ಲಖನೌ: ಉತ್ತರ ಪ್ರದೇಶದ ಗ್ರಾಮ ಪಂಚಾಯಿತಿ ಚುನಾವಣಾ ಸಂದರ್ಭದಲ್ಲಿ ಮುಂಬೈನಿಂದ ವಿವಿಧ ಹಳ್ಳಿಗಳಿಗೆ ಹಿಂದಿರುಗಿದ ವಲಸೆ ಕಾರ್ಮಿಕರಿಂದ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕರೊನಾ ವೈರಸ್ ಸೋಂಕು ಹರಡಿರುವುದಾಗಿ ತಿಳಿದುಬಂದಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಉತ್ತರ ಪ್ರದೇಶದ ಗೊಂಡಾದ ನಿಂದೂರಾ ಗ್ರಾಮದ 22 ಮಂದಿ ಕೋವಿಡ್ ರೀತಿಯ ರೋಗ ಲಕ್ಷಣಗಳಿಂದ ಸುಮಾರು ದಿವಸಗಳಿಂದ ಯಾವುದೇ ವೈದ್ಯಕೀಯ ನೆರವು ಇಲ್ಲದೆ ಮೃತಪಟ್ಟಿದ್ದಾರೆ.
ಮುಂಬೈನಿಂದ ವಲಸೆ ಕಾರ್ಮಿಕರು ಹಳ್ಳಿಗಳಿಗೆ ಬರುವ ಮುನ್ನ ಎಲ್ಲವೂ ಸರಿಯಾಗಿಯೇ ಇತ್ತು. ಮಹರಾಷ್ಟ್ರದಲ್ಲಿ ಲಾಕ್ಡೌನ್ ಹೇರಿದ ಬಳಿಕ ಹಾಗೂ ಕೆಲವರು ಉತ್ತರ ಪ್ರದೇಶ ಪಂಚಾಯತ್ ಚುನಾವಣೆಯಲ್ಲಿ ಮತಚಲಾವಣೆ ಮಾಡಲು ಹಳ್ಳಿಗಳಿಗೆ ಹಿಂದಿರುಗಿದ್ದೇ ಗ್ರಾಮಗಳಲ್ಲಿ ಭಾರೀ ಕಳವಳಕ್ಕೆ ಕಾರಣವಾಯಿತು ಎಂದು ಗ್ರಾಮಸ್ಥರು ಮಾಧ್ಯಮಗಳ ಮುಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಸೋಂಕಿನಿಂದ ತಂದೆ ಮತ್ತು ಮಗ ಒಂದೇ ದಿನ ಮೃತಪಟ್ಟರು. ಹಾರ್ಡ್ವೇರ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ 28 ವರ್ಷದ ಮೊಹಮ್ಮದ್ ಅರ್ಷದ್ ಕೊಲೊನೆಲ್ಗಂಜ್ ಆರೋಗ್ಯ ಕೇಂದ್ರದಲ್ಲಿ ಕೊನೆಯುಸಿರೆಳೆದನು. ಮೂವರು ಮಕ್ಕಳು ಮತ್ತು ಪತ್ನಿಯನ್ನು ಬಿಟ್ಟು ಅಗಲಿದ್ದಾನೆ.
ಮೊಹಮ್ಮದ್ ತಂದೆ 40 ವರ್ಷದ ಮೊಹ್ದ್ ಸಾದ್ ಸಹ ಕರೊನಾ ಪಾಸಿಟಿವ್ ಆಗಿ ಆಸ್ಪತ್ರೆಗೆ ದಾಖಲಾದ. ಎರಡು ದಿನಗಳ ನಂತರ ಅವರು ಕೂಡ ಮೃತಪಟ್ಟರು. ಒಬ್ಬರ ಹಿಂದೆ ಒಬ್ಬರಂತೆ ಕುಟುಂಬದ ಇಬ್ಬರನ್ನು ಕಳೆದುಕೊಂಡು ಕುಟುಂಬ ಸಂಕಷ್ಟಕ್ಕೀಡಾಗಿದೆ. ಕರೊನಾ ಟೆಸ್ಟ್ ಮಾಡಲು ಯಾರು ಸಹ ಹಳ್ಳಿಗೆ ಬರುತ್ತಿಲ್ಲ. ಅಲ್ಲದೆ, ಯಾವುದೇ ಮೆಡಿಕಲ್ ಕಿಟ್ ಸಹ ನೀಡುತ್ತಿಲ್ಲ ಎಂದು ಮೃತ ಕುಟುಂಬದ ಸದಸ್ಯರಾದ ಮುಕೀದ್ ಖಾನ್ ಮತ್ತು ಮೊಹ್ದ್ ಶೋಯೆಬ್ ಆಕ್ರೋಶ ಹೊರಹಾಕಿದ್ದಾರೆ.
ಹೀಗೆ ಚಿಕಿತ್ಸೆ ದೊರೆಯದೇ ಸುಮಾರು 22 ಮಂದಿ ಉತ್ತರ ಪ್ರದೇಶಲ್ಲಿ ಅಸುನೀಗಿದ್ದಾರೆ. ಗೊಂಡಾದ ಹಳ್ಳಿಗಳಲ್ಲಿ ಯಾವುದೇ ಸೌಲಭ್ಯ ಇಲ್ಲದಿದ್ದನ್ನು ಪ್ರಶ್ನಿಸಿದರೆ, ಯಾವೊಬ್ಬ ಅಧಿಕಾರಿಗಳಿಂದಲೂ ಯಾವುದೇ ಮಾತು ಹೊರಬರುತ್ತಿಲ್ಲ. ಜನರಿಗೆ ಏನು ನಡೆಯುತ್ತಿದೆ ಎಂಬ ಅರಿವು ಸಹ ಇಲ್ಲದೆ ಆರೋಗ್ಯ ತೀವ್ರವಾಗಿ ಹದಗೆಟ್ಟು ಸಾಕಷ್ಟು ಮಂದಿ ಸಾಯುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ. (ಏಜೆನ್ಸೀಸ್)
ಪತ್ನಿಗೆ ಕರೆ ಮಾಡಿದಾಗಲೆಲ್ಲ ಕೇಳಿ ಬರ್ತಿದ್ದ ಒಂದೇ ಮಾತಿಂದ ಸೈಕೋ ಆದ ಗಂಡ: ನಡೆದೇ ಹೋಯ್ತು ಭೀಕರ ಕೃತ್ಯ!
ಏರ್ ಇಂಡಿಯಾ ಸರ್ವರ್ ಮೇಲೆ ಸೈಬರ್ ದಾಳಿ: 4.5 ಮಿಲಿಯನ್ ಗ್ರಾಹಕರ ದತ್ತಾಂಶ ಸೋರಿಕೆ
ತಮ್ಮನೋ ತಂಗಿಯೋ ಇದ್ದಿದ್ರೆ ಚೆನ್ನಾಗಿರ್ತಿತ್ತು!; ಒಂದೇ ಮಗುವಿರುವ ಮನೆಗಳಲ್ಲಿ ಒಂಟಿತನ..