More

    ಟೆಕ್ಸಾಸ್​ ಶಾಲೆಯಲ್ಲಿ ಯುವಕನಿಂದ ಗುಂಡಿನ ದಾಳಿ: 18 ಶಾಲಾಮಕ್ಕಳು ಸೇರಿದಂತೆ 21 ಮಂದಿ ದುರಂತ ಸಾವು

    ನ್ಯೂಯಾರ್ಕ್​: ಶಸ್ತ್ರಧಾರಿ ಯುವಕನೊಬ್ಬ ನಡೆಸಿದ ಗುಂಡಿನ ದಾಳಿಗೆ 18 ಶಾಲಾ ಮಕ್ಕಳು ಸೇರಿದಂತೆ 21 ಮಂದಿ ಸಾವಿಗೀಡಾಗಿರುವ ಘಟನೆ ಅಮೆರಿಕದ ಟೆಕ್ಸಾಸ್​ನಲ್ಲಿ ಮಂಗಳವಾರ ನಡೆದಿದೆ.

    ಟೆಕ್ಸಾಸ್​ನ ಉವಾಲ್ದೆ ಕೌಂಟಿಯಲ್ಲಿರುವ ಪ್ರಾಥಮಿಕ ಶಾಲಾ ಆವರಣದ ಒಳಗೆ 18 ವರ್ಷದ ಯುವಕ ಮನಬಂದಂತೆ ಗುಂಡಿನ ಮಳೆಗೆರೆದಿದ್ದಾನೆ ಎಂದು ಟೆಕ್ಸಾಸ್​ನ ಗವರ್ನರ್​ ಗ್ರೇಗ್​ ಅಬ್ಬೋಟ್​ ತಿಳಿಸಿದ್ದಾರೆ. ಮೃತಪಟ್ಟವರಲ್ಲಿ 18 ಶಾಲಾ ಮಕ್ಕಳು ಹಾಗೂ ಮೂವರು ವಯಸ್ಕರಾಗಿದ್ದಾರೆ.

    ಶಂಕಿತ ದಾಳಿಕೋರನನ್ನು ಸಾಲ್ವಡೋರ್​ ರಾಮೋಸ್​ ಎಂದು ಗುರುತಿಸಲಾಗಿದೆ. ಗುಂಡಿನ ದಾಳಿಯ ವೇಳೆಯೇ ಪೊಲೀಸರು ರಾಮೋಸ್​ ಮೇಲೆ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ.​ ದಾಳಿಕೋರನು ಕೈ ಬಂದೂಕು ಮತ್ತು ರೈಫಲ್‌ನಿಂದ ದಾಳಿ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

    ಗುಂಡಿನ ದಾಳಿಯ ವೇಳೆ ಇಬ್ಬರು ಪೊಲೀಸ್ ಅಧಿಕಾರಿಗಳಿಗೂ ಗುಂಡು ತಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಕೂಡ ಬದುಕುಳಿಯುವ ನಿರೀಕ್ಷೆಯಿದೆ ಎಂದು ಗವರ್ನರ್​ ಅಬ್ಬೋಟ್​ ಹೇಳಿದ್ದಾರೆ. ಮೃತಪಟ್ಟವರ ಜೊತೆಗೆ ಎಷ್ಟು ಜನರು ಗಾಯಗೊಂಡಿದ್ದಾರೆ ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ, ಆದರೆ ಹಲವಾರು ಮಂದಿಗೆ ಗಾಯಗಳಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

    ಯುಎಸ್​ ಶಾಲೆಯೊಂದರಲ್ಲಿ ಸುಮಾರು ಒಂದು ದಶಕದ ಬಳಿಕ ನಡೆದ ಅತ್ಯಂತ ಭೀಕರ ಗುಂಡಿನ ದಾಳಿ ಇದಾಗಿದೆ ಮತ್ತು ಟೆಕ್ಸಾಸ್ ಇತಿಹಾಸದಲ್ಲೇ ಅತ್ಯಂತ ಮಾರಣಾಂತಿಕ ಶಾಲಾ ಗುಂಡಿನ ದಾಳಿಯಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಫೆಡರಲ್ ಕಾನೂನು ಜಾರಿ ಅಧಿಕಾರಿಗಳು ತಿಳಿಸಿರುವುದಾಗಿ ಅಸೋಸಿಯೇಟೆಡ್​ ಪ್ರೆಸ್ (ಎಪಿ) ತಿಳಿಸಿದೆ.

    ಟೆಕ್ಸಾಸ್​ನಲ್ಲಿ ನಡೆದ ಗುಂಡಿನ ದಾಳಿಯ ಬಗ್ಗೆ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಮಾಹಿತಿ ನೀಡಲಾಗಿದೆ. ಸದ್ಯ ಅವರು ದಕ್ಷಿಣ ಕೊರಿಯಾ ಮತ್ತು ಜಪಾನ್‌ಗೆ ಐದು ದಿನಗಳ ಪ್ರವಾಸದಲ್ಲಿದ್ದು, ಅಲ್ಲಿಂದ ಹಿಂದಿರುಗಿದ ಬಳಿಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. ದುರಂತದ ಕರಾಳ ಆಚರಣೆಗಾಗಿ ಮೇ 28 ರವರೆಗೆ ಪ್ರತಿದಿನ ಸೂರ್ಯಾಸ್ತದವರೆಗೆ ಧ್ವಜಗಳನ್ನು ಅರ್ಧದಷ್ಟು ಹಾರಿಸಬೇಕೆಂದು ಬೈಡೆನ್ ಆದೇಶಿಸಿದ್ದಾರೆ. (ಏಜೆನ್ಸೀಸ್​)

    ಲವ್ ಬರ್ಡ್ಸ್​ಗೆ ಮಿಲನಾ; ಮದುವೆ ಆದ ಮೇಲಿನ ಪ್ರೀತಿಯ ಕಥೆ..

    ರಾಗಿಣಿ 2.0!; ಜನ್ಮದಿನದ ಸಂಭ್ರಮ

    ಇಂದು ಆರ್‌ಸಿಬಿ-ಎಲ್‌ಎಸ್‌ಜಿ ಎಲಿಮಿನೇಟರ್; ಗೆದ್ದವರು 2ನೇ ಕ್ವಾಲಿಫೈಯರ್‌ಗೆ ಅರ್ಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts