More

    ಸಾಮಾಜಿಕ ಕಳಕಳಿಯ ಹೃದಯವಂತ: ರೋಟರಿ ಅಧ್ಯಕ್ಷ ನಿಂಗಪ್ಪ ಕಂಬನಿ ಮೇರು ನಟ ಪುನೀತ್ ಸಾವು ನಾಡಿಗೆ ತುಂಬಲಾರದ ನಷ್ಟ

    ಚನ್ನಪಟ್ಟಣ : ಚಿಕ್ಕವಯಸ್ಸಿನಲ್ಲಿಯೇ ಪ್ರತಿಭೆಯನ್ನು ಹೊರಹಾಕಿ, ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದ ಪುನೀತ್ ರಾಜ್‌ಕುವಾರ್ ನಿಧನ ನಾಡಿಗೆ ತುಂಬಲಾರದ ನಷ್ಟ ಎಂದು ತಾಲೂಕು ರೋಟರಿ ಅಧ್ಯಕ್ಷ, ವಕೀಲ ಎಂ.ಕೆ. ನಿಂಗಪ್ಪ ಕಂಬನಿ ಮಿಡಿದರು.

    ನಗರದ ಪಾರ್ವತಿ ಚಿತ್ರಮಂದಿರ ರಸ್ತೆಯಲ್ಲಿ ಡಾ. ರಾಜ್ ಕುಟುಂಬದ ಅಭಿವಾನಿಗಳು ಶನಿವಾರ ಹಮ್ಮಿಕೊಂಡಿದ್ದ್ದ ಪುನೀತ್ ರಾಜ್‌ಕುವಾರ್ ಶ್ರದ್ಧಾಂಜಲಿ ಸಭೆಯಲ್ಲಿ ವಾತನಾಡಿ, ವಿಧಿಯ ಕ್ರೂರ ಆಟದಿಂದಾಗಿ ನಾಡು ಕಂಡ ಅದ್ಭುತ ನಟನನ್ನು ಕಳೆದುಕೊಂಡಿದ್ದೇವೆ. ನಟನೆಯ ಜತೆಗೆ, ಸಾವಾಜಿಕ ಕಳಕಳಿ ಹೊಂದಿದ್ದ ಹೃದಯವಂತ ನಮ್ಮಿಂದ ದೂರವಾಗಿರುವುದು ಮನೆಯ ಸದಸ್ಯನನ್ನು ಕಳೆದುಕೊಂಡಂತಾಗಿದೆ ಎಂದರು.

    ಚಿಕ್ಕವಯಸ್ಸಿನಲ್ಲಿಯೇ ನಟನೆಯನ್ನು ಮೈಗೂಡಿಸಿಕೊಂಡಿದ್ದ ಪುನೀತ್, ಬೆಟ್ಟದ ಹೂವು ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆದದ್ದು ಅದಕ್ಕೆ ಸಾಕ್ಷಿ. ಕುಟುಂಬ ಸಮೇತರಾಗಿ ನೋಡಬಹುದಾದ ಚಿತ್ರಗಳಲ್ಲಿ ವಾತ್ರ ನಟಿಸುತ್ತಿದ್ದ ಅವರ ಗುಣವನ್ನು ಇಡೀ ದಕ್ಷಿಣ ಭಾರತ ಚಿತ್ರರಂಗ ಮೆಚ್ಚಿಕೊಂಡಿತ್ತು. ವರನಟನ ಪುತ್ರ ಎಂಬ ಯಾವುದೇ ಹಮ್ಮುಬಿಮ್ಮು ಇಲ್ಲದ ಅವರ ಬದುಕು ಇಂದಿನ ಯುವಕರಿಗೆ ವಾದರಿಯಾಗಿದೆ ಎಂದರು.

    ಪತ್ರಕರ್ತರಾದ ಡಿ.ಎಂ. ಮಂಜುನಾಥ್, ಕೃಷ್ಣಮೂರ್ತಿ, ಕೇಶವ, ಪ್ರದೀಪ್‌ಕುವಾರ್, ದಲಿತ ಮುಖಂಡರಾದ ಮತ್ತೀಕೆರೆ ಹನುಮಂತು, ಅಪ್ಪಗೆರೆ ಶ್ರೀನಿವಾಸ್‌ಮೂರ್ತಿ, ರಂಗಭೂಮಿ ಕಲಾವಿದರಾದ ಮಂಗಳವಾರಪೇಟೆ ನಾರಾಯಣಪ್ಪ, ಟಿ.ವಿ. ಸಂತೋಷ್, ರೋಟರಿ ಸಂಸ್ಥೆ ಕಾರ್ಯದರ್ಶಿ ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

    ಅಭಿಮಾನಿಗಳಿಗೆ ದೊಡ್ಡ ಆಘಾತ :  ರಾಮನಗರ ರಾಜ್ಯ ಸರ್ಕಾರಿ ನೌಕರ ಸಂದ ಜಿಲ್ಲಾ ಟಕದ ವತಿಯಿಂದ ನಗರದ ಸ್ಫೂರ್ತಿ ಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

    ಸಂಘದ ಜಿಲ್ಲಾ ಅಧ್ಯಕ್ಷ ಆರ್.ಕೆ. ಭೈರಲಿಂಗಯ್ಯ ಮಾತನಾಡಿ, ನಟ ಪುನೀತ್ ರಾಜ್‌ಕುವಾರ್ ಅವರ ಅಕಾಲಿಕ ನಿಧನದಿಂದ ಕನ್ನಡ ಹಾಗೂ ಭಾರತೀಯ ಚಿತ್ರರಂಗಕ್ಕೆ, ಕಲಾ ರಂಗಕ್ಕೆ, ಅಭಿವಾನಿಗಳಿಗೆ ದೊಡ್ಡ ಆಘಾತವಾಗಿದೆ. ಇಡೀ ರಾಜ್ಯದ ಜನತೆ ಅತೀವ ದುಃಖಿತರಾಗಿದ್ದು, ನಾಡಿನ ಜನತೆಗೆ ಹಾಗೂ ಪುನೀತ್ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದರು.

    ಕನ್ನಡ ಚಿತ್ರರಂಗದ ದೊಡ್ಡ ನಟರಾಗಿ ಹೊರ ಹೊಮ್ಮಿದ್ದ ಪುನೀತ್, ಚಲನಚಿತ್ರಗಳ ಮೂಲಕ ಅವರು ನೀಡುತ್ತಿದ್ದ ಉತ್ತಮ ಸಂದೇಶ ನಮಗೆಲ್ಲ ದಾರಿದೀಪವಾಗಿದೆ. ಅವರು ಕಣ್ಮರೆಯಾಗಿರುವುದನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ, ಲಕ್ಷಾಂತರ ಅಭಿವಾನಿಗಳು ಶೋಕಸಾಗರದಲ್ಲಿ ಮುಳುಗಿದ್ದಾರೆ ಎಂದರು. ಕಾರ್ಯದರ್ಶಿ ಡೊಡ್ಡಾಲಹಳ್ಳಿ ಪುಟ್ಟಸ್ವಾಮಿಗೌಡರು ಪುನೀತ್ ರಾಜಕುವಾರ್ ಅವರ ಸಾಧನೆಗಳ ಗುಣಗಾನ ವಾಡಿದರು. ರಾಜ್ಯ ಪರಿಷತ್ ಸದಸ್ಯ ಕೆ ಸತೀಶ್, ಖಜಾಂಚಿ ಟಿ. ನರಸಯ್ಯ, ತಾಲೂಕು ಸಂಗಳ ಅಧ್ಯಕ್ಷರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts