ದೇಹದಲ್ಲಿ ಎಷ್ಟು ಮಚ್ಚೆಗಳಿವೆ? ತೆಲುಗಿನ ಮೊದಲ ಚಿತ್ರದಲ್ಲೇ ಕನ್ನಡತಿ ನೇಹಾ ಶೆಟ್ಟಿಗೆ ಮುಜುಗರ

ಹೈದರಾಬಾದ್​: ತೆಲುಗು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಮತ್ತೊಬ್ಬ ಕನ್ನಡತಿ ನೇಹಾ ಶೆಟ್ಟಿಗೆ ಮೊದಲ ಚಿತ್ರದಲ್ಲೇ ಕಹಿ ಅನುಭವ ಆಗಿದೆ. ನಿನ್ನೆ ನೇಹಾ ನಟನೆಯ “ಡಿಜೆ ಟಿಲ್ಲು” ಸಿನಿಮಾದ ಟ್ರೈಲರ್​ ಲಾಂಚ್​ ಕಾರ್ಯಕ್ರಮ ನಡೆಯಿತು. ಈ ವೇಳೆ ಪತ್ರಕರ್ತನೊಬ್ಬ ಕೇಳಿದ ಪ್ರಶ್ನೆಯಿಂದ ಮುಜುಗರಕ್ಕೆ ಒಳಗಾಗಿರುವ ನೇಹಾ ಇಂದು ಟ್ವಿಟರ್​ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ಚಿತ್ರದಲ್ಲಿ ಸಿಧು ಜೊನ್ನಲಗಡ್ಡ ಅವರು ನಾಯಕರಾಗಿ ನಟಿಸಿದ್ದಾರೆ. ನಿರ್ಮಾಪಕ ಸೂರ್ಯದೇವರ ನಾಗ ವಂಶಿ ಸೇರಿದಂತೆ ಚಿತ್ರತಂಡ ಕಳೆದ ಬುಧವಾರ ಟ್ರೈಲರ್​ ಲಾಂಚ್​ ಮಾಡಿದೆ. … Continue reading ದೇಹದಲ್ಲಿ ಎಷ್ಟು ಮಚ್ಚೆಗಳಿವೆ? ತೆಲುಗಿನ ಮೊದಲ ಚಿತ್ರದಲ್ಲೇ ಕನ್ನಡತಿ ನೇಹಾ ಶೆಟ್ಟಿಗೆ ಮುಜುಗರ