More

  ಮಗಳಿಂದ ದೂರವಿರುವಂತೆ ಎಚ್ಚರಿಕೆ ನೀಡಿದ್ದಕ್ಕೆ ಪ್ರೇಯಸಿಯ ತಂದೆಯನ್ನೇ ಬರ್ಬರವಾಗಿ ಕೊಂದ ಯುವಕ!

  ಬಾಗಲಕೋಟೆ: ಮಗಳ ಸಹವಾಸ ಬಿಡು ಎಂದು ಹೇಳಿದ್ದಕ್ಕೆ ಪ್ರೇಯಸಿಯ ತಂದೆಯನ್ನೇ ಯುವಕನೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬಾಗಲಕೋಟೆ ತಾಲೂಕಿನ ಭಗವತಿ ಗ್ರಾಮದಲ್ಲಿ ನಡೆದಿದೆ.

  ಸಂಗನಗೌಡ ಪಾಟಿಲ್(52) ಕೊಲೆಯಾದ ವ್ಯಕ್ತಿ. ಪ್ರವೀಣ ಕಾಂಬಳೆ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಅಂತರ್ಜಾತಿಯ ಯುವತಿಯನ್ನು ಆರೋಪಿ ಪ್ರವೀಣ್​ ಪ್ರೀತಿಸಿದ್ದ. ಈ ವಿಚಾರ ಯುವತಿಯ ಪಾಲಕರಿಗೆ ತಿಳಿದು ಮಗಳಿಗೆ ಬುದ್ಧಿ ಹೇಳಿದ್ದರು.

  ಇದಿಷ್ಟೇ ಅಲ್ಲದೆ, ಪ್ರವೀಣ್​ಗೂ ಹಿಗ್ಗಾಮುಗ್ಗಾ ಥಳಿಸಿ, ಮಗಳಿಂದ ದೂರ ಇರುವಂತೆ ಎಚ್ಚರಿಕೆ ನೀಡಿದ್ದರು. ಇದರಿಂದ ತೀವ್ರ ಅಸಮಾಧಾನಗೊಂಡಿದ್ದ ಪ್ರವೀಣ್​, ಅದೇ ಸೇಡಿನಲ್ಲಿ ಮಚ್ಚಿನಿಂದ ಪ್ರೇಯಸಿಯ ತಂದೆ ಸಂಗನಗೌಡ ಪಾಟಿಲ್​ ಕುತ್ತಿಗೆಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.

  ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಬಾಗಲಕೋಟೆ ಠಾಣಾ ಪೊಲೀಸರು, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರ ನಡುವೆ ಆರೋಪಿ ಪ್ರವೀಣ್​ ಕೈಯಲ್ಲಿ ಮಚ್ಚು ಹಿಡಿದು ರಸ್ತೆಯಲ್ಲಿ ಓಡಾಡಿರುವ ವಿಡಿಯೋ ವೈರಲ್ ಆಗಿದೆ.

  ಮಗಳಿಂದಲೇ ಬಯಲಾಯ್ತು ನಟಿ ಲಕ್ಷ್ಮೀಗಿದ್ದ ಅಫೇರ್! ದಾಂಪತ್ಯ ದ್ರೋಹದ ಗುಟ್ಟು ಬಿಚ್ಚಿಟ್ಟ ಮಾಜಿ ಗಂಡ

  6ನೇ ತರಗತಿ ಫೇಲ್​, ಖಿನ್ನತೆ… ಛಲಬಿಡದ ಈ ಯುವತಿ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆ ಪಾಸ್​!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts