More

    ಉತ್ತರಾಖಂಡದ ಹೊಸ ಸಿಎಂ: ಶಾಸಕ ಪುಷ್ಕರ್​ ಸಿಂಗ್​ ಧಾಮಿ

    ಡೆಹ್ರಾಡೂನ್ : ಉತ್ತರಾಖಂಡದ ಹೊಸ ಮುಖ್ಯಮಂತ್ರಿಯಾಗಿ ಬಿಜೆಪಿಯ ಖಾತಿಮ ಕ್ಷೇತ್ರದ ಶಾಸಕ ಪುಷ್ಕರ್​ ಸಿಂಗ್ ಧಾಮಿ ಅವರನ್ನು ನೇಮಿಸಲಾಗಿದೆ. ನಿನ್ನೆ ತೀರಥ್​ ಸಿಂಗ್ ರಾವತ್​ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಇಂದು ನಡೆದ ರಾಜ್ಯ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

    ಪಿತ್ತೋರಗಡ ಮೂಲದ 45 ವರ್ಷದ ಪುಷ್ಕರ್​ ಸಿಂಗ್​ ಧಾಮಿ ಅವರು ನಾಲ್ಕು ತಿಂಗಳಲ್ಲಿ ಸಿಎಂ ಹುದ್ದೆಗೆ ಏರುತ್ತಿರುವ ಮೂರನೇ ವ್ಯಕ್ತಿಯಾಗಲಿದ್ದಾರೆ. ಉತ್ತರಾಖಂಡ ಬಿಜೆಪಿ ಸರ್ಕಾರದ ಸಿಎಂ ಆಗಿದ್ದ ತ್ರಿವೇಂದ್ರ ಸಿಂಗ್​ ರಾವತ್​ ಅವರ ಸ್ಥಾನಕ್ಕೆ ಮಾರ್ಚ್​ 10 ರಂದು ತೀರಥ್​ ಸಿಂಗ್ ರಾವತ್​ ಅವರನ್ನು ನೇಮಿಸಲಾಗಿತ್ತು. ತೀರಥ್​ ಸಿಂಗ್​ ನಿನ್ನೆ ರಾಜ್ಯಪಾಲರಾದ ಬೇಬಿ ರಾಣಿ ಮೌರ್ಯ ಅವರಿಗೆ ರಾಜೀನಾಮೆ ನೀಡಿದರು.

    ತೀರಥ್​ ಸಿಂಗ್ ರಾವತ್​ ಅವರು ಸಂಸದರಾಗಿದ್ದು, ಸಿಎಂ ಆದ ನಂತರ, ಶಾಸಕರಾಗಿ ಆಯ್ಕೆ ಆಗಲು ಸೆಪ್ಟೆಂಬರ್​ 10 ರವರೆಗೆ ಸಮಯವಿತ್ತು. ಕರೊನಾ ಹಿನ್ನೆಲೆಯಲ್ಲಿ ಯಾವುದೇ ಉಪಚುನಾವಣೆ ನಡೆಸಲಾಗದ ಕಾರಣಕ್ಕೆ ಸಾಂವಿಧಾನಿಕ ಬಿಕ್ಕಟ್ಟು ಉಂಟಾಗಬಹುದು ಎನ್ನಲಾಗಿತ್ತು. ರಾಜ್ಯದ ವಿಧಾನಸಭಾ ಚುನಾವಣೆಗಳು ಮುಂದಿನ ವರ್ಷ ನಡೆಯಲಿವೆ.

    ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪುಷ್ಕರ್​ ಸಿಂಗ್​ ಧಾಮಿ ಅವರು, “ನನ್ನ ಪಕ್ಷವು ಒಬ್ಬ ಸಾಮಾನ್ಯ ಕಾರ್ಯಕರ್ತನಾದ, ಮಾಜಿ ಸೈನಿಕನ ಮಗನಾದ ನನ್ನನ್ನು ರಾಜ್ಯದ ಸೇವೆ ಮಾಡಲು ನೇಮಿಸಿದೆ. ನಾವು ಜನರ ಕಲ್ಯಾಣಕ್ಕಾಗಿ ಒಟ್ಟಿಗೆ ಕೆಲಸ ಮಾಡುತ್ತೇವೆ. ಈ ಕಡಿಮೆ ಅವಧಿಯಲ್ಲಿ ಜನಸೇವೆ ಮಾಡುವ ಸವಾಲನ್ನು, ಇತರರ ಸಹಾಯದೊಂದಿಗೆ, ಸ್ವೀಕರಿಸುತ್ತೇನೆ” ಎಂದಿದ್ದಾರೆ. (ಏಜೆನ್ಸೀಸ್)

    ಮಂಗಳ ಗ್ರಹದ ಮೇಲಿನ ರೋವರ್​ ಚಾಲಕಿ, ಭಾರತ ಮೂಲದ ಮಹಿಳೆ!

    ಲಸಿಕೆ ಪಡೆಯಲು ಜನಜಂಗುಳಿ… ಪ್ರೊಟೊಕಾಲ್ ಮರೆತು ಪೈಪೋಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts