More

    ಹಸ್ತಮೈಥುನದಿಂದ ಶ್ವಾಸಕೋಸದ ಪೊರೆ ಹರಿತ! 20ರ ಯುವಕನ ಎಕ್ಸ್​ರೇ ವರದಿಯಲ್ಲಿತ್ತು ಭಯಾನಕ ಅಂಶ

    ಬರ್ನ್: ತೀವ್ರ ಹಸ್ತಮೈಥುನದಿಂದ ಶ್ವಾಸಕೋಸಕ್ಕೆ ಹಾನಿಯಾಗಿ 20 ವರ್ಷದ ಯುವಕನೊಬ್ಬ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸ್ವಿಟ್ಜರ್​ಲೆಂಡ್​ನಲ್ಲಿ ನಡೆದಿದ್ದು, ಯುವಕನನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿದೆ.

    ಜರ್ನಲ್​ ಆಫ್​ ಥೋರಾಸಿಕ್​ ಡಿಸೀಸ್​ ವರದಿಯ ಪ್ರಕಾರ ಬೆಡ್​ ಮೇಲೆ ಮಲಗಿ ತೀವ್ರ ಹಸ್ತಮೈಥುನ ಮಾಡಿಕೊಳ್ಳುವಾಗ ದಿಢೀರನೇ ಎದೆ ನೋವು ಕಾಣಿಸಿಕೊಂಡಿದ್ದರಿಂದ ಹೆದರಿ ತಕ್ಷಣ ಆಸ್ಪತ್ರೆಯ ತುರ್ತು ಚಿಕಿತ್ಸಾ ಕೊಠಡಿಗೆ ಯುವಕ ದಾಖಲಾಗಿದ್ದಾನೆ. ಇದಾದ ಬಳಿಕ ವೈದ್ಯರ ಪರೀಕ್ಷಿಸಿದ್ದು, ಉಸಿರನ್ನು ಒಳಗೆ ಮತ್ತು ಹೊರಗೆ ಬಿಡುವಾಗ ಊದಿಕೊಂಡ ಮತ್ತು ಬಿರುಕಿನ ಶಬ್ದವನ್ನು ಯುವಕ ಅನುಭವಿಸಿದ್ದಾನೆಂದು ತಿಳಿದುಬಂದಿದೆ.

    ಯುವಕ ಅಸ್ತಮಾದಿಂದ ಬಳಲುತ್ತಿರುವುದು ಆತನ ಕೇಸ್​ ಹಿಸ್ಟರಿಯಿಂದ ತಿಳಿದುಬಂದಿದೆ. ಅಲ್ಲದೆ, ನ್ಯುಮೋಮೆಡಿಯಾಸ್ಟಿನಮ್ ಎಂಬ ವಿರಳ ಪರಿಸ್ಥಿತಿಯನ್ನು ಎದುರಿಸುತ್ತಿರುವುದಾಗಿ ರೋಗಿಯ ಎದೆಯ ಎಕ್ಷರೇ ವರದಿ ಬಹಿರಂಗಪಡಿಸಿದೆ. ಉಸಿರಾಟದ ವ್ಯವಸ್ಥೆಯ ಮೂಲಕ ಪರಿಚಲನೆಗೊಳ್ಳುವ ಗಾಳಿಯು ಎರಡು ಶ್ವಾಸಕೋಶಗಳ ನಡುವಿನ ಎದೆಯ ಜಾಗದಿಂದ ಹೊರಬರುವಾಗ ಅಲ್ಲಿಯೇ ಸಿಕ್ಕಿಕೊಂಡಾಗ ಈ ರೋಗ ಸ್ಥಿತಿ ಉಂಟಾಗುತ್ತದೆ.

    ಇನ್ನು ಈ ಇಂತಹ ಸ್ಥಿತಿ ಅತಿಯಾದ ಕೆಮ್ಮುವಿಕೆ, ಅತಿಯಾದ ವಾಂತಿ ಮತ್ತು ಕಠಿಣ ವ್ಯಾಯಾಮದಿಂದ ಸಂಭವಿಸುತ್ತದೆ. ಹಸ್ತಮೈಥುನ ಸಂದರ್ಭದಲ್ಲಿ ಸ್ಕಲನವನ್ನು ಸ್ವಲ್ಪ ಸಮಯದವರೆಗೆ ತಡೆಹಿಡಿದು ಬಿಟ್ಟಿದ್ದು ಹಾಗೂ ಉಸಿರಾಟ ನಿಯಂತ್ರಣ ಮಾಡಿದ್ದೂ ಈ ರೀತಿ ಆಗಲು ಕಾರಣವಾಗಿರಬಹುದು. ಶ್ವಾಸಕೋಶಗಳು ಅಥವಾ ಅನ್ನನಾಳಕ್ಕೆ ದೈಹಿಕ ಆಘಾತದಿಂದ ನ್ಯುಮೋಮೆಡಿಯಾಸ್ಟಿನಮ್ ಉಂಟಾಗಬಹುದು. ಎದೆಯ ಕುಹರದೊಳಗಿನ ಒತ್ತಡ ದಿಢೀರ್​ ಹೆಚ್ಚಾದರೆ, ಶ್ವಾಸಕೋಶದಲ್ಲಿ ಪೊರೆ ಹರಿದು, ಗಾಳಿ ಹೊರ ಬಂದಾಗ ಹೀಗಾಗುತ್ತದೆ.

    ಈ ರೀತಿಯ ಗಾಯವು ಯುವಕರಲ್ಲಿ ಸಂಭವಿಸುವ ಸಾಧ್ಯತೆ ಹೆಚ್ಚು. ಸದ್ಯ ವೈದ್ಯರು ಆ ವ್ಯಕ್ತಿಯನ್ನು ವೀಕ್ಷಣೆಗಾಗಿ ತೀವ್ರ ನಿಗಾ ಘಟಕದಲ್ಲಿ ಇರಿಸಿದ್ದಾರೆ. ರೋಗಿಯ ಎದೆ ನೋವನ್ನು ಕಡಿಮೆ ಮಾಡಲು ಅವನಿಗೆ ರೋಗನಿರೋಧಕವನ್ನು ನೀಡಲಾಗಿದ್ದು, ಅದೃಷ್ಟವಶಾತ್ ಶೀಘ್ರವಾಗಿ ಚೇತರಿಸಿಕೊಂಡಿದ್ದು, ನಾಲ್ಕು ದಿನಗಳ ನಂತರ ಬಿಡುಗಡೆ ಮಾಡಲಾಗಿದೆ. (ಏಜೆನ್ಸೀಸ್​)

    KGF-2 ಕನ್ನಡದ ಹೆಮ್ಮೆಯಲ್ಲ ಎನ್ನುತ್ತಲೇ ದಂಡುಪಾಳ್ಯ ಚಿತ್ರದ ಭಯಾನಕ ಉದಾಹರಣೆ ಕೊಟ್ಟ ಭಾಸ್ಕರ್​ ರಾವ್!​

    ಹುಬ್ಬಳ್ಳಿ ಗಲಭೆ ಪ್ರಕರಣ: ಏ.20ರವರೆಗೆ ನಗರದಾದ್ಯಂತ 144 ಸೆಕ್ಷನ್​​ ಜಾರಿ, ವಾಣಿಜ್ಯ ನಗರದ ಪರಿಸ್ಥಿತಿ ಉದ್ವಿಗ್ನ

    ಮತ್ತೊಮ್ಮೆ ಸಾಮಾನ್ಯರ ಪಾಲಿನ ದೇವರಾದ ಸೂರ್ಯ: ಇದಲ್ಲವೇ ನಟನಿಗೆ ಇರಬೇಕಾದ ಸಾಮಾಜಿಕ ಕಳಕಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts