More

    ಸೇವೆಗೆ ನಿವೃತ್ತಿ ಎಂಬುದು ಇಲ್ಲ

    ಬೇಲೂರು : ನಿವೃತ್ತಿ ಕೇವಲ ವ್ಯಕ್ತಿಗೆ ಹೊರತು ಶಿಕ್ಷಣ ಸೇವೆಗೆ ಅಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಮಾಜಿ ಅಧ್ಯಕ್ಷ ಟಿ.ಡಿ.ತಮ್ಮಣ್ಣಗೌಡ ಹೇಳಿದರು.
    ಸೇವೆಯಿಂದ ನಿವೃತ್ತರಾದ ತಾಲೂಕಿನ ಹಲ್ಮಿಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಲಕ್ಷ್ಮಣ್, ಸಿದ್ಧರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ರಮೇಶ ಗೌಡ ಹಾಗೂ ಪೇಟೆ ಸರ್ಕಾರಿ ಹಿರಿಯ ಪ್ರಾಥಾಮಿಕ ಶಾಲೆ ಶಿಕ್ಷಕಿ ಪ್ರೇಮಾಲೀಲಾ ಅವರನ್ನು ಇಲ್ಲಿನ ಶ್ರೀ ಚನ್ನಕೇಶವಸ್ವಾಮಿ ದೇಗುಲದ ಆವರಣ ಸನ್ಮಾನಿಸಿ ಅವರು ಮಾತನಾಡಿದರು.
    ಮೂವರು ಶಿಕ್ಷಕರು ತಮ್ಮ ಸೇವಾವಧಿಯಲ್ಲಿ ನಿಸ್ವಾರ್ಥವಾಗಿ ಕೆಲಸ ಮಾಡಿದ್ದಾರೆ. ಮಕ್ಕಳಿಗೆ ವಿದ್ಯೆ ಕಲಿಸಿ ಸಾರ್ಥಕತೆ ಮೆರೆದಿದ್ದಾರೆ ಎಂದರು. ನಿವೃತ್ತಿ ಎಂಬುದು ಸರ್ಕಾರದ ಮಾನದಂಡ. ಅದಕ್ಕೆ ಎಲ್ಲರೂ ಭಾಗಿಯಾಗುತ್ತಾರೆ, ನಿವೃತ್ತಿ ನಂತರವೂ ಇವರು ಕಲಿಕಾ ಸೇವೆ ಮುಂದುವರಿಸಬಹುದು ಎಂದರು.
    ಮಕ್ಕಳ ಭವಿಷ್ಯ ರೂಪಿಸಿದ್ದಾರೆ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷ ಮಾ.ನ.ಮಂಜೇಗೌಡ ಮಾತನಾಡಿ, ಮೂವರು ಶಿಕ್ಷಕರು ಹಳ್ಳಿಗಾಡಿನಲ್ಲಿ ಕೆಲಸ ಮಾಡಿದ್ದಾರೆ. ಪಾಲಕರ ಮನ ಒಲಿಸಿ ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ದಾಖಲಾಗುವಂತೆ ಮಾಡಿದ್ದಾರೆ. ಅವರ ಸೇವೆ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಕೇಶವೇಗೌಡ, ನಿರ್ದೇಶಕ ಭದ್ರೇಗೌಡ, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಗಂಗಾಧರ, ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಬಿ.ಸಿ.ಆನಂದ್, ಶಿಕ್ಷಕ ರಮೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts