More

    ಮುಕ್ತ ಮಾರುಕಟ್ಟೆಗೆ ವ್ಯಾಕ್ಸಿನ್: ಕೋವಿಶೀಲ್ಡ್, ಕೊವ್ಯಾಕ್ಸಿನ್​ಗೆ ಅನುಮತಿ; ಲಸಿಕೆ ಅಭಿಯಾನಕ್ಕೆ ಬಲ

    ನವದೆಹಲಿ: ಕರೊನಾ ನಿಯಂತ್ರಣಕ್ಕಾಗಿ ಈಗಾಗಲೇ ತುರ್ತು ಅನುಮತಿ ಯೊಂದಿಗೆ ಬಳಸಲಾಗುತ್ತಿರುವ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳನ್ನು ಮುಕ್ತ ಮಾರುಕಟ್ಟೆಯಲ್ಲಿಯೂ ಮಾರಾಟ ಮಾಡಲು ಸರ್ಕಾರ ಗುರುವಾರ ಅನುಮತಿ ನೀಡಿದೆ. ಸದ್ಯ, ಈ ವ್ಯಾಕ್ಸಿನ್​ಗಳು ಖಾಸಗಿ ಆಸ್ಪತ್ರೆ, ಕ್ಲಿನಿಕ್​ಗಳಲ್ಲಿ ಲಭ್ಯವಾದರೂ ಔಷಧ ಅಂಗಡಿಗಳಲ್ಲಿ ಸಿಗಲು ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಮೂಲಗಳು ಹೇಳಿವೆ. 2019ರ ಹೊಸ ಔಷಧಗಳು ಮತ್ತು ಕ್ಲಿನಿಕಲ್ ಪರೀಕ್ಷೆ ನಿಯಮಗಳಡಿ ಭಾರತೀಯ ಔಷಧಗಳ ಮಹಾ ನಿಯಂತ್ರಕರು (ಡಿಸಿಜಿಐ) ಅನುಮೋದನೆ ನೀಡಿದ್ದಾರೆ ಎಂದು ಆರೋಗ್ಯ ಸಚಿವ ಮನಸುಖ್ ಮಾಂಡವೀಯ ತಿಳಿಸಿದ್ದಾರೆ. ನಿರ್ದಿಷ್ಟ ಷರತ್ತುಗಳೊಂದಿಗೆ ಈ ಅನುಮತಿ ನೀಡಲಾಗಿದೆ ಎಂದ ವರು ತಿಳಿಸಿದ್ದಾರೆ. ತುರ್ತು ಬಳಕೆಯ ಸುರಕ್ಷತಾ ದತ್ತಾಂಶಗಳನ್ನು ಡಿಸಿಜಿಐಗೆ 15 ದಿನದೊಳಗೆ ಸಲ್ಲಿಸಬೇಕಿತ್ತು. ಆದರೆ ಮಾರುಕಟ್ಟೆ ಅನುಮೋದನೆ ಸುರಕ್ಷತಾ ಡೇಟಾವನ್ನು ಆರು ತಿಂಗಳೊಳಗೆ ಸಲ್ಲಿಸು ವಂತೆ ಸೂಚಿಸಲಾಗಿದೆ. ಕೊವ್ಯಾಕ್ಸಿನ್ ಲಸಿಕೆ ಭಾರತ್ ಬಯೋಟೆಕ್​ನ ಉತ್ಪನ್ನವಾಗಿದ್ದು ಭಾರತ ಸೆರಂ ಸಂಸ್ಥೆ (ಎಸ್​ಐಐ) ಕೋವಿಶೀಲ್ಡ್ ಉತ್ಪಾದಿಸುತ್ತಿದೆ. ಈ ಎರಡೂ ಲಸಿಕೆಗಳನ್ನು ಅಗ್ಗದ ದರದಲ್ಲಿ ಲಭ್ಯಗೊಳಿಸಲು ಸರ್ಕಾರ ಕಂಪೆನಿಗಳೊಂದಿಗೆ ರ್ಚಚಿಸುತ್ತಿದೆ.

    ಬ್ರಿಟನ್​ನಲ್ಲಿ ನಿಯಮ ಸಡಿಲಿಕೆ: ಬ್ರಿಟನ್​ನಲ್ಲಿ ಒಳಾಂಗಣದಲ್ಲಿ ಮಾಸ್ಕ್ ಧರಿಸುವುದು ಇನ್ನು ಮುಂದೆ ಕಡ್ಡಾಯವಲ್ಲ. ದೇಶದೊಳಗೆ ಬರುವ ಪ್ರಯಾಣಿಕರು ಕಡ್ಡಾಯವಾಗಿ ಲಸಿಕೆ ಸರ್ಟಿಫಿಕೆಟ್ ಹಾಜರುಪಡಿಸುವ ನಿಯಮವನ್ನು ಕೂಡ ಕೈಬಿಡಲಾಗಿದೆ. ಕಳೆದ ವರ್ಷ, ‘ಫ್ರೀಡಂ ಡೇ’ ಎಂದು ಹೇಳಲಾದ ಜುಲೈ 19ರಂದು ಕರೊನಾ ನಿಯಂತ್ರಣ ನಿರ್ಬಂಧಗಳನ್ನು ಸಡಿಲಿಸಲಾಗಿತ್ತು. ಆದರೆ ಒಮಿಕ್ರಾನ್ ದಾಂಗುಡಿಯ ಕಾರಣ ಹೊಸ ನಿಯಮಗಳನ್ನು ಜಾರಿಗೆ ತರಲಾಗಿತ್ತು.

    ಮುಕ್ತ ಮಾರುಕಟ್ಟೆಗೆ ವ್ಯಾಕ್ಸಿನ್: ಕೋವಿಶೀಲ್ಡ್, ಕೊವ್ಯಾಕ್ಸಿನ್​ಗೆ ಅನುಮತಿ; ಲಸಿಕೆ ಅಭಿಯಾನಕ್ಕೆ ಬಲಭವಿಷ್ಯದ ಪ್ರಭೇದ ಬಗ್ಗೆ ಎಚ್ಚರಿಕೆ: ಭವಿಷ್ಯದಲ್ಲಿ ತಲೆಯೆತ್ತಬಹುದಾದ ಕರೊನಾ ವೈರಸ್​ನ ರೂಪಾಂತರಿಗಳ ತೀವ್ರತೆ ಕಡಿಮೆಯಿರುತ್ತದೆ ಎಂದು ಖಾತರಿ ನೀಡಲಾಗದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಸ್ಪಷ್ಟಪಡಿಸಿದೆ. ಮುಂದಿನ ತಳಿಗಳು ಕೂಡ ವ್ಯಾಕ್ಸಿನ್ ರಕ್ಷಣೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಈಗಿರುವ ಲಸಿಕೆಗಳು ಪರಿಣಾಮ ಕಳೆದುಕೊಳ್ಳಲಿವೆ ಎಂದು ಸಂಸ್ಥೆ ಹೇಳಿದೆ.

    ಮಕ್ಕಳ ಲಸಿಕೆ ಕುರಿತು ಕೇಂದ್ರ ಸ್ಪಷ್ಟನೆ: 2023ರ ಜನವರಿಯಲ್ಲಿ 15 ವರ್ಷ ಪೂರ್ಣಗೊಳ್ಳುವ ಮಕ್ಕಳು ಕರೊನಾ ತಡೆ ಲಸಿಕೆ ಪಡೆಯಲು ಅರ್ಹರು ಎಂದು ಕೇಂದ್ರ ಸರ್ಕಾರ ಗುರುವಾರ ಸ್ಪಷ್ಟಪಡಿಸಿದೆ. 1-18 ವಯೋಮಿತಿಯ ಮಕ್ಕಳಿಗೆ ಲಸಿಕೆ ಹಾಕುವ ಅಭಿಯಾನ ದೇಶದಲ್ಲಿ ಜಾರಿಯಲ್ಲಿದೆ. 2005, 2006 ಮತ್ತು 2007ರಲ್ಲಿ ಜನಿಸಿದವರೂ ಈ ವಯೋಮಿತಿಯಲ್ಲಿ ವ್ಯಾಕ್ಸಿನ್ ಪಡೆಯಲು ಅರ್ಹರು ಎಂದು ಕೇಂದ್ರ ಆರೋಗ್ಯ ಸಚಿವಾಲಯ ವಿವರಿಸಿದೆ.

    ಜೈಶಂಕರ್ ಪಾಸಿಟಿವ್: ವಿದೇಶಾಂಗ ಸಚಿವ ಎಸ್. ಜೈಶಂಕರ್ ಕರೊನಾ ಪಾಸಿಟಿವ್ ಆಗಿರುವುದು ಗುರುವಾರ ದೃಢಪಟ್ಟಿದೆ. ತಮ್ಮೊಂದಿಗೆ ಸಂಪರ್ಕಕ್ಕೆ ಬಂದವರು ಪರೀಕ್ಷೆಗೆ ಒಳಪಡುವಂತೆ ಅವರು ಮನವಿ ಮಾಡಿದ್ದಾರೆ.

    ಉತ್ತರ ಕೊರಿಯಾ ಕ್ರಮ: ಎರಡು ವರ್ಷಗಳಿಂದ ಜಾರಿಯಲ್ಲಿರುವ ಕಠಿಣ ಲಾಕ್​ಡೌನ್ ನಿಯಮಗಳನ್ನು ಸಡಿಲಿಸಲು ಮುಂದಾಗಿರುವ ಉತ್ತರ ಕೊರಿಯಾ, ನೆರೆಯ ಚೀನಾಕ್ಕೆ ಸರಕು ರೈಲುಗಳ ಸಂಚಾರ ಸಹಿತ ತನ್ನ ಗಡಿಗಳನ್ನು ನಿಧಾನವಾಗಿ ಮುಕ್ತಗೊಳಿಸುತ್ತಿದೆ. ದೇಶದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಇಲ್ಲವೇ ಇಲ್ಲ ಎಂದಿರುವ ಉತ್ತರ ಕೊರಿಯಾ ಸರ್ಕಾರ, ವೈರಸ್-ವಿರೋಧಿ ಅಭಿಯಾನವು ‘ರಾಷ್ಟ್ರೀಯ ಅಸ್ತಿತ್ವ’ದ ಪ್ರಶ್ನೆಯಾಗಿದೆ ಎಂದಿದೆ.

    ಹೈದರಾಬಾದ್​ನಲ್ಲಿ ಡೆಲ್ಟಾ ಕಾಟ: ಒಮಿಕ್ರಾನ್ ಹಾವಳಿ ನಡುವೆಯೇ ಡೆಲ್ಟಾ ರೂಪಾಂತರಿಯಿಂದಾಗಿ ಹೈದರಾಬಾದ್​ನಲ್ಲಿ ಆಸ್ಪತ್ರೆಗೆ ಸೇರುವ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ 10 ದಿನಗಳಿಂದ ಒಣ ಕೆಮ್ಮು, ಜ್ವರ ಮತ್ತು ಆಮ್ಲಜನಕ ಪ್ರಮಾಣ ಕಡಿಮೆಯಿರುವ ತೀವ್ರ ರೋಗ ಲಕ್ಷಣಗಳಿರುವವರು ಹೆಚ್ಚಿನ ಸಂಖ್ಯೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. 2021ರ ಫೆಬ್ರವರಿ-ಜೂನ್ ನಡುವಿನ 2ನೇ ಅಲೆಗೆ ಡೆಲ್ಟಾ ಪ್ರಭೇದ ಕಾರಣವಾಗಿದ್ದು ಬಹಳಷ್ಟು ಜನರು ಮೃತಪಟ್ಟಿದ್ದರು.

    ರಾಜ್ಯದಲ್ಲಿ 1 ಸಾವಿರ ದಾಟಿತು ಒಮಿಕ್ರಾನ್ ಪ್ರಕರಣ; ಆದರೂ ಒಂದು ಸಮಾಧಾನದ ಸಂಗತಿ ಏನೆಂದರೆ…

    ಹೃದಯಾಘಾತಕ್ಕೀಡಾಗಿ 24 ವರ್ಷದ ಪೈಲ್ವಾನ್ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts