More

    ಅಡಲ್ಟ್​ ಸಿನಿಮಾ ಮೇಕಿಂಗ್​ ವೇಳೆ ಪೊಲೀಸ್​ ಕೈಗೆ ಸಿಕ್ಕಿಬಿದ್ದ ನಟಿ ಉರ್ಫಿ ಜಾವೇದ್: ಕೊನೆಯಲ್ಲಿ ರೋಚಕ ಟ್ವಿಸ್ಟ್​!​​

    ಮುಂಬೈ: ಅತ್ಯಂತ ಕಡಿಮೆ ಉಡುಗೆ ತೊಟ್ಟು ವಿಭಿನ್ನ ರೀತಿಯಲ್ಲಿ ಪೋಸ್‌ ಕೊಟ್ಟು ಖ್ಯಾತಿ ಗಳಿಸಲು ಹವಣಿಸುವ ಕೆಲವು ತಾರೆಗಳ ಪೈಕಿ ನಟಿ ಉರ್ಫಿ ಜಾವೇದ್‌ ಕೂಡ ಒಬ್ಬಳು. ತಾನು ತೊಡುವ ಡ್ರೆಸ್‌ಗಳಿಂದಲೇ ಟ್ರೋಲ್‌ ಆಗುವ ಈಕೆ ಬಾಲಿವುಡ್​ ಟಿಲಿ ವಿಷನ್​ ಇಂಡಸ್ಟ್ರಿಯಲ್ಲಿ ಹೆಚ್ಚು ಖ್ಯಾತಿ ಪಡೆದಿದ್ದಾರೆ.

    ಬಿಗ್​ ಬಾಸ್​ ಒಟಿಟಿ ಷೋನಲ್ಲಿ ಸ್ಪರ್ಧಿಸಿ ಬಂದ ಬಳಿಕ ಭಾರಿ ಪ್ರಸಿದ್ಧಿ ಪಡೆದಿರುವ ಈ ಉರ್ಫಿ ಜಾವೇದ್, ಯಾವುದಕ್ಕೂ ಕೇರ್‌ ಮಾಡದೇ ತನ್ನ ಮೈಮಾಟ ಪ್ರದರ್ಶನ ಮಾಡುವಲ್ಲಿ ಎತ್ತಿದ ಕೈ. ಪ್ರತಿದಿನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪಡ್ಡೆ ಹುಡುಗರ ಮೈ ಬಿಸಿಯೇರಿಸುವಂತಹ ಫೋಟೋಗಳನ್ನು ಶೇರ್​ ಮಾಡುತ್ತಲೇ ಇರುತ್ತಾರೆ. ಅವರ ಹಾಟ್​ ಅವತಾರಕ್ಕೆ ಫಿದಾ ಆಗಿರುವ ಅಭಿಮಾನಿಗಳು ಪ್ರತಿದಿನ ಅವರ ಫೋಟೋ ಅಥವಾ ವಿಡಿಯೋಗಳಿಗೆ ಎದುರು ನೋಡುತ್ತಲೇ ಇರುತ್ತಾರೆ.

    ಇದೀಗ ಉರ್ಫಿ ಜಾವೇದ್​ ಅವರ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ವಯಸ್ಕರ ಸಿನಿಮಾ ಮಾಡುತ್ತಿರುವ ಆರೋಪದಲ್ಲಿ ಆಕೆಯನ್ನು ಪೊಲೀಸ್​ ಸಿಬ್ಬಂದಿಯೊಬ್ಬರು ಬಂಧಿಸುತ್ತಿರುವುದು ವಿಡಿಯೋದಲ್ಲಿದೆ. ನಾನೇನು ಮಾಡಿಲ್ಲ, ನಾನು ಅಮಾಯಕಿ ಎಂದು ಉರ್ಫಿ ಜಾವೇದ್​ ಹೇಳುತ್ತಿರುವುದು ವಿಡಿಯೋದಲ್ಲಿದೆ.

    ವಿವರಣೆಗೆ ಬರುವುದಾದರೆ, ಇತ್ತೀಚೆಗಷ್ಟೇ ರೋಹಿತ್​ ಗುಪ್ತಾ ಹೆಸರಿನ ಇನ್​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಶೇರ್​ ಆಗಿದೆ. ವಿಡಿಯೋದಲ್ಲಿ ಉರ್ಫಿ ಜಾವೇದ್​ ಕಚೇರಿಯೊಂದರಲ್ಲಿ ಹುಡುಗಿಯೊಬ್ಬಳೊಂದಿಗೆ ಕುಳಿತಿರುವುದನ್ನು ನೋಡಬಹುದಾಗಿದೆ. ಕಾಸ್ಟಿಂಗ್​ ಡೈರೆಕ್ಟರ್​ ಅವರ ಜತೆ ಸಿನಿಮಾ ಬಗ್ಗೆ ಚರ್ಚಿಸುತ್ತಿರುವುದು ಮತ್ತು ಈ ಚಿತ್ರದ ಶೂಟಿಂಗ್​, ಪಾತ್ರವರ್ಗ ಸೇರಿದಂತೆ ಎಲ್ಲವೂ ರಹಸ್ಯವಾಗಿರುತ್ತದೆ ಎಂದು ಹೇಳುತ್ತಾರೆ. ಅದಕ್ಕೆ ಒಪ್ಪಿಕೊಳ್ಳುವ ಉರ್ಫಿ, ತನ್ನ ಜತೆ ಇದ್ದ ಹುಡುಗಿಯನ್ನು ಹೊರ ಹೋಗುವಂತೆ ಹೇಳುತ್ತಾರೆ. ನಂತರ ಈ ಚಿತ್ರದ ಹೆಸರು ಟೈಟಾನಿಕ್​ ಎಂದು ಕಾಸ್ಟಿಂಗ್​ ಡೈರೆಕ್ಟರ್​ ಉರ್ಫಿಗೆ ಹೇಳುತ್ತಾರೆ.

    ಇದಾದ ಬಳಿಕ ಈ ಚಿತ್ರದಲ್ಲಿ ನಟ ರಣಬೀರ್ ಕಪೂರ್ ಕೂಡ ನಟಿಸಲಿದ್ದಾರೆ ಎಂದು ಉರ್ಫಿಗೆ ಹೇಳುತ್ತಾರೆ. ಆದರೆ, ರಣಬೀರ್​ ಕಪೂರ್​ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದಾಗ ಉರ್ಫಿ ಶಾಕ್​ ಆಗುತ್ತಾರೆ. ಇದೇ ಸಮಯದಲ್ಲಿ ರಣಬೀರ್​ ಜತೆ ಮಾತನಾಡುವಂತೆ ಉರ್ಫಿಗೆ ಹೇಳುತ್ತಾರೆ. ನಿರ್ದೇಶಕ ರೋಹಿತ್​ ಎಂಬುವರು ರಣಬೀರ್​ ಧ್ವನಿಯಲ್ಲಿ ಉರ್ಫಿ ಜತೆ ಮಾತನಾಡುತ್ತಾರೆ. ನಂತರ ಚಿತ್ರದ ನಾಯಕ ಯಾರು ಎಂದು ಕೇಳಿದಾಗ ವಿದೇಶದ ಸ್ಟಾರ್​ ಎಂದು ನಿರ್ದೇಶಕರು ಹೇಳುತ್ತಾರೆ. ನಂತರ ನಿರ್ದೇಶಕ ರೋಹಿತ್​ ಓರ್ವ ಕಲಾವಿದನೊಂದಿಗೆ ಕಚೇರಿಗೆ ಬರುತ್ತಾರೆ. ಆದರೆ ಆತ ನಿಜವಾಗಿಯೂ ಸ್ಟಾರ್​ ಅಲ್ಲ. ಆತನನ್ನು ನೋಡಿ ಉರ್ಫಿ ಶಾಕ್​ ಆಗುತ್ತಾರೆ.

    ವಿದೇಶಿ ಸ್ಟಾರ್​ ಒಬ್ಬರು ಇರುತ್ತಾರೆ ಎಂದು ಕಾಸ್ಟಿಂಗ್​ ನಿರ್ದೇಶಕರು ಹೇಳಿದರಲ್ಲ ಎಂದು ಉರ್ಫಿ ನಿರ್ದೇಶಕ ರೋಹಿತ್​ರನ್ನು ಕೇಳುತ್ತಾರೆ. ಇವರು ಕೂಡ ತುಂಬಾ ಫೇಮಸ್​. ಇವರು ಉಗಾಂಡದವರು ಎನ್ನುತ್ತಾರೆ. ಆತನೊಂದಿಗೆ ಆಡಿಷನ್​ ಕೊಡುವಂತೆ ನಿರ್ದೇಶಕರು ಕೇಳುತ್ತಾರೆ. ಇಬ್ಬರು ಆಡಿಷನ್​ ಕೊಡುವಾಗ ಪೊಲೀಸ್​ ಸಿಬ್ಬಂದಿಯೊಬ್ಬರು ಕಚೇರಿ ಪ್ರವೇಶಿಸುತ್ತಾರೆ. ಪ್ರವೇಶಿಸುತ್ತಿದ್ದಂತೆ ಇಲ್ಲಿ ಏನೋ ತಪ್ಪು ನಡೆಯುತ್ತಿದೆ ಅಂತಾ ಉರ್ಫಿ ಬಿಟ್ಟು ಎಲ್ಲರಿಗೂ ಲಾಠಿಯಿಂದ ಥಳಿಸುತ್ತಾರೆ. ಏನು ನಡೆಯುತ್ತಿದೆ ಎಂದು ಗೊತ್ತಾಗದೇ ಉರ್ಫಿ ಕೂಗಾಡುತ್ತಾರೆ. ಬಳಿಕ ಇಬ್ಬರು ನಿರ್ದೇಶಕರು ಉರ್ಫಿ ಮೇಲೆ ಆರೋಪ ಮಾಡುತ್ತಾರೆ. ವಯಸ್ಕರ ಸಿನಿಮಾ ಮಾಡಲು ಉರ್ಫಿ ನಮ್ಮನ್ನು ಕರೆದರು ಎನ್ನುತ್ತಾರೆ. ಇದರಿಂದ ಉರ್ಫಿಗೆ ಇರಿಸು-ಮುರುಸಾಗುತ್ತದೆ.

    ತುಂಬಾ ಕೂಗಾಡಿಕೊಂಡೇ ಉರ್ಫಿ ಯಾರಿಗೋ ಕರೆ ಮಾಡಿದಾಗ ಅಲ್ಲಿ ನಡೆದಿರುವ ಒಂದು ಪ್ರ್ಯಾಂಕ್​ ಅಷ್ಟೇ ಎಂಬುದು ಗೊತ್ತಾಗುತ್ತದೆ. ಉರ್ಫಿಗೆ ಪ್ರ್ಯಾಂಕ್​ ಮಾಡಲು ಎಲ್ಲರೂ ಸೇರಿ ಪ್ಲಾನ್​ ಮಾಡಿರುತ್ತಾರೆ. ಇದು ಗೊತ್ತಾದ ಬಳಿಕ ಮುಖದಲ್ಲಿ ಸ್ಮೈಲ್​ ಮಾಡುತ್ತಾ ಒಂದು ಕ್ಷಣ ಎಂಥಾ ಶಾಕ್​ ಕೊಟ್ರಿ ಎಂದು ಉರ್ಫಿ ನಿಟ್ಟುಸಿರು ಬಿಡುತ್ತಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. (ಏಜೆನ್ಸೀಸ್​)

     

     
     
     
     
     
    View this post on Instagram
     
     
     
     
     
     
     
     
     
     
     

     

    A post shared by Rohit Gupta (@ro_hit_hain)

     

    ಯೂಕ್ರೇನ್​ ಮೇಲೆ ದಾಳಿ… ರಷ್ಯಾದ ಟಿವಿ ಮಾಧ್ಯಮಗಳು, ಯೂಟ್ಯೂಬ್ ಚಾನೆಲ್​ಗಳಿಗೆ​ ಬಿಗ್​ ಶಾಕ್​ ಕೊಟ್ಟ ಗೂಗಲ್​​!

    ಜಗನ್ vs ಪವನ್​: ಭೀಮ್ಲಾ ನಾಯಕ್​ ಚಿತ್ರಕ್ಕೆ ಆಂಧ್ರದಲ್ಲಿ ಉಂಟಾದ ನಷ್ಟದ ಮೊತ್ತ ಹೀಗಿದೆ…

    ಯೂಕ್ರೇನ್​ನಲ್ಲಿ ಸಿಲುಕಿರುವ ಪುತ್ರಿ: ಅನಿರೀಕ್ಷಿತ ಫೋನ್​ ಕಾಲ್​ ಸ್ವೀಕರಿಸಿದ ಮಹಿಳೆಗೆ ಖುಷಿಯ ಬೆನ್ನಲ್ಲೇ ಬಿಗ್​ ಶಾಕ್!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts