More

    ನೀನೆ ಸಾಕಿದ ಗಿಣಿ ಹದ್ದಾಗಿ ಕುಕ್ಕಿತಲ್ಲೋ… ಉಗ್ರರ ದಾಳಿಗೆ ಪಾಕ್​ನ 10 ಸೈನಿಕರ ಸಾವು

    ಇಸ್ಲಮಾಬಾದ್​: ನೀನೆ ಸಾಕಿದ ಗಿಣಿ ಹದ್ದಾಗಿ ಕುಕ್ಕಿತಲ್ಲೋ ಎಂಬ ಮಾತಿಗೆ ಪಾಕಿಸ್ತಾನ ತಾಜಾ ಉದಾಹರಣೆಯಾಗಿದೆ. ಪಾಕ್​ ಅನ್ನು ಉಗ್ರರ ನಾಡು ಎಂದು ಕರೆಯಲಾಗುತ್ತದೆ. ಉಗ್ರರಿಗೂ ಮತ್ತು ಪಾಕ್​ ಸೈನಿಕರ ನಡುವೆ ಸಂಬಂಧ ಇರುವುದು ಆಗಾಗ ಸಾಬೀತಾಗುತ್ತಲೇ ಇರುತ್ತದೆ. ಇದರ ನಡುವೆ ಉಗ್ರರು ನಡೆಸಿದ ದಾಳಿಯಿಂದಲೇ ಪಾಕ್​ನ 10 ಯೋಧರು ಸಾವಿಗೀಡಾಗಿರುವ ಘಟನೆ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಕೀಚ್​ ಜಿಲ್ಲೆಯಲ್ಲಿರುವ ಚೆಕ್​ಪೋಸ್ಟ್​ ಬಳಿ ನಡೆದಿದೆ.

    ನೀಡಿದ್ದು, ಪಾಕ್​ ಮಿಲಿಟರಿಯ ಮಾಧ್ಯಮ ವಿಭಾಗವು ಈ ಬಗ್ಗೆ ಗುರುವಾರ ಮಾಹಿತಿ ನೀಡಿದೆ ಜನವರಿ 25 ಮತ್ತು 26ರ ಮಧ್ಯರಾತ್ರಿ ಉಗ್ರರು ದಾಳಿ ನಡೆಸಿದ್ದಾರೆ. ಈ ವೇಳೆ ಉಗ್ರರು ಮತ್ತು ಯೋಧರು ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 10 ಯೋಧರು ಮೃತಪಟ್ಟಿದ್ದು, ಓರ್ವ ಉಗ್ರ ಹತನಾಗಿದ್ದಾನೆ ಮತ್ತು ಅನೇಕರು ಗಾಯಗೊಂಡಿದ್ದಾರುವುದಾಗಿ ಸೇನೆ ತಿಳಿಸಿದೆ.

    ದಾಳಿಯ ಬಳಿಕ ನಡೆದ ತೆರವು ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಬಂಧಿಸಲಾಗಿದೆ ಎಂದು ಸೇನೆ ಹೇಳಿದೆ. ಎಷ್ಟೇ ಬೆಲೆ ತೆತ್ತಾದರೂ ನಮ್ಮ ನೆಲದಿಂದ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ಸಶಸ್ತ್ರ ಪಡೆಗಳು ದೃಢಸಂಕಲ್ಪ ಹೊಂದಿವೆ ಎಂದು ಸೇನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ದಾಳಿಯ ಹೊಣೆಯನ್ನು ಇದುವರೆಗೂ ಯಾವುದೇ ಉಗ್ರ ಗುಂಪು ಹೊತ್ತುಕೊಂಡಿಲ್ಲ. ಇರಾನ್ ಮತ್ತು ಅಫ್ಘಾನಿಸ್ತಾನದ ಗಡಿಯಲ್ಲಿರುವ ಬಲೂಚಿಸ್ತಾನ್ ದೀರ್ಘಾವಧಿಯ ಹಿಂಸಾತ್ಮಕ ದಂಗೆಗೆ ನೆಲೆಯಾಗಿದೆ. ಈ ಪ್ರದೇಶದಲ್ಲಿ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಯೋಜನೆಗಳನ್ನು ಕೈಗೊಂಡಿದ್ದು, ಇದನ್ನು ಗುರಿಯಾಗಿಸಿಕೊಂಡು ಬಲೂಚ್ ಬಂಡಾಯ ಗುಂಪುಗಳು ಈ ಹಿಂದೆ ಹಲವಾರು ದಾಳಿಗಳನ್ನು ನಡೆಸಿದ್ದವು.

    ಜನವರಿ 5 ರಂದು, ಖೈಬರ್ ಪಖ್ತುಂಕ್ವಾದಲ್ಲಿ ಪಾಕ್​ ಭದ್ರತಾ ಪಡೆಗಳು ನಡೆಸಿದ ಎರಡು ಪ್ರತ್ಯೇಕ ಗುಪ್ತಚರ ಆಧಾರಿತ ಕಾರ್ಯಾಚರಣೆಗಳಲ್ಲಿ (IBOs) ಇಬ್ಬರು ಸೈನಿಕರು ಮತ್ತು ಅನೇಕ ಭಯೋತ್ಪಾದಕರನ್ನು ಕೊಲ್ಲಲಾಗಿತ್ತು.

    ದೇಶದಿಂದ ಭಯೋತ್ಪಾದನೆ ಸಂಪೂರ್ಣ ನಿರ್ಮೂಲನೆಯಾಗುವವರೆಗೂ ಅದರ ವಿರುದ್ಧ ಹೋರಾಡುವ ಸೇನೆಯ ಸಂಕಲ್ಪವನ್ನು ಜನವರಿ 21 ರಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಅವರು ಪುನರುಚ್ಚರಿಸಿದರು ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ನಮ್ಮ ಸೈನಿಕರ ತ್ಯಾಗವು ವ್ಯರ್ಥವಾಗಲು ಬಿಡುವುದಿಲ್ಲ ಮತ್ತು ಪಾಕಿಸ್ತಾನಕ್ಕೆ ಸಂಪೂರ್ಣ ಶಾಂತಿ ಮರಳುತ್ತದೆ ಎಂದು ಜನರಲ್ ಬಾಜ್ವಾ ಪ್ರತಿಜ್ಞೆ ಮಾಡಿದರು ಎಂದು ವರದಿಯಾಗಿದೆ. (ಏಜೆನ್ಸೀಸ್​)

    ಆಂಧ್ರಪ್ರದೇಶದ ತಿರುಪತಿ ಇನ್ನು ಶ್ರೀಬಾಲಾಜಿ ಜಿಲ್ಲೆ

    ಮುಕ್ತ ಮಾರುಕಟ್ಟೆಗೆ ವ್ಯಾಕ್ಸಿನ್: ಕೋವಿಶೀಲ್ಡ್, ಕೊವ್ಯಾಕ್ಸಿನ್​ಗೆ ಅನುಮತಿ; ಲಸಿಕೆ ಅಭಿಯಾನಕ್ಕೆ ಬಲ

    ಚಾಯ್-ಸ್ಯಾಮ್ ಡಿವೋರ್ಸ್​: ಈ ಒಂದು ಸುದ್ದಿಗೆ ಕಿಡಿಕಾರಿದ ಅಕ್ಕಿನೇನಿ ನಾಗಾರ್ಜುನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts