More

    ಏರ್​ ಇಂಡಿಯಾ ಪೈಲಟ್​​ಗಳನ್ನು ಹೊಗಳಿದ ಪಾಕಿಸ್ತಾನ; ನಮಗೆ ನಿಮ್ಮ ಬಗ್ಗೆ ತುಂಬ ಹೆಮ್ಮೆ ಇದೆ, ಗುಡ್​ ಲಕ್​ ಎಂದು ಹಾರೈಸಿದ ಎಟಿಸಿ

    ನವದೆಹಲಿ: ಇಡೀ ಜಗತ್ತು ಕರೊನಾ ವಿರುದ್ಧ ಹೋರಾಡುತ್ತಿದೆ. ಈ ಮಧ್ಯೆ ಏರ್​ ಇಂಡಿಯಾ ಭಾರತದಲ್ಲಿ ಸಿಕ್ಕಿಬಿದ್ದಿರುವ ಯುರೋಪಿಯನ್​ ಹಾಗೂ ಕೆನಡಿಯನ್​ ನಾಗರಿಕರನ್ನು ಜರ್ಮನಿಯ ಫ್ರಾಂಕ್​ಫರ್ಟ್​​​ಗೆ ಸ್ಥಳಾಂತರಿಸುವ ಕೆಲಸದಲ್ಲಿ ತೊಡಗಿದೆ.
    ಕರೊನಾ ಮಿತಿಮೀರುತ್ತಿರುವ ಹಿನ್ನೆಲೆಯಲ್ಲಿ ಮಾ.22ರಿಂದ ಭಾರತಕ್ಕೆ ಅಂತಾರಾಷ್ಟ್ರೀಯ ವಿಮಾನಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಹಾಗೇ ಯಾವುದೇ ವಿಮಾನಗಳೂ ಬೇರೆ ದೇಶಕ್ಕೆ ಹೋಗುತ್ತಿಲ್ಲ. ವಿದೇಶಿಗರನ್ನೂ ಹಲವರನ್ನು ಕ್ವಾರಂಟೈನ್​​ನಲ್ಲಿ ಇಡಲಾಗಿದೆ.

    ಇದೀಗ ಅವರ ಅವಧಿ ಮುಗಿದಂತೆ ಏರ್ ಇಂಡಿಯಾ ವಿಶೇಷ ವಿಮಾನಗಳ ಮೂಲಕ ಅವರನ್ನು ಸ್ಥಳಾಂತರ ಮಾಡಲಾಗುತ್ತಿದೆ. ಏರ್​ ಇಂಡಿಯಾದ ಈ ಪರಿಹಾರ ಕಾರ್ಯವನ್ನು ಹಲವು ದೇಶಗಳು ಶ್ಲಾಘಿಸುತ್ತಿವೆ. ವಿಶೇಷವೆಂದರೆ ಪಾಕಿಸ್ತಾನ ಏರ್​ ಕಂಟ್ರೋಲರ್​ (ವಾಯು ಸಂಚಾರ ನಿಯಂತ್ರಕ) ಕೂಡ ಮುಕ್ತವಾಗಿ ಹೊಗಳಿದೆ.

    ಏ.2ರಂದು ವಿದೇಶಿಗರನ್ನು ಹೊತ್ತ ಏರ್​ ಇಂಡಿಯಾದ ಎರಡು ವಿಮಾನಗಳು ಮುಂಬೈನಿಂದ ಹೊರಟಿದ್ದವು. ಅದರಲ್ಲಿ ಒಂದು ವಿಮಾನ ಪಾಕಿಸ್ತಾನದ ವಾಯು ಮಾರ್ಗವನ್ನು ಪ್ರವೇಶಿಸುತ್ತಿದ್ದಂತೆ ಒಂದು ಅಚ್ಚರಿಯ ಅನೌನ್ಸ್​ಮೆಂಟ್​ ಕೇಳಿತು.
    ಪಾಕ್ ವಾಯು ಮಾರ್ಗದಲ್ಲಿ ಹೋದ ವಿಮಾನ ಕೆಲವೇ ಹೊತ್ತಲ್ಲಿ, ಪಾಕಿಸ್ತಾನದ ಏರ್​ ಟ್ರಾಫಿಕ್​ ಕಂಟ್ರೋಲರ್​ (ATC-ವಾಯು ಸಂಚಾರ ನಿಯಂತ್ರಕ) ಅಧಿಕಾರಿ ಪೈಲಟ್​​ಗಳನ್ನು ಹೊಗಳಿದ್ದಾರೆ. ಈ ಬಗ್ಗೆ ಏರ್​ ಇಂಡಿಯಾದ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

    ‘ಅಸ್ ಸಲಾಂ ವಾಲೆಕುಂ, ಇದು ಕರಾಚಿ ಕಂಟ್ರೋಲ್​. ಪರಿಹಾರಾರ್ಥ ಕಾರ್ಯಾಚರಣೆಗೆ ಹೊರಟ ಏರ್​ ಇಂಡಿಯಾಕ್ಕೆ ಸ್ವಾಗತ ಎಂದು ಪಾಕ್​ ಎಟಿಸಿ ಹೇಳಿದರು.

    ಹಾಗೇ, ಇಡೀ ಜಗತ್ತು ಸಾಂಕ್ರಾಮಿಕ ರೋಗದಿಂದ ಕಷ್ಟಪಡುತ್ತಿರುವಾಗ, ವಿದೇಶಿ ಜನರನ್ನು ಅವರ ದೇಶಕ್ಕೆ ತಲುಪಿಸುವ ಸಲುವಾಗಿ ಕಾರ್ಯ ನಿರ್ವಹಿಸುತ್ತಿರುವ ನಿಮ್ಮ ಬಗ್ಗೆ ತುಂಬ ಹೆಮ್ಮೆ ಎನ್ನಿಸುತ್ತದೆ. (ವಿ ಆರ್​ ಪ್ರೌಡ್​ ಆಫ್​ ಯು) ನಿಮಗೆಲ್ಲ ಒಳ್ಳೆಯದಾಗಲಿ ಎಂದು ಪೈಲಟ್​​ಗಳನ್ನು ಹೊಗಳಿದ್ದಾರೆ . ಅದಕ್ಕೆ ಪ್ರತಿಯಾಗಿ ಏರ್​ ಇಂಡಿಯಾದ ಕ್ಯಾಪ್ಟನ್​ ಪಾಕ್​ ಎಟಿಸಿಗೆ ಧನ್ಯವಾದ ಹೇಳಿದರು ಎಂದು ಏರ್​ ಇಂಡಿಯಾ ಆಫೀಸರ್​ ತಿಳಿಸಿದ್ದಾರೆ.

    ಅಷ್ಟೇ ಅಲ್ಲ ಪಾಕಿಸ್ತಾನ ಏರ್​ ಟ್ರಾಫಿಕ್​ ಕಂಟ್ರೋಲರ್​ ಇನ್ನೊಂದು ಸಹಾಯವನ್ನು ಏರ್​ ಇಂಡಿಯಾಕ್ಕೆ ಮಾಡಿದೆ. ಕರಾಚಿಯ ಮಾರ್ಗವಾಗಿ ಹಾರಲು ಅವಕಾಶ ಮಾಡಿಕೊಟ್ಟು, ವಿಮಾನ ಹಾರಾಟದ ಅವಧಿಯನ್ನು 15 ನಿಮಿಷಗಳಷ್ಟು ಕಡಿಮೆ ಮಾಡಿದೆ.
    ಇದು ಅಲ್ಲಿಗೇ ಮುಗಿಯಲಿಲ್ಲ. ಏರ್​ ಇಂಡಿಯಾ ವಿಮಾನ ಇರಾನ್​ ವಾಯುಮಾರ್ಗಕ್ಕೆ ಪ್ರವೇಶ ಮಾಡಿದಾಗಲೂ ಪಾಕ್​ ಎಟಿಸಿ ಸಹಾಯ ಮಾಡಿತು.

    ಇರಾನ್ ವಾಯುಮಾರ್ಗಕ್ಕೆ ಪ್ರವೇಶ ಮಾಡಿದಾಗ ಅಲ್ಲಿನ ಏರ್​ ಟ್ರಾಫಿಕ್​ ಕಂಟ್ರೋಲರ್​ ಜತೆ ಸಂಪರ್ಕ ಸಾಧಿಸಲು ಪೈಲಟ್​ಗಳಿಗೆ ಸಾಧ್ಯವಾಗಲಿಲ್ಲ. ಆಗ ಪಾಕಿಸ್ತಾನ ಎಟಿಸಿಯೇ ಇರಾನ್​ ಎಟಿಸಿಗೆ ಸಂದೇಶ ನೀಡಿತು. ಉಳಿದ ದಿನಗಳಲ್ಲಿ ನಾವು ಇರಾನ್ ವಾಯುಮಾರ್ಗದಲ್ಲಿ ಹೆಚ್ಚಿನ ಸಮಯ ಕಳೆಯಬೇಕಾಗುತ್ತದೆ. ಆದರೆ ಈಗ ಇರಾನ್​ ಎಟಿಸಿ ಕೂಡ ನಮಗೆ ಮತ್ತೂ ಹತ್ತಿರದ ಮಾರ್ಗದಲ್ಲಿ ಸಂಚರಿಸಲು ಸಹಾಯ ಮಾಡಿತು ಎಂದು ಏರ್​ ಇಂಡಿಯಾ ತಿಳಿಸಿದೆ.

    ಏರ್​ ಇಂಡಿಯಾ ಹಾಗೂ ಅದರ ಪೈಲಟ್​​ಗಳನ್ನು ಟರ್ಕಿಶ್​, ಜರ್ಮನ್​ ಏರ್​ ಟ್ರಾಫಿಕ್​ ಕಂಟ್ರೋಲರ್​​ಗಳೂ ಕೂಡ ಹೊಗಳಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts