ಕೆಲಸ ಮಾಡುವ ಸ್ಥಳದಲ್ಲಿ ಲಿಫ್ಟ್​ ಬಾಗಿಲ ಮಧ್ಯೆ ತಲೆ ಸಿಲುಕಿ ವ್ಯಕ್ತಿಯ ದುರ್ಮರಣ: ವಿಫಲವಾದ ಪ್ರಯತ್ನ

Death
Published on

ತಿರುವನಂತಪುರಂ: ತಾನು ಕೆಲಸ ಮಾಡುವ ಸ್ಥಳದಲ್ಲಿ ಲಿಫ್ಟ್​ ಬಾಗಿಲ ನಡುವೆ ತಲೆ ಸಿಲುಕಿ ಉದ್ಯೋಗಿಯೊಬ್ಬ ಮೃತಪಟ್ಟಿರುವ ದಾರುಣ ಘಟನೆ ಕೇರಳದ ತಿರುವನಂಪುರಂನಲ್ಲಿ ನಡೆದಿದೆ.

ನೆಮೊಮ್​ ಮೂಲದ ಸತೀಶ್​ ಕುಮಾರ್​ (59) ಮೃತ ದುರ್ದೈವಿ. ಸತೀಶ್​ ಅಂಬಾಲಮುಕ್ಕುವಿನಲ್ಲಿರುವ ಎಸ್​ಕೆಪಿ ಸ್ಯಾನಿಟರಿ ಸ್ಟೋರ್​ನಲ್ಲಿ ಉದ್ಯೋಗಿಯಾಗಿದ್ದ. ಲಿಫ್ಟ್​ ಒಳಗೆ ಸರಕುಗಳನ್ನು ತುಂಬಿಕೊಂಡು ಶಾಪ್​ಗೆ ತೆಗೆದುಕೊಂಡು ಹೋಗುವಾಗ ಎಲಿವೇಟರ್​ನ ಬಾಗಿಲಿಗೆ ತಲೆ ಸಿಲುಕಿ ಮೃತಪಟ್ಟಿದ್ದಾನೆ.

ಅಗ್ನಿಶಾಮಕ ಸಿಬ್ಬಂದಿ ಬಹುಬೇಗನೇ ಸ್ಥಳಕ್ಕೆ ಧಾವಿಸಿ ಸತೀಶ್​ನನ್ನು ಲಿಫ್ಟ್​ನಿಂದ ಹೊರಗೆ ತೆಗೆಯುವ ಪ್ರಯತ್ನ ಮಾಡಿದಾದರೂ ಆತನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಸತೀಶ್​ ಕೊನೆಯುಸಿರೆಳಿದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net