಸಿಗೆ ಸರ್ಕಾರ ಝಡ್​ ಕೆಟಗರಿ ಭದ್ರತೆಯನ್ನು ಒದಗಿಸಿದೆ.

    ಝಡ್​ ಕೆಟಗರಿ ಭದ್ರತೆಯು ನಾಲ್ಕರಿಂದ ಆರು ಎನ್​ಎಸ್​ಜಿ ಕಮ್ಯಾಂಡೋಗಳು ಮತ್ತು ಪೊಲೀಸರು ಸೇರಿದಂತೆ ಒಟ್ಟು 22 ಸಿಬ್ಬಂದಿಯನ್ನು ಒಳಗೊಂಡಿರುತ್ತದೆ. ಇದನ್ನು ದೆಹಲಿ ಪೋಲೀಸ್ ಅಥವಾ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ (ITBP) ಅಥವಾ ಸೆಂಟ್ರಲ್ ರಿಸರ್ವ್ ಪೋಲೀಸ್ ಫೋರ್ಸ್ (CRPF) ಸಿಬ್ಬಂದಿಗಳು ಒಂದು ಬೆಂಗಾವಲು ಕಾರಿನ ಜತೆಗೆ ಒದಗಿಸುತ್ತಾರೆ.

    ನಿನ್ನೆಯಷ್ಟೇ ನಾನು ಎಂದಿಗೂ ಭದ್ರತೆಯನ್ನು ಬಯಸಿಲ್ಲ ಮತ್ತು ಎಂದಿಗೂ ಬಯಸುವುದಿಲ್ಲ. ಏಕೆಂದರೆ, ಪ್ರತಿಯೊಬ್ಬರ ಜೀವವನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದಿದ್ದರು.

    ನಿನ್ನೆ (ಫೆ.3) ಪಶ್ಚಿಮ ಉತ್ತರ ಪ್ರದೇಶದ ಚುನಾವಣಾ ಸಮಾವೇಶವನ್ನು ಮುಗಿಸಿ ದೆಹಲಿಗೆ ಮರಳುವಾಗಿ ಓವೈಸಿ ಕಾರಿಗೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಓವೈಸಿ ಅವರಿದ್ದ ವಾಹನವು ರಾಷ್ಟ್ರೀಯ ಹೆದ್ದಾರಿ 24ರ ಹಾಪುರ್-ಗಾಜಿಯಾಬಾದ್ ಸ್ಟ್ರೆಚ್‌ನಲ್ಲಿರುವ ಛಿಜರ್ಸಿ ಟೋಲ್ ಪ್ಲಾಜಾ ಬಳಿ ಸಂಜೆ 6 ಗಂಟೆ ಸುಮಾರಿಗೆ ಬಂದಾಗ ಘಟನೆ ನಡೆದಿದ್ದು, ಇಬ್ಬರು ಶಂಕಿತರನ್ನು ಬಂಧಿಸಲಾಗಿದೆ.

    ಈ ಘಟನೆ ಯಾರಿಗೂ ಗಾಯಗಳಾಗಿಲ್ಲ ಎಂದು ಓವೈಸಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಘಟನೆಯ ಸ್ವತಂತ್ರ ತನಿಖೆಗೆ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದು, ಈ ದಾಳಿಯ ಹಿಂದೆ ‘ಮಾಸ್ಟರ್ ಮೈಂಡ್’ ಇರುವ ಬಗ್ಗೆ ಆರೋಪ ಮಾಡಿದ್ದಾರೆ. (ಏಜೆನ್ಸೀಸ್​)

    ತನ್ನ ಫೋಟೋ ಮೇಲೆ ಸೆಲೆಬ್ರಿಟಿ ಎಂದು ಬರೆದು ಪೂಜೆ ಮಾಡಿ ಸಾವಿನ ದಾರಿ ಹಿಡಿದ ವ್ಯಕ್ತಿ..!

    ಮದ್ವೆ ಮನೆಯಲ್ಲಿ ಕೊರಗಜ್ಜನ ವೇಷ ಧರಿಸಿ ಕುಣಿತ: ತಲೆಮರೆಸಿಕೊಂಡಿದ್ದ ಮದುಮಗ ಕೊನೆಗೂ ಸಿಕ್ಕಿಬಿದ್ದ

    ದೇಹದಲ್ಲಿ ಎಷ್ಟು ಮಚ್ಚೆಗಳಿವೆ? ತೆಲುಗಿನ ಮೊದಲ ಚಿತ್ರದಲ್ಲೇ ಕನ್ನಡತಿ ನೇಹಾ ಶೆಟ್ಟಿಗೆ ಮುಜುಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts