More

    ಆ್ಯಸಿಡ್ ದಾಳಿ ಪ್ರಕರಣ: ಎಸ್ಕೇಪ್​ ಆಗಲು ಹೈಡ್ರಾಮ ಮಾಡಿದ ಆರೋಪಿ ನಾಗೇಶ್​ ಕಾಲಿಗೆ ಗುಂಡೇಟು

    ಬೆಂಗಳೂರು: ಸುಂಕದಕಟ್ಟೆಯಲ್ಲಿ ಹಾಡಹಗಲೇ ಯುವತಿಯ ಮೇಲೆ ಆ್ಯಸಿಡ್​ ದಾಳಿ ನಡೆಸಿ ಪರಾರಿಯಾಗಿದ್ದ ಆರೋಪಿ ನಾಗೇಶ್​ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸ್ವಾಮೀಜಿ ವೇಷಧಾರಿಯಾಗಿ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನ ಶುಕ್ರವಾರ ಬಂಧಿಸಲಾಗಿದೆ.

    ಈ ಪ್ರಕರಣದಲ್ಲಿ ತಾಜಾ ಬೆಳವಣಿಗೆಯೊಂದು ನಡೆದಿದೆ. ಆರೋಪಿ ನಾಗೇಶ್​ ಪೊಲೀಸರ ಮುಂದೆ ಹೈಡ್ರಾಮ ಶುರು ಮಾಡಿದ್ದು, ಆತನ ಕಾಲಿಗೆ ಪೊಲೀಸರು ಗುಂಡೇಟು ನೀಡಿದ್ದಾರೆ. ನಗರದ ಕೆಂಗೇರಿಯ ಮೇಲ್ಸೆತುವೆ ಬಳಿ ಫೈರಿಂಗ್​ ನಡೆದಿದೆ.

    ಮೂತ್ರ ವಿಸರ್ಜನೆಗೆ ಗಾಡಿ ನಿಲ್ಲಿಸಿ ಅಂತಾ ಆರೋಪಿ ನಾಗೇಶ್​ ನೈಸ್ ರೋಡಲ್ಲಿ ಪೊಲೀಸರ ಬಳಿ ಕೇಳಿಕೊಂಡಿದ್ದ. ಆದ್ರೆ, ಪೊಲೀಸರು ಕೆಂಗೇರಿ ಮೇಲ್ಸೇತುವೆ ಬಳಿ ವಾಹನ ನಿಲ್ಲಿಸಿದ್ದರು. ಈ ವೇಳೆ ನಾಗೇಶ್​, ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಹಿಡಿಯಲು ಹೋದ ಕಾನ್ಸ್‌ಟೇಬಲ್ ಮಹಾದೇವಯ್ಯರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ.

    ಕಾಮಾಕ್ಷಿಪಾಳ್ಯ ಠಾಣೆಯ ಇನ್ಸ್​ಪೆಕ್ಟರ್​ ಪ್ರಶಾಂತ್ ಶರಣಾಗುವಂತೆ ಹೇಳಿ ಒಮ್ಮೆ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ಆರೋಪಿ ನಾಗೇಶ್​ ಅದಕ್ಕೆ ಬಗ್ಗದೆ ಎಸ್ಕೇಪ್‌ ಆಗಲು ಮುಂದಾದಾಗ ನಾಗೇಶ್ ಬಲಗಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ. ಘಟನಾ ಸ್ಥಳಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಸದ್ಯ ಆರೋಪಿ‌ ನಾಗೇಶ್ ಹಾಗೂ ಗಾಯಗೊಂಡಿರುವ ಕಾನ್ಸ್​ಟೇಬಲ್​ ಮಹದೇವಯ್ಯಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. (ದಿಗ್ವಿಜಯ ನ್ಯೂಸ್​)

    ಆ್ಯಸಿಡ್​ ದಾಳಿಕೋರ ನಾಗೇಶ್​ ಬಂಧನ: ಸ್ವಾಮೀಜಿ ವೇಷದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ

    ಕಾಸರಗೋಡಿನ ನಟಿ-ರೂಪದರ್ಶಿ ಸಂಶಯಾಸ್ಪದ ಸಾವು: ಮೃತಳ ಮನೆಯಲ್ಲಿ ಪತ್ತೆಯಾಯ್ತು ಅಪಾಯಕಾರಿ ವಸ್ತು!

    72 ಗಂಟೆಯಲ್ಲೇ ಪಿಂಚಣಿ: ಹಲೋ ಕಂದಾಯ ಸಚಿವರೇ ಯೋಜನೆಗೆ ಚಾಲನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts