More

    ಆಂಧ್ರದ ಸಮುದ್ರ ತೀರಕ್ಕೆ ತೇಲಿಬಂದ ನಿಗೂಢ ಚಿನ್ನದ ರಥ ನೋಡಿ ಬೆರಗಾದ ಜನರು! ಏನಿದರ ರಹಸ್ಯ?

    ಶ್ರೀಕಾಕುಳಂ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಅಸಾನಿ ಚಂಡಮಾರುತ ದೇಶದ ಹಲವೆಡೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಆಂಧ್ರ ಪ್ರದೇಶದ ಕರಾವಳಿ ಭಾಗದಲ್ಲಿ ಕಡಲ ಮೊರೆತ ಹೆಚ್ಚಾಗಿದ್ದು, ಇದರ ನಡುವೆ ಚಂಡಮಾರುತಕ್ಕೆ ಸಿಲಕಿ ನಿಗೂಢ ಚಿನ್ನದ ರಥವೊಂದು ಸಮುದ್ರದಲ್ಲಿ ತೇಲಿಬಂದಿದೆ.

    ಆಂಧ್ರ ಪ್ರದೇಶದ ಸಂತಬೊಮ್ಮಲಿ ಮಂಡಲದ ಸುನ್ನಪಲ್ಲಿಯ ಕರಾವಳಿ ತೀರದಲ್ಲಿ ಚಿನ್ನದ ರಥ ಮಂಗಳವಾರ ತೇಲಿ ಬಂದಿದೆ. ಈ ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ನೌಪಾಡದ ಸಬ್​ ಇನ್ಸ್​ಪೆಕ್ಟರ್​ ಚಿನ್ನದ ರಥವೂ ಬೇರೆ ದೇಶದಿಂದ ಬಂದಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಗುಪ್ತಚರ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ ಎಂದು ಎಸ್​ಐ ಹೇಳಿದರು. ರಥದ ಮೇಲೆ 16/1/2022 ದಿನಾಂಕವಿದೆ ಮತ್ತು ವಿದೇಶಿ ಬರವಣಿಗೆ ಇದೆ. ಬಹುಶಃ ರಥವೂ ಮಲೇಶಿಯಾ, ಥಾಯ್ಲೆಂಡ್​ ಅಥವಾ ಜಪಾನ್​ನಿಂದ ಬಂದಿರಬಹುದೆಂದು ಶಂಕಿಸಲಾಗಿದೆ. ಚಿನ್ನದ ರಥವೂ ಕರಾವಳಿ ತೀರಕ್ಕೆ ತೇಲಿಬಂದಿರುವುದನ್ನು ತಿಳಿದಕೂಡಲೇ ಸ್ಥಳಕ್ಕೆ ಸ್ಥಳೀಯರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.

    ಇತ್ತೀಚಿನ ಚಂಡಮಾರುತದ ಸಂದರ್ಭದಲ್ಲಿ ಪೂರ್ವ ಗೋದಾವರಿ ಜಿಲ್ಲೆಯ ಕರಾವಳಿಯಲ್ಲೂ ಚಿನ್ನದ ನಾಣ್ಯಗಳು ಪತ್ತೆಯಾಗಿದ್ದವು. ಇದೀಗ ಸುನ್ನಪಲ್ಲಿ ಬಂದರಿಗೆ ಚಿನ್ನದ ರಥ ಅಪ್ಪಳಿಸಿದ್ದು, ಈ ವಿಷಯ ತಿಳಿದ ಕರಾವಳಿ ಪೊಲೀಸರು ಕೂಡ ಸ್ಥಳಕ್ಕೆ ಧಾವಿಸಿ ರಥವನ್ನು ಪರಿಶೀಲಿಸಿದ್ದು, ಅದರ ಮೂಲ ಯಾವುದೆಂದು ಹುಡುಕುತ್ತಿದ್ದಾರೆ. (ಏಜೆನ್ಸೀಸ್​)

    ಕೆಲಸ ಮಾಡುವ ಸ್ಥಳದಲ್ಲಿ ಲಿಫ್ಟ್​ ಬಾಗಿಲ ಮಧ್ಯೆ ತಲೆ ಸಿಲುಕಿ ವ್ಯಕ್ತಿಯ ದುರ್ಮರಣ: ವಿಫಲವಾದ ಪ್ರಯತ್ನ

    ವಿಜಯ್​ಗೂ ಚಮಕ್​ ಕೊಟ್ರಾ ಚರಿಷ್ಮಾ ಸುಂದರಿ? ರಶ್ಮಿಕಾ ಬಗ್ಗೆ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ!

    ಚಿಕನ್​ ಪ್ರಿಯರಿಗೆ ಭಾರಿ ಶಾಕ್​! ಮಾಂಸದ ಬೆಲೆ ದಿಢೀರ್​ ಗಗನಕ್ಕೆ- ಜನರು ಕಂಗಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts