More

    ಕರೊನಾ ಲಸಿಕೆ ಪಡೆದ ಪುನೀತ್​ ರಾಜಕುಮಾರ್​

    ಬೆಂಗಳೂರು: ‘ದಯವಿಟ್ಟು ನಿಮ್ಮ ಮನೆಯ ಹಿರಿಯರಿಗೆ ಲಸಿಕೆ ಕೊಡಿಸಿ’ ಎಂದು ‘ಯುವರತ್ನ’ ಚಿತ್ರದ ಮೊದಲ ಪತ್ರಿಕಾಗೋಷ್ಠಿಯಲ್ಲೇ ಸಾಮಾಜಿಕ ಕಳಕಳಿ ಮೆರೆದಿದ್ದರು ಪುನೀತ್​ ರಾಜಕುಮಾರ್​. ಅಷ್ಟೇ ಅಲ್ಲ, ತಮ್ಮ ವಯೋಮಿತಿಗೆ ಲಸಿಕೆ ಕೊಡುವುದಕ್ಕೆ ಪ್ರಾರಂಭಿಸುತ್ತಿದ್ದಂತೆಯೇ, ಮೊದಲು ಲಸಿಕೆ ಪಡೆಯುವುದಾಗಿ ಅವರು ಹೇಳಿಕೊಂಡಿದ್ದರು.

    ಇದನ್ನೂ ಓದಿ: ಬೋಲ್ಡ್ ಸೋನಿಕಾ! ಹೊಸ ಚಿತ್ರದಲ್ಲಿ ಹೊಸ ಪಾತ್ರ …

    ಅದರಂತೆ, ಬುಧವಾರ ಬೆಳಿಗ್ಗೆ ಪುನೀತ್​ ರಾಜಕುಮಾರ್​ ಕರೊನಾ ಲಸಿಕೆಯ ಮೊದಲ ಡೋಸ್​ ಪಡೆದಿದ್ದಾರೆ. ಲಸಿಕೆ ಪಡೆಯುತ್ತಿರುವ ಫೋಟೋ ಹಂಚಿಕೊಂಡಿರುವ ಪುನೀತ್​, ‘ಇಂದು ಕರೊನಾ ಲಸಿಕೆಯ ಮೊದಲ ಡೋಸ್​ ಪಡೆದಿದ್ದೇನೆ. ನೀವು 45 ವರ್ಷದ ಮೇಲ್ಪಟ್ಟವರಾಗಿದ್ದರೆ, ದಯವಿಟ್ಟು ಲಸಿಕೆ ತೆಗೆದುಕೊಳ್ಳಿ’ ಎಂದು ಪೋಸ್ಟ್​ ಹಾಕಿದ್ದಾರೆ.

    ಪುನೀತ್​ ಅವರ ಈ ಪೋಸ್ಟ್​ಗೆ ಹಲವರು ಪ್ರತಿಕ್ರಿಯೆ ನೀಡಿದ್ದು, ನಿಮಗೆ 45 ವರ್ಷ ವಯಸ್ಸಾಗಿದೆ ಎಂದು ನಂಬುವುದಕ್ಕೆ ಆಗುತ್ತಿಲ್ಲ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ‘ರಾಬರ್ಟ್’ಗೆ ಸಂತೋಷ್​; ‘ವಕೀಲ್​ ಸಾಬ್​’ಗೆ ಭೂಮಿಕಾ

    ಇನ್ನು, ಇತ್ತೀಚಿನ ದಿನಗಳಲ್ಲಿ ಜಗ್ಗೇಶ್​, ಕೆ.ಎಂ. ಚೈತನ್ಯ, ಗಿರಿಜಾ ಲೋಕೇಶ್​, ಶಿವರಾಮಣ್ಣ ಸೇರಿದಂತೆ ಚಿತ್ರರಂಗದ ಹಲವು ನಟ-ನಟಿಯರು ಕರೊನಾ ಲಸಿಕೆ ಪಡೆದಿದ್ದು, ಈಗ ಆ ಸಾಲಿಗೆ ಪುನೀತ್​ ರಾಜಕುಮಾರ್​ ಸಹ ಸೇರಿದ್ದಾರೆ.

    ಕಿರುತೆರೆಯಲ್ಲಿ ‘ಪೊಗರು’ … ಯುಗಾದಿಗೆ ಟೆಲಿವಿಷನ್ ಪ್ರೀಮಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts