More

    ದೇಶದ ಮಹಾನ್​ ಸ್ವಾತಂತ್ರ್ಯ ಹೋರಾಟಗಾರರನ್ನು ಪರಿಚಯಿಸಲಿದೆ ಈ ಬಾನುಲಿ ಸರಣಿ, ‘ಹಮಾರೇ ಸ್ವತಂತ್ರ್ಯ ತಾ ಸೇನಾನಿ’

    ಬೆಂಗಳೂರು: ದೇಶದ ಮಹಾನ್​ ಸ್ವಾತಂತ್ರ್ಯ ಹೋರಾಟಗಾರರನ್ನು ಮತ್ತೆ ಪರಿಚಯಿಸುವ, ಅವರ ಹೋರಾಟವನ್ನು ಪುನಃ ಸ್ಮರಿಸಿಕೊಳ್ಳುವ ವಿಶೇಷ ಬಾನುಲಿ ಸರಣಿಯೊಂದನ್ನು ಕನ್ನಡಿಗರೊಬ್ಬರ ಪರಿಕಲ್ಪನೆ ಹಾಗೂ ನಿರ್ದೇಶನದಲ್ಲಿ ಮೂಡಿ ಬರಲಿದೆ.

    ಕನ್ನಡಿಗ ಸುಧೀರ್ ಅತ್ತಾವರ್ ಅವರು 75ನೇ ಸ್ವಾತಂತ್ರ್ಯೋತ್ಸವದ ಸಲುವಾಗಿ ದೇಶದ ಮೂಲೆಮೂಲೆಯ ಸುಮಾರು 75 ಸ್ವಾತಂತ್ರ್ಯ ಹೋರಾಟಗಾರರ ಕುರಿತ ಬಾನುಲಿ ಸರಣಿಯೊಂದನ್ನು ರೂಪಿಸಿದ್ದಾರೆ. ‘ಹಮಾರೇ ಸ್ವತಂತ್ರ್ಯತಾ ಸೇನಾನಿ’ ಎಂಬ ಶೀರ್ಷಿಕೆಯ ಈ ಬಾನುಲಿ ಸರಣಿ 15 ಕಂತುಗಳಲ್ಲಿ ಪ್ರಸಾರವಾಗಲಿದೆ.

    ಮುಂಬೈನ ಸಕ್ಸಸ್ ಫಿಲಮ್ಸ್​ ಮೂಲಕ ನಿರ್ಮಾಣವಾಗಿರುವ ಡಿ.ಕೆ. ಫ್ಲ್ಯಾಗ್ ಫೌಂಡೇಷನ್​ ಅರ್ಪಿಸುವ ಈ ಕಾರ್ಯಕ್ರಮವನ್ನು ಡಿ.ಕೆ. ಫ್ಲ್ಯಾಗ್ ಫೌಂಡೇಷನ್​ನ ಡಾ.ರಾಕೇಶ್​ ಬಕ್ಷಿ ನಡೆಸಿಕೊಡಲಿರುವರು. ಖ್ಯಾತ ಹಿನ್ನೆಲೆ ಗಾಯಕರಾದ ಶಾನ್, ಶರೋನ್ ಪ್ರಭಾಕರ್, ಆರತಿ ಮುಖರ್ಜಿ, ಡಾ. ಸಂದೇಶ್ ಮಾಯೆಕರ್, ಹಾಕಿ ಆಟಗಾರ ಧನರಾಜ್ ಪಿಳ್ಳೆ, ಹಜ್ ಹೌಸ್ ಅಧ್ಯಕ್ಷ ಮಕ್ಸೂದ್ ಅಹಮ್ಮದ್ ಖಾನ್, ಬೀನಾ ಸಂತೋಷ್ ಮೊದಲಾದ ಅತಿಥಿಗಳು ಇದರಲ್ಲಿ ಭಾಗವಹಿಸಲಿದ್ದಾರೆ.

    ಈ ಕಾರ್ಯಕ್ರಮವು ದೆಹಲಿ, ಮುಂಬೈ, ಕೋಲ್ಕತ, ಚೆನ್ನೈ, ಹೈದರಾಬಾದ್, ಪೋರ್ಟ್ ಬ್ಲೇರ್, ಚಂಡೀಘರ್, ಲಕ್ನೋ, ಅಹಮದಾಬಾದ್, ಪೂನಾ, ನಾಗ್ಪುರ, ಬೆಂಗಳೂರು, ಮಂಗಳೂರು ಸೇರಿ ದೇಶಾದ್ಯಂತದ ಪ್ರಮುಖ ಬಾನುಲಿ ಕೇಂದ್ರಗಳಲ್ಲಿ ಆ.1ರಿಂದ ಆ.15ರ ವರೆಗೆ ಪ್ರತಿದಿನ ಸಂಜೆ 4.30ರಿಂದ ಪ್ರಸಾರಗೊಳ್ಳಲಿದೆ.

    ‘ತಂದೆಗೆ ಒಳ್ಳೆಯ ಮಗಳಾಗಲಿಲ್ಲ, ಗಂಡನಿಗೆ ತಕ್ಕ ಹೆಂಡತಿಯಾಗಲಿಲ್ಲ..’: ಮೋಹನಕುಮಾರಿ ಇನ್ನಿಲ್ಲ…

    ಕೋವಿಡ್​ನಿಂದ ಬಚಾವಾದರೂ ನೆಮ್ಮದಿ ಇಲ್ಲ; ಕಂಡುಬಂದಿದೆ ಮತ್ತೊಂದು ರೋಗ, ಬೋನ್​ ಡೆತ್!

    ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಪುರುಷರೇ ಹೆಚ್ಚು, ಏಕೆ?; ಗೃಹಿಣಿಯರಿಗೆ ಖುಷಿ ಕೊಟ್ಟೀತು ಈ ಅಧ್ಯಯನ ವರದಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts