More

    ಅಮರನಾಥ ಮೇಘಸ್ಫೋಟ: ಸಾವಿನ ಸಂಖ್ಯೆ 16ಕ್ಕೇರಿಕೆ, 15 ಸಾವಿರಕ್ಕೂ ಹೆಚ್ಚು ಯಾತ್ರಿಗಳ ರಕ್ಷಣೆ

    ನವದೆಹಲಿ: ಹಿಂದುಗಳ ಪವಿತ್ರ ಕ್ಷೇತ್ರ ಅಮರನಾಥ ಬಳಿ ಸಂಭವಿಸಿರುವ ಮೇಘಸ್ಫೋಟಕ್ಕೆ ಬಲಿಯಾದವರ ಸಂಖ್ಯೆ 16 ಕ್ಕೇರಿದೆ. ಇದುವರೆಗೂ 40ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದು, 15 ಸಾವಿರಕ್ಕೂ ಹೆಚ್ಚು ಯಾತ್ರಿಗಳನ್ನು ಸುರಕ್ಷಿತ ತಾಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಅಮರನಾಥನ ಪವಿತ್ರ ಗುಹೆ ಪ್ರದೇಶದಲ್ಲಿ ಸಿಲುಕಿದ್ದ ಯಾತ್ರಿಗಳನ್ನು ಅಮರನಾಥ ಯಾತ್ರೆಯ ಮೂಲ ಶಿಬಿರ ಪಂಚತಾರ್ಣಿಗೆ ಕಳೆದ ಸಂಜೆ ಸ್ಥಳಾಂತರ ಮಾಡಲಾಗಿದೆ. ಇದುವರೆಗೂ 15 ಸಾವಿರಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ. 16 ಮಂದಿ ಮೃತಪಟ್ಟಿರುವುದು ಖಚಿತವಾಗಿದೆ. 40ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಘಟನಾ ಪ್ರದೇಶದಲ್ಲಿ ಯಾವುದೇ ಭೂಕುಸಿತಗಳು ಸಂಭವಿಸಿಲ್ಲ. ಆದರೆ, ಮಳೆ ಮುಂದುವರಿದಿದೆ. ಹೀಗಾಗಿ ರಕ್ಷಣಾ ಕಾರ್ಯಕ್ಕೆ ಯಾವುದೇ ತೊಂದರೆಗಳಾಗಿಲ್ಲ. 100 ರಕ್ಷಕರನ್ನು ಒಳಗೊಂಡ ನಾಲ್ಕು ಎನ್​ಡಿಆರ್​ಎಫ್​ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಇದಲ್ಲದೆ, ಇಂಡಿಯನ್​ ಆರ್ಮಿ, ಎಸ್​ಡಿಆರ್​ಎಫ್​, ಸಿಆರ್​ಪಿಎಫ್​ ಮತ್ತು ಸ್ಥಳೀಯ ಜನರು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಎನ್​ಡಿಆರ್​ಎಫ್​ ಮಹಾ ನಿರ್ದೇಶಕರಾದ ಅತುಲ್​ ಕರ್ವಾಲ್​ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಚಿನಾರ್​ ಕಾರ್ಪ್ಸ್​ ಕಮಾಂಡರ್​ ಲೆಫ್ಟಿನೆಂಟ್​ ಜನರಲ್​ ಎಡಿಎಸ್​ ಔಜ್ಲಾ ಅವರು ಮೇಘಸ್ಫೋಟದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಕಾಶ್ಮೀರದ ಇನ್ಸ್​ಪೆಕ್ಟರ್​ ಜನರಲ್​ ಆಫ್​ ಪೊಲೀಸ್​ ವಿಜಯ್​ ಕುಮಾರ್​ ಮತ್ತು ಕಾಶ್ಮೀರದ ವಿಭಾಗೀಯ ಆಯುಕ್ತರಾದ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

    ಪ್ರವಾಹ ಪೀಡಿತ ಪ್ರದೇಶಗಳಿಂದ ಸುರಕ್ಷಿತವಾಗಿ ಸ್ಥಳಾಂತರಿಸಲ್ಪಟ್ಟ ಯಾತ್ರಾರ್ಥಿಗಳು ಮೇಘಸ್ಫೋಟದಿಂದ ಉಂಟಾದ ಪ್ರವಾಹದ ಭಯಾನಕ ಘಟನೆಗಳನ್ನು ವಿವರಿಸಿದ್ದಾರೆ. ಮೇಘಸ್ಫೋಟ ಸಂಭವಿಸಿದ 10 ನಿಮಿಷಗಳಲ್ಲಿ, ಎಂಟು ಸಾವು-ನೋವುಗಳು ವರದಿಯಾಗಿದೆ. ಪ್ರವಾಹದ ನೀರು ತನ್ನೊಂದಿಗೆ ಹೆಚ್ಚಿನ ಸಂಖ್ಯೆಯ ಕಲ್ಲುಗಳನ್ನು ಸಹ ಹೊತ್ತೊಯ್ದಿದೆ. ಅಮರನಾಥ ಯಾತ್ರೆಗೆ ಸುಮಾರು 15,000 ಯಾತ್ರಿಕರು ಬಂದಿದ್ದರು. ಭಾರೀ ಮಳೆಯ ನಡುವೆಯೂ ಯಾತ್ರಿಕರು ಬರುತ್ತಲೇ ಇದ್ದರು ಎಂದು ಯಾತ್ರಿಕರೊಬ್ಬರು ಹೇಳಿದರು.

    ಉತ್ತರ ಪ್ರದೇಶದ ಹರ್ದೋಯ್‌ನ ಯಾತ್ರಾರ್ಥಿ ದೀಪಕ್ ಚೌಹಾಣ್ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಮೇಘಸ್ಫೋಟದಿಂದ ಕಾಲ್ತುಳಿತದಂತಹ ಪರಿಸ್ಥಿತಿಯು ಸಹ ಸಂಭವಿಸಿದೆ. ಆದರೆ, ಭಾರತೀಯ ಸೈನ್ಯವು ಸಾಕಷ್ಟು ಬೆಂಬಲ ನೀಡಿತು. ಪ್ರವಾಹದ ಕಾರಣದಿಂದಾಗಿ ಅನೇಕ ಪೆಂಡಾಲ್‌ಗಳು ಕೂಡ ನೀರಿನಲ್ಲಿ ಕೊಚ್ಚಿಹೋಗಿವೆ ಎಂದಿದ್ದಾರೆ.

    ಅಮರನಾಥ ಮೇಘಸ್ಫೋಟ: ಸಾವಿನ ಸಂಖ್ಯೆ 16ಕ್ಕೇರಿಕೆ, 15 ಸಾವಿರಕ್ಕೂ ಹೆಚ್ಚು ಯಾತ್ರಿಗಳ ರಕ್ಷಣೆ

    ಸದ್ಯ ಅಲ್ಲಿನ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೆ, ಮಳೆ ಮಾತ್ರ ಈಗಲೂ ಮುಂದುವರಿದಿದೆ. ಅಲ್ಲಿನ ಅಪಾಯದ ಮಟ್ಟವನ್ನು ಗಮನಿಸಿದರೆ, ಇಡೀ ಪ್ರದೇಶವು ಜಲಾವೃತವಾಗಿರುವ ಕಾರಣ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಐಟಿಬಿಪಿ ವಕ್ತಾರ ಪಿಆರ್​ಒ ವಿವೇಕ್​ ಕುಮಾರ್​ ಪಾಂಡೆ ಹೇಳಿದ್ದಾರೆ.

    ನಿನ್ನೆ (ಜೈಲೈ 08) ಸಂಜೆ 5.30ಕ್ಕೆ ಮೇಘಸ್ಫೋಟ ಸಂಭಿಸಿತು. ಇದರಿಂದ ದಿಢೀರ್​ ಪ್ರವಾಹ ಸೃಷ್ಟಿಯಾಗಿ ದೇವಸ್ಥಾನದ ಹೊರಗಿರುವ ಮೂಲ ಶಿಬಿರಕ್ಕೆ ಹಾನಿ ಉಂಟುಮಾಡಿತು. ಸುಮಾರು 25 ಟೆಂಟ್​ಗಳು ಮತ್ತು ಮೂರು ಸಮುದಾಯ ಕಿಚನ್​ಗಳಿಗೆ ಪ್ರವಾಹ ಹಾನಿಯುಂಟು ಮಾಡಿದೆ. ಘಟನಾ ಪ್ರದೇಶದಲ್ಲಿ ಸಂಜೆ 4.30 ರಿಂದ 6.30ರವರೆಗೆ 31 ಮಿ.ಮೀ ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಮೇಘಸ್ಫೋಟದಲ್ಲಿ ಪ್ರಾಣ ಕಳೆದುಕೊಂಡವರ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತ್ವರಿತ ರಕ್ಷಣಾ ಮತ್ತು ಪರಿಹಾರೋಪಾಯವನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಪಡೆಗಳು ಮತ್ತು ಜಮ್ಮು ಮತ್ತು ಕಾಶ್ಮೀರ ಆಡಳಿತಕ್ಕೆ ಸೂಚಿಸಿದ್ದಾರೆ.

    ಅಮರನಾಥ ಮೇಘಸ್ಫೋಟ: ಸಾವಿನ ಸಂಖ್ಯೆ 16ಕ್ಕೇರಿಕೆ, 15 ಸಾವಿರಕ್ಕೂ ಹೆಚ್ಚು ಯಾತ್ರಿಗಳ ರಕ್ಷಣೆ

    ಜಮ್ಮು ಮತ್ತು ಕಾಶ್ಮೀರ ಆಡಳಿತವು ನಾಲ್ಕು ಸಹಾಯವಾಣಿ ಸಂಖ್ಯೆಗಳನ್ನು ಸ್ಥಾಪಿಸಿದ್ದು, ಅಲ್ಲಿ ಜನರು ಘಟನೆಯ ಬಗ್ಗೆ ಮಾಹಿತಿಯನ್ನು ಪಡೆಯಬಹುದು.

    43 ದಿನಗಳ ಅಮರನಾಥ ಯಾತ್ರೆಯು ಮೂರು ವರ್ಷಗಳ ಅಂತರದ ಬಳಿಕ ಜೂನ್ 30 ರಂದು ಪ್ರಾರಂಭವಾಯಿತು. 2019 ರಲ್ಲಿ ಕೇಂದ್ರವು ಸಂವಿಧಾನದ 370 ನಿಬಂಧನೆಗಳನ್ನು ರದ್ದುಗೊಳಿಸಿದ ಕಾರಣ ಯಾತ್ರೆಯನ್ನು ಮಧ್ಯದಲ್ಲಿಯೇ ರದ್ದುಗೊಳಿಸಲಾಯಿತು. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ 2020 ಮತ್ತು 2021 ರಲ್ಲಿ ತೀರ್ಥಯಾತ್ರೆ ನಡೆಯಲಿಲ್ಲ. ಮೂರು ವರ್ಷಗಳ ಬಳಿಕ ಯಾತ್ರೆ ಆರಂಭವಾಗಿದ್ದು, ಇದರ ಬೆನ್ನಲ್ಲೇ ಭಾರೀ ದುರಂತ ಸಂಭವಿಸಿದೆ. (ಏಜೆನ್ಸೀಸ್​)

    ಪ್ರಿಯಾ ಆನಂದ್​ಗೆ ನಿತ್ಯಾನಂದರನ್ನು ಮದ್ವೆಯಾಗೋ ಆಸೆಯಂತೆ! ಕಾಲಿವುಡ್​ ಬ್ಯೂಟಿ ಕೊಟ್ಟ ಕಾರಣ ಹೀಗಿದೆ…

    VIDEO: ಚಪ್ಪಲಿ ಹಾಕಿಕೊಂಡು ದಿನವೂ ವಾಕಿಂಗ್​ಗೆ ಹೋಗೋ ಆನೆ! ಈ ಕುತೂಹಲ ನೋಡಲು ಭಕ್ತರ ದಂಡು…

    ಇಂಜಿನಿಯರ್​ ತಯಾರಿಸ್ತಿರೋ ಸಕತ್​ ಟೇಸ್ಟಿ ಚಾಕೊಲೇಟ್​ ಇವಂತೆ: ನೀವೂ ತಿಂದಿರಬಹುದು…ಹಾಗಿದ್ದರೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts