More

    ಬೆಂಗಳೂರಿನ ಮಹಿಳಾ ವಿಜ್ಞಾನಿಗೆ ಫ್ರಾನ್ಸ್ ದೇಶದ ಅತ್ಯುನ್ನತ ಪುರಸ್ಕಾರ

    ಬೆಂಗಳೂರು: ನಗರದ ಮಹಿಳಾ ವಿಜ್ಞಾನಿ ರೋಹಿಣಿ ಗೋಡ್ಬೋಲೆ ಅವರಿಗೆ ಫ್ರಾನ್ಸ್​ ಸರ್ಕಾರ ದೇಶದ ಅತ್ಯುನ್ನತ ಪುರಸ್ಕಾರವನ್ನು ನೀಡಿ ಗೌರವಿಸಿದೆ. ಮಹಿಳಾ ಸಬಲೀಕರಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಅವರಿಗೆ ಆರ್ಡರ್ ನ್ಯಾಷನಲ್ ಡು ಮೆರಿಟ್ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ.

    ಇದನ್ನೂ ಓದಿ: ಐಪಿಎಲ್ ಹರಾಜಿಗೆ ಮುನ್ನ ಆರ್‌ಸಿಬಿ ತಂಡದಿಂದ ಯಾರು ಔಟ್, ಯಾರು ಸೇಫ್​?

    ಫ್ರಾನ್ಸ್ ಮತ್ತು ಭಾರತದ ನಡುವಿನ ಸಹಯೋಗ ಮತ್ತು ವಿಜ್ಞಾನದಲ್ಲಿ ಮಹಿಳೆಯರ ದಾಖಲಾತಿಯನ್ನು ಉತ್ತೇಜಿಸುವಲ್ಲಿ ಬದ್ಧತೆಗಳಲ್ಲಿ ಅವರು ಮಾಡಿರುವ ಕೆಲಸಗಳನ್ನು ಗುರುತಿಸಲಾಗಿದೆ.

    ಇದನ್ನೂ ಓದಿ: ಸ್ವಂತ ಮಗುವಿಲ್ಲದವರ ಆಸ್ತಿಯನ್ನು ಸಹೋದರರ ಮಕ್ಕಳು ಪಡೆಯಲು ಅವಕಾಶವಿದೆಯಾ?

    ರೋಹಿಣಿ ಗೋಡ್ಬೋಲೆ ಭಾರತೀಯ ಭೌತಶಾಸ್ತ್ರಜ್ಞರು ಮತ್ತು ಶೈಕ್ಷಣಿಕ ತಜ್ಞರು. ಅವರು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಹೈ ಎನರ್ಜಿ ಫಿಸಿಕ್ಸ್ ಸೆಂಟರ್ ಫಾರ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಮೂರು ದಶಕಗಳಲ್ಲಿ ಕಣ ವಿದ್ಯಮಾನದ ವಿವಿಧ ಅಂಶಗಳ ಬಗ್ಗೆ ಅವರು ವ್ಯಾಪಕವಾಗಿ ಕೆಲಸ ಮಾಡಿದ್ದಾರೆ. ನಿರ್ದಿಷ್ಟವಾಗಿ ಸ್ಟ್ಯಾಂಡರ್ಡ್ ಮಾಡೆಲ್ ಆಫ್ ಪಾರ್ಟಿಕಲ್ ಫಿಸಿಕ್ಸ್ (ಎಸ್‌ಎಂ) ಮತ್ತು ಅದನ್ನು ಮೀರಿದ ಭೌತಶಾಸ್ತ್ರದ (ಬಿಎಸ್‌ಎಂ) ವಿಭಿನ್ನ ಅಂಶಗಳನ್ನು ಅನ್ವೇಷಿಸುವ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಅವರು ಸೈನ್ಸ್ ಆಫ್ ಇಂಡಿಯಾದ ಎಲ್ಲಾ ಮೂರು ಅಕಾಡೆಮಿಗಳ ಚುನಾಯಿತ ಸಹವರ್ತಿ ಮತ್ತು ಸೈನ್ಸ್ ಅಕಾಡೆಮಿ ಆಫ್ ದಿ ಡೆವಲಪಿಂಗ್ ವರ್ಲ್ಡ್(ಟಿಡಬ್ಲ್ಯೂಎಎಸ್)ನ ಚುನಾಯಿತ ಸಹವರ್ತಿಯಾಗಿದ್ದಾರೆ. (ಏಜೆನ್ಸೀಸ್​)

    ಬಿಡುಗಡೆಯಾದ ಒಂದೇ ದಿನಕ್ಕೆ ‘ಮಾಸ್ಟರ್​’ ಚಿತ್ರಕ್ಕೆ ಇಂಥ ಗತಿ ಬರಬಾರದಿತ್ತು!

    ಎಂಗೇಜ್ಮೆಂಟ್​ ಆದ್ಮೇಲೆ ಸೆಕ್ಸ್​ ಮಾಡಿ ನೀ ಬೇಡ ಎಂದ; ಪೊಲೀಸರ ಮೊರೆ ಹೋದ ಯುವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts