More

    ಪಂಪ್​ಸೆಟ್​ ಆಪರೇಟರ್ ಆತ್ಮಹತ್ಯೆ! ಪಿಎಸ್​ಐ ಸೇರಿ ನಾಲ್ವರ ವಿರುದ್ಧ ಕೇಸ್​

    ಯಾದಗಿರಿ: ಹತ್ತು ಹಳ್ಳಿಗಳ ಕುಡಿಯುವ ನೀರು ಸರಬರಾಜು ಕೆರೆಯಲ್ಲಿ ಪಂಪ್​ಸೆಟ್​ನ ಆಪರೇಟರ್ ಕೆಲಸ ಮಾಡುತ್ತಿದ್ದವ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸ್​ ಸಬ್​ಇನ್​ಸ್ಪೆಕ್ಟರ್​, ಕಂಟ್ರಾಕ್ಟರ್​ ಮತ್ತು ಇಂಜಿನಿಯರ್ಸ್​ ಸೇರಿ ನಾಲ್ವರ ವಿರುದ್ಧ ಕೇಸ್​ ದಾಖಲಾಗಿದೆ.

    ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಅಗ್ನಿ ಗ್ರಾಮದ ಬಸಪ್ಪ ಚಲವಾದಿ(35) ಆತ್ಮಹತ್ಯೆ ಮಾಡಿಕೊಂಡವ. ಕೆರೆ ನಿರ್ಮಾಣ ಮಾಡುವ ವೇಳೆ ಹೊಲ ನೀಡಿದ್ದ ಬಸಪ್ಪನಿಗೆ ಗುತ್ತಿಗೆ ಆಧಾರದಲ್ಲಿ ಪಂಪಸೆಟ್ ಆಪರೇಟರ್ ಆಗಿ ಕೆಲಸ ಕೊಟ್ಟು ಒಪ್ಪಂದ ಪತ್ರವನ್ನು ಅಧಿಕಾರಿಗಳು ನಿಡಿದ್ದರು. ಬಸಪ್ಪಗೆ ಎರಡು ತಿಂಗಳಿನಿಂದ ಸಂಬಳ ಕೊಡದೆ ಕಂಟ್ರಾಕ್ಟರ್ ಹಾಗೂ ಇಂಜಿನಿಯರ್ಸ್ ಸತಾಯಿಸುತ್ತಿದ್ದರು ಎನ್ನಲಾಗಿದೆ. ಸಂಬಳ‌ ಕೇಳಿದ್ದಕ್ಕೆ ಬಸಪ್ಪಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಕೆಂಭಾವಿ ಪೊಲೀಸ್ ಠಾಣೆಗೆ ಕರೆದು ಪಿಎಸ್ಐ ಸುದರ್ಶನ ರೆಡ್ಡಿ ಅವರ ಮೂಲಕ ಹಲ್ಲೆ ಮಾಡಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಹಲ್ಲೆ ನಂತರ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಬಸಪ್ಪ ಚಲವಾದಿ ಚಿಕಿತ್ಸೆ ಪಡೆದಿದ್ದ. ಕಾರಣ ಹೇಳದೆ ಬಸಪ್ಪ ಚಲವಾದಿಯನ್ನ ಕೆಲಸದಿಂದ ಕಂಟ್ರಾಕ್ಟರ್ ಹಾಗೂ ಇಂಜಿನಿಯರ್ಸ್ ತೆಗೆದಿದ್ದರು. ಇದನ್ನೂ ಓದಿರಿ ಮಠದ ಆವರಣದಲ್ಲೇ ಸಾರಿಗೆ ಬಸ್​ ಚಾಲಕ ಆತ್ಮಹತ್ಯೆ! ಸಾವಿಗೆ ಕಾರಣ ಏನು?

    ಬಳಿಕ ಬೇಸತ್ತು ಮನೆಯಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಬಸಪ್ಪನನ್ನು ಹುಣಸಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಗಂಡನ ಸಾವಿನ ಕುರಿತು ಪಿಎಸ್ಐ ಸುದರ್ಶನ ರೆಡ್ಡಿ, ಕಂಟ್ರಾಕ್ಟರ್ ಕೆ.ಭೂಪಾಲ್ ಹಾಗೂ ಇಂಜಿನಿಯರ್​ಗಳಾದ ಪ್ರಮೋದ, ಹಣುಮಂತರೆಡ್ಡಿ ವಿರುದ್ಧ ರೇಣುಕಾ ಯಲ್ಲಪ್ಪ ಚಲವಾದಿ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಿದ್ದಾರೆ.

    ಅಯ್ಯೋ, ಮಗಳೇ ಆ ಒಂದು ಮಾತಿಗೆ ಎಂಥ ಸಾವು ತಂದುಕೊಂಡವ್ವ…

    ಹೊಸ ಕಾರಿನ ಪೂಜೆಗೆಂದು ಧರ್ಮಸ್ಥಳಕ್ಕೆ ಹೊರಟಿದ್ದವರ ಬಾಳಲ್ಲಿ ದುರಂತ! ಇಬ್ಬರ ಸಾವು, 6 ಜನರ ಸ್ಥಿತಿ ಗಂಭೀರ

    ಅಕ್ಕಿ ಪಡೆಯಲು ಬಾಗಿಲು ತೆಗೆದ ಯುವತಿಯನ್ನ ಬೆತ್ತಲೆ ಮಾಡಿ ಚಿತ್ರೀಕರಿಸಿದ! ಮುಂದೆ ಆಗಿದ್ದೆಲ್ಲವೂ ಅವಾಂತರ

    ಮಠದ ಆವರಣದಲ್ಲೇ ಸಾರಿಗೆ ಬಸ್​ ಚಾಲಕ ಆತ್ಮಹತ್ಯೆ! ಸಾವಿಗೆ ಕಾರಣ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts