More

    ಹಂಪಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಲಕ್ಕಪ್ಪಗೌಡ ನಿಧನ

    ಮೈಸೂರು: ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾಗಿದ್ದ ಪ್ರೊ.ಲಕ್ಕಪ್ಪಗೌಡ(84) ಸೋಮವಾರದಂದು ಮೈಸೂರಿನಲ್ಲಿ ವಿಧಿವಶರಾಗಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ನಾಳೆ ಮೈಸೂರಿನಲ್ಲಿ ನೆರವೇರಿಸುವುದಾಗಿ ಕುಟುಂಬ ತಿಳಿಸಿದೆ.

    ಲಕ್ಕಪ್ಪಗೌಡ ಅವರು ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಜಾನಪದ ಅಕಾಡೆಮಿ ಅಧ್ಯಕ್ಷರಾಗಿ ಹಾಗೂ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ರಿಜಿಸ್ಟರ್ ಆಗಿ ಕಾರ್ಯನಿರ್ವಹಿಸಿದ್ದರು.

    ಲಕ್ಕಪ್ಪಗೌಡ ಅವರು ಪಿರಿಯಾಪಟ್ಟಣ ತಾಲ್ಲೂಕಿನ ಅಲಪನಾಯಕನಹಳ್ಳಿಯಲ್ಲಿ 1939ರ ಮೇ 8ರಂದು ಜನಿಸಿದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ‘ಶ್ರೀರಾಮಾಯಣ ದರ್ಶನಂ: ಒಂದು ವಿಮರ್ಶಾತ್ಮಕ ಅಧ್ಯಯನ’ ಮಹಾಪ್ರಬಂಧಕ್ಕೆ ಪಿಎಚ್‌.ಡಿ. ಪದವಿ ಪಡೆದರು.

    ಪ್ರೌಢಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಲಕ್ಕಪ್ಪಗೌಡ ಅವರು ಅಧ್ಯಾಪನ ಉಪನ್ಯಾಸಕ, ಸಂಶೋಧನ ಸಹಾಯಕರಾದರು. ಪ್ರೌಢಶಾಲಾ ಶಿಕ್ಷಕರಾಗಿದ್ದಾಗ ಪುರಂದರದಾಸರನ್ನು ಕುರಿತು ‘ತಮಸ್ಸಿನಿಂದ ಜ್ಯೋತಿಗೆ’ ನಾಟಕ ರಚಿಸಿದ್ದರು. ನಂತರ ಜಾನಪದದೆಡೆಗೆ ಒಲವು ಬೆಳೆಸಿಕೊಂಡು, ಜಾನಪದ ವಿಚಾರಸಂಕೀರ್ಣಗಳು, ಮೇಳಗಳ ಆಯೋಜನೆ ಮಾಡಿದರು. ಮೈಸೂರು ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಚಟುವಟಿಕೆಗಳ ಮೂಲಕ ಗಮನಸೆಳೆದ ಅವರು ಕುಲಸಚಿವ, ಕನ್ನಡಭಾರತಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ನಂತರ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಕುಲಪತಿಗಳಾದರು.

    ಕುವೆಂಪು ವಿಶ್ವವಿದ್ಯಾಲಯದಲ್ಲಿ ಸೆನೆಟ್, ಸಿಂಡಿಕೇಟ್ ಸದಸ್ಯ, ಕರ್ನಾಟಕ ರಾಜ್ಯ ಭಾಷಾ ಆಯೋಗದ ಸದಸ್ಯ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ, ಕರ್ನಾಟಕ ಜಾನಪದ ಪರಿಷತ್ತಿನ ಸಂಸ್ಥಾಪಕ ಸದಸ್ಯ, ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಮುಂತಾದ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅವರು 7 ಕವನ ಸಂಕಲನ, 2 ಸಣ್ಣಕತೆಗಳ ಸಂಕಲನ, 2 ನಾಟಕ, 4 ಜೀವನಚರಿತ್ರೆ, 10 ಸಾಹಿತ್ಯ ವಿಮರ್ಶೆ, 7 ಜಾನಪದ, 6 ಮಕ್ಕಳ ಸಾಹಿತ್ಯ ಸೇರಿದಂತೆ ಒಟ್ಟು 65 ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಬಹುಮಾನ, ಜಾನಪದ ಅಕಾಡೆಮಿ ಪ್ರಶಸ್ತಿ, ಅಖಿಲ ಕರ್ನಾಟಕ ಜಾನಪದ ಸಮ್ಮೇಳನಾಧ್ಯಕ್ಷತೆಯ ಗೌರವ ಸಂದಿವೆ.

    ಅಬ್ಬಾ! ಮೈ ಝುಂ ಎನಿಸುವ ವಿಡಿಯೋಗಳು.. ಇವಳೇ ನೋಡಿ ನಿಜವಾದ ಮತ್ಸ್ಯ ಕನ್ಯೆ

    ಪದಕ ಗೆದ್ದ ಕ್ರೀಡಾಪಟುಗಳು ಅದನ್ನು ಕಚ್ಚುವುದು ಏಕೆ? ಇಲ್ಲಿದೆ ಕುತೂಹಲಕಾರಿ ಉತ್ತರ

    VIDEO| ಯುವತಿಯ ರೋಲರ್ ಕೋಸ್ಟರ್ ಖುಷಿಯನ್ನ ಹಾಳು ಮಾಡ್ತು ಆ ಒಂದು ಪಕ್ಷಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts