More

    ತಾಲಿಬಾನ್​ ವಿರುದ್ಧ ತಿರುಗಿ ಬಿದ್ದ ಆಫ್ಘಾನ್ನರು: ಉಗ್ರರನ್ನು ಕೊಂದು 3 ಜಿಲ್ಲೆಗಳನ್ನು ಮರು ವಶಪಡಿಸಿಕೊಂಡ ಹೋರಾಟಗಾರರು

    ಕಾಬುಲ್​: ಅಫ್ಘಾನಿಸ್ತಾನವನ್ನು ತಾಲಿಬಾನ್​ ವಶಕ್ಕೆ ಪಡೆದುಕೊಂಡಾಗಿನಿಂದ ಹಿಂಸೆ ಮತ್ತು ಪ್ರತಿಭಟನೆಗಳು ನಿರಂತರವಾಗಿದೆ. ತಾಲಿಬಾನ್​ ಕಿರುಕುಳವನ್ನು ಸಹಿಸದ ಆಫ್ಘಾನ್​ ಜನರು ಇದೀಗ ತಾಲಿಬಾನಿಗಳ ವಿರುದ್ಧವೇ ತಿರುಗಿಬಿದ್ದಿದ್ದು, ಕಾಬುಲ್​ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಪ್ರತಿಭಟನೆ ಜೋರಾಗಿದೆ.

    ಬಾಯಲ್ಲಿ ಶಾಂತಿ ಮಂತ್ರ ಜಪಿಸಿ ಪ್ರತೀಕಾರದ ನಡೆ ಅನುಸರಿಸುತ್ತಿರುವ ತಾಲಿಬಾನ್​ ತನ್ನ ಕರಾಳ ಮುಖವನ್ನು ಜಗತ್ತಿನ ಎದುರು ತೆರೆದಿಡುತ್ತಿದೆ. ಅಮೆರಿಕ ಸೇನೆ ಮತ್ತು ನ್ಯಾಟೋ ಪಡೆಗಳಿಗೆ ನೆರವು ನೀಡಿದ ಆಫ್ಘಾನ್​ ಜನರನ್ನು ಹುಡುಕಿ ಹುಡುಕಿ ಪ್ರತೀಕಾರ ತೆಗೆದುಕೊಳ್ಳುತ್ತಿರುವ ತಾಲಿಬಾನಿಗಳ ನಡೆಯಿಂದ ಬೇಸತ್ತಿರುವ ಅಲ್ಲಿನ ಜನರ ಅವರ ವಿರುದ್ಧವೇ ತಿರುಗಿಬಿದ್ದಿದ್ದಾರೆ.

    ತಾಲಿಬಾನ್​ ವಿರುದ್ಧ ಸಮರ ಸಾರಿರುವ ಆಫ್ಘಾನ್​ನ ಹೋರಾಟಗಾರರು ಕೆಲವು ತಾಲಿಬಾನಿಗಳನ್ನು ಕೊಂದು ಅವರ ನಿಯಂತ್ರಣದಲ್ಲಿದ್ದ ಮೂರು ಜಿಲ್ಲೆಗಳನ್ನು ಸ್ವತಂತ್ರಗೊಳಿಸಿದ್ದಾರೆಂಬ ಮಾಹಿತಿ ತಿಳಿದುಬಂದಿದೆ. ಅನೇಕ ಪ್ರತಿಭಟನೆಗಳು ದಿನನಿತ್ಯ ನಡೆಯುತ್ತಿದ್ದು, ತಾಲಿಬಾನಿಗಳ ನರಕ ಕೂಪದಲ್ಲಿ ನರಳಿ ಸಾಯುವುದಕ್ಕಿಂತ ಹೋರಾಡಿ ಮಡಿಯುವೇ ಮೇಲೂ ಎಂಬ ತೀರ್ಮಾನಕ್ಕೆ ಬಂದು ಉಗ್ರರ ವಿರುದ್ಧ ಸಮರ ಸಾರಿದ್ದಾರೆ.

    ಇನ್ನೊಂದೆಡೆ ಅಮೆರಿಕದಿಂದ ಆಫ್ಘಾನ್ನರ ಸ್ಥಳಾಂತರ ಕಾರ್ಯವೂ ನಡೆಯುತ್ತಿದೆ. ಕಾಬುಲ್​ನಲ್ಲಿ ಏರ್​ಲಿಫ್ಟ್​ ಮಾಡುವುದು ಕಷ್ಟಕರ ಎಂದಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್​, 13 ಸಾವಿರ ಜನರನ್ನು ಸ್ಥಳಾಂತರ ಮಾಡಿರುವುದಾಗಿ ತಿಳಿಸಿದ್ದಾರೆ. ಸದ್ಯ ಕಾಬುಲ್​ ನೆಲದಲ್ಲಿ 5,200 ಅಮೆರಿಕ ಯೋಧರು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಸ್ಥಳಾಂತರ ಕೆಲಸ ಮುಂದುವರಿದಿದೆ. (ಏಜೆನ್ಸೀಸ್​)

    ಮಕ್ಕಳ ಮಾರಾಟ ಅವ್ಯಾಹತ: ನಾಲ್ಕು ವರ್ಷಗಳಲ್ಲಿ 767 ಕೇಸ್, ಬಡ ಪಾಲಕರೇ ಟಾರ್ಗೆಟ್

    ತಾಲಿಬಾನ್ ಸೇಡಿನ ಬೇಟೆ: ಅಮೆರಿಕ, ನ್ಯಾಟೋ ಪಡೆಗೆ ನೆರವು ನೀಡಿದವರ ಹುಡುಕಿ ಹತ್ಯೆ

    ವಿಶ್ವಸಾಹಿತಿ ಭೈರಪ್ಪ @90: ವಿಜಯವಾಣಿ-ದಿಗ್ವಿಜಯ ಕ್ಲಬ್​ಹೌಸ್​ ಸಂವಾದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts