More

    ಡಾ.ರಾಜ್​ ಸಿನಿಮಾ ಹೆಸರಲ್ಲೊಂದು ಕನಸು, ಪಾರ್ವತಮ್ಮನವರ ಜನ್ಮದಿನದಂದು ನನಸು: ಡಿ. 6ರಂದು ಅಪ್ಪು ರೋಮಾಂಚಕ ಅನುಭವದ ಝಲಕ್​

    ಬೆಂಗಳೂರು: ಅಂದು ಇನ್ನೆರಡು ದಿನಗಳು ಕಳೆದಿದ್ದರೆ ಇಂಥದ್ದೊಂದು ಕನಸು ನನಸಾಗಿ ಈಗ ಒಂದು ತಿಂಗಳಾಗಿರುತ್ತಿತ್ತು. ಆದರೆ ದುರದೃಷ್ಟವಶಾತ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ತಮ್ಮ ಕನಸಿನ ಅನಾವರಣದ ದಿನಾಂಕ ಘೋಷಣೆ ಮಾಡಿದ ಎರಡೇ ದಿನಕ್ಕೆ ಎಲ್ಲರನ್ನೂ ಅಗಲಿದರು.

    ಇದೀಗ ಅವರ ಕನಸನ್ನು ನನಸು ಮಾಡಲು ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಡಾ.ರಾಜ್​ ಕುಟುಂಬ ಸದಸ್ಯರು ಮುಂದಾಗಿದ್ದು, ಪುನೀತ್ ರಾಜಕುಮಾರ್ ಅವರ ರೋಮಾಂಚಕ ಅನುಭವದ ಝಲಕ್ ಡಿ.6ರಂದು ಅನಾವರಣಗೊಳ್ಳಲಿದೆ. ಅರ್ಥಾತ್, ಅಂದು ಅಪ್ಪು ಅವರ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್​ವೊಂದರ ಟೈಟಲ್ ಲಾಂಚ್​ ಆಗಲಿದೆ.

    ಇದನ್ನೂ ಓದಿ: ಯಾವ ಗುಂಪಿನ ರಕ್ತದವರಿಗೆ ಕೋವಿಡ್ ಸೋಂಕು ತಗುಲುವ ಸಾಧ್ಯತೆ ಅಧಿಕ?; ಇಲ್ಲಿದೆ ನೋಡಿ ಮಾಹಿತಿ…

    ಪುನೀತ್ ರಾಜಕುಮಾರ್ ಅವರು ವನ್ಯಜೀವಿ ಛಾಯಾಗ್ರಾಹಕ ಮತ್ತು ಫಿಲ್ಮ್​ ಮೇಕರ್ ಅಮೋಘವರ್ಷ ಅವರೊಂದಿಗೆ ಕನ್ನಡ ನಾಡಿನ ರೋಚಕ ಸಾಹಸಮಯ ಚಿತ್ರಣವನ್ನು ಸೆರೆಹಿಡಿದಿದ್ದು, ಅಂಥದ್ದೊಂದು ಅದ್ಭುತ ದೃಶ್ಯವೈಭವವನ್ನು ತಮ್ಮ ಪಿಆರ್​ಕೆ ಪ್ರೊಡಕ್ಷನ್ಸ್​ ಮತ್ತು ಮಡ್​ಸ್ಕಿಪ್ಪರ್ ಸಂಸ್ಥೆ ಮೂಲಕ ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದ್ದರು. ಇದಕ್ಕೆ ತಮ್ಮ ತಂದೆ ಡಾ.ರಾಜ್​ ಅಭಿನಯದ ‘ಗಂಧದಗುಡಿ’ ಸಿನಿಮಾದ ಶೀರ್ಷಿಕೆಯನ್ನೇ ಇಟ್ಟಿದ್ದಾರೆ ಎಂಬುದು ಮೂಲಗಳ ಮೂಲಕ ತಿಳಿದು ಬಂದಿದ್ದು, ಕನ್ನಡ ರಾಜ್ಯೋತ್ಸವ ದಿನವಾದ ನ. 1ರಂದು ಅದರ ಟೈಟಲ್​ ಲಾಂಚ್​ ಮಾಡಲು ದಿನ ನಿಗದಿ ಮಾಡಿಕೊಂಡಿದ್ದರು. ಈ ಬಗ್ಗೆ ತಮ್ಮ ಫೇಸ್​ಬುಕ್ ಖಾತೆಯಲ್ಲಿ ಪುನೀತ್ ಅ. 27ರಂದು ಮಾಹಿತಿ ಹಂಚಿಕೊಂಡಿದ್ದರು.

    ಇದನ್ನೂ ಓದಿ: ಎಚ್ಚರ.. ಎಚ್ಚರ.. ಹೊರಗೆಲ್ಲೂ ಹೋಗದವರಿಗೂ, ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡವರಿಗೂ ಬಂದಿದೆ ಒಮಿಕ್ರಾನ್​!

    ಆದರೆ ಅಷ್ಟರೊಳಗೆ ಅವರು ನಿಧನರಾದ್ದರಿಂದ ಆ ಟೈಟಲ್ ಟೀಸರ್ ಲಾಂಚ್ ಆಗಿರಲಿಲ್ಲ. ಇದೀಗ ಅದನ್ನು ಅಶ್ವಿನಿ ಅವರು ಸಾಕಾರಗೊಳಿಸಲು ಮುಂದಾಗಿದ್ದು, ಡಿ. 6ರಂದು ಟೈಟಲ್​ ಟೀಸರ್ ಲಾಂಚ್ ಮಾಡುವ ಕುರಿತು ಘೋಷಣೆ ಮಾಡಿದ್ದಾರೆ. ‘ಅಪ್ಪು ಅವರ ಅಮೋಘವಾದ ಕನಸಿನ ಪಯಣ, ಹಿಂದೆಂದೂ ಕಾಣದ ರೋಮಾಂಚಕ ಅನುಭವ..’ ಎಂಬ ಶೀರ್ಷಿಕೆ ಮೂಲಕ ಟೈಟಲ್ ಟೀಸರ್ ಲಾಂಚ್ ಮಾಹಿತಿ ಹಂಚಿಕೊಂಡಿದ್ದಾರೆ. ಅದರ ಶೀರ್ಷಿಕೆ ಏನೆಂಬುದು ಅಂದು ಖಚಿತವಾಗಲಿದೆ.

    ಭಾರತಕ್ಕೆ ಮೊದಲ ಒಮಿಕ್ರಾನ್​ ತಂದಿಟ್ಟವ ಈಗ ದೇಶದಲ್ಲೇ ಇಲ್ಲ, ಅಸಲಿಗೆ ಆತ ಭಾರತೀಯನೇ ಅಲ್ಲ?: ಬೆಂಗ್ಳೂರಿಗೆ ಸುಮ್ನೆ ಕಳಂಕ!

    https://www.vijayavani.net/omicron-was-spread-in-international-doctors-conference/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts