More

    ಕಾಬೂಲ್​ನಲ್ಲಿ ಶಾಲೆಯನ್ನು ಗುರಿಯಾಗಿಸಿ ಬಾಂಬ್​ ದಾಳಿ: 100 ಮಕ್ಕಳ ದುರ್ಮರಣ, ಭಯಾನಕ ಸ್ಥಿತಿ ಬಿಚ್ಚಿಟ್ಟ ವಿಡಿಯೋಗಳು

    ಕಾಬೂಲ್​: ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್​ನ ಶಿಕ್ಷಣ ಕೇಂದ್ರವೊಂದರ ಮೇಲೆ ನಡೆದ ಆತ್ಮಾಹುತಿ ಬಾಂಬ್​ ದಾಳಿಯಲ್ಲಿ ಸುಮಾರು 100 ಮಕ್ಕಳು ಮೃತಪಟ್ಟಿರುವುದಾಗಿ ಶುಕ್ರವಾರ ವರದಿಯಾಗಿದೆ.

    ಘಟನೆಯಲ್ಲಿ ಹತ್ಯೆಗೀಡಾದ ಬಹುತೇಕ ಮಕ್ಕಳು ಹಜಾರಸ್​ ಮತ್ತು ಶಿಯಾ ಪಂಗಡಕ್ಕೆ ಸೇರಿದವರೆಂದು ಸ್ಥಳೀಯ ಪತ್ರಕರ್ತರು ಮಾಹಿತಿ ನೀಡಿದ್ದಾರೆ. ಹಜಾರಸ್​, ಆಫ್ಘಾನ್​ನ ಮೂರನೇ ಅತಿ ದೊಡ್ಡ ಜನಾಂಗೀಯ ಗುಂಪಾಗಿದೆ. ಕಾಬೂಲ್​ ನಗರದ ಪಶ್ಚಿಮ ಭಾಗದಲ್ಲಿರುವ ದಶ್ತ್​ ಇ ಬಾರ್ಚಿಯ ಕಾಜ್​ ಶಿಕ್ಷಣ ಕೇಂದ್ರದಲ್ಲಿ ಬಾಂಬ್​ ಸ್ಫೋಟಿಸಲಾಗಿದೆ.

    ಘಟನೆಯ ಬಗ್ಗೆ ಸ್ಥಳೀಯ ಪತ್ರಕರ್ತ ಬಿಲಾಲ್​ ಸರ್ವಾರಿ ಟ್ವೀಟ್​ ಮಾಡಿದ್ದು, ಇಲ್ಲಿವರೆಗೆ ನಾವು 100 ವಿದ್ಯಾರ್ಥಿಗಳ ಮೃತದೇಹವನ್ನು ಲೆಕ್ಕ ಹಾಕಿದ್ದೇವೆ. ದಾಳಿಯಲ್ಲಿ ಕೊಲ್ಲಲ್ಪಟ್ಟ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚು. ಯೂನಿವರ್ಸಿಟಿ ಪ್ರವೇಶ ಪರೀಕ್ಷೆಯಾಗಿದ್ದರಿಂದ ತರಗತಿ ತುಂಬಿ ತುಳುಕುತ್ತಿತ್ತು. ಸ್ಫೋಟದ ಪರಿಣಾಮ ಕೈ-ಕಾಲುಗಳು ಹಾಗೂ ದೇಹದ ಭಾಗಗಳು ಛಿದ್ರ ಛಿದ್ರವಾಗಿದ್ದು, ಇಡೀ ಘಟನಾ ಸ್ಥಳ ಭೀಕರವಾಗಿತ್ತು ಎಂದಿದ್ದಾರೆ.

    ಬಾಂಬ್​ ದಾಳಿಗೂ ಮುನ್ನ ತುಂಬಿದ್ದ ತರಗತಿಯ ವಿಡಿಯೋ ಮತ್ತು ದಾಳಿಯ ನಂತರ ಶಾಲೆಯ ಸ್ಥಿತಿ ಮತ್ತು ವಿದ್ಯಾರ್ಥಿಗಳ ಶವಗಳು ಬಿದ್ದಿರುವ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ದಾಳಿಯ ತೀವ್ರತೆಗೆ ಸಾಕ್ಷಿಯಾಗಿವೆ.

    ಪಶ್ಚಿಮ ಕಾಬೂಲ್‌ನ ದಷ್ಟೆ ಬರ್ಚೆ ಏರಿಯಾವು ನಿರಂತರವಾಗಿ ಐಎಸ್​ಕೆಪಿ ದಾಳಿಗೆ ಗುರಿಯಾಗುತ್ತಿದೆ. ಬಾಂಬ್​ ದಾಳಿ ನಡೆದಾಗ ವಿದ್ಯಾರ್ಥಿಗಳು ಪರೀಕ್ಷೆಗಾಗಿ ತಯಾರು ಮಾಡಿಕೊಳ್ಳುತ್ತಿದ್ದರು ಎಂದು ಪೊಲೀಸ್​ ವಕ್ತಾರ ಖಾಲಿದ್​ ಜರ್ದಾನ್​ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅಲ್ಲದೆ, ಅಮೆರಿಕ ಕೂಡ ಬಾಂಬ್​ ದಾಳಿಯನ್ನು ಖಂಡಿಸಿದೆ. (ಏಜೆನ್ಸೀಸ್​)

    ಬೆಂಗಾವಲು ವಾಹನ ನಿಲ್ಲಿಸಿ ಆಂಬ್ಯುಲೆನ್ಸ್​ಗೆ ದಾರಿ ಮಾಡಿಕೊಟ್ಟ ಪ್ರಧಾನಿ ಮೋದಿ! ವಿಡಿಯೋ ವೈರಲ್​

    ನಟ ವಿಶಾಲ್​ ಮನೆಯ ಮೇಲೆ ಕಲ್ಲು ತೂರಾಟ: ದಾಳಿ ಹಿಂದಿನ ಕಾರಣ ಬಿಚ್ಚಿಟ್ಟ ನಾಲ್ವರು ಆರೋಪಿಗಳು

    ಈ ಬಾರಿಯ ಟಿ20 ವಿಶ್ವಕಪ್​ ಟೂರ್ನಿಯ ವಿಜೇತ ತಂಡಕ್ಕೆ ಸಿಗಲಿದೆ 13 ಕೋಟಿ ರೂ. ಬಹುಮಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts