More

    ಅಬ್ಬಾ! ಮೈ ಝುಂ ಎನಿಸುವ ವಿಡಿಯೋಗಳು.. ಇವಳೇ ನೋಡಿ ನಿಜವಾದ ಮತ್ಸ್ಯ ಕನ್ಯೆ

    ಮಾಸ್ಕೋ: ಈಜು ಎಂದರೆ ಕಷ್ಟವೋ ಅಥವಾ ಸುಲಭವೋ? ಈಜು ಬರುವವರಿಗೆ ಅದೊಂದು ಸಣ್ಣ ವಿದ್ಯೆಯೆನಿಸಿದರೂ ಅದನ್ನು ಕಲಿಯಬೇಕೆಂದು ಹಂಬಲಿಸುತ್ತಿರುವವರಿಗೆ ಹಾಗೂ ಕಲಿಯಲಾಗದೆ ಒದ್ದಾಡುತ್ತಿರುವವರಿಗೆ ಅದು ಬ್ರಹ್ಮ ವಿದ್ಯೆಯೇ. ನೀವು ಈಜಿನಲ್ಲಿ ಅದೆಷ್ಟೇ ಎಕ್ಸ್​ಪರ್ಟ್ ಆಗಿದ್ದರೂ ಈ ಯುವತಿಯ ವಿಡಿಯೋಗಳನ್ನು ನೋಡಿದ ಮೇಲೆ ಕಲಿಯುವುದು ಸಾಕಷ್ಟಿದೆ ಎನಿಸುವುದು ಗ್ಯಾರಂಟಿ.

    ರಷ್ಯಾದ ಮಾಸ್ಕೋದಲ್ಲಿ ನೆಲೆಸಿರುವ 26 ವರ್ಷದ ಕ್ರಿಸ್ಟಿನಾ ಮಕುಶೆಂಕೊ ಬಗ್ಗೆ ನಾವು ಹೇಳುತ್ತಿರುವುದು. ರಾಷ್ಟ್ರದ ಸಿಂಕ್ರೋನೈಸಡ್ ಸ್ವಿಮ್ಮರ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಆಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದಾಳೆ. ಭೂಮಿ ಮೇಲೆ ನಿಂತು ಮಾಡಲು ಅಸಾಧ್ಯವೆನಿಸುವ ಅದೆಷ್ಟೋ ಡ್ಯಾನ್ಸ್ ಸ್ಟೆಪ್​ಗಳನ್ನು ಆಕೆ ನೀರಿನೊಳಗೆ ಮುಳಗಿಕೊಂಡು ಅರಾಮಾಗಿ ಮಾಡಿ ತೋರಿಸಲಾರಂಭಿಸಿದ್ದಾರೆ.

     

    View this post on Instagram

     

    A post shared by Kristina Makushenko (@kristimakusha)

    ನೀರಿನ ಒಳಗೆ ಬ್ಯಾಕ್ ಫ್ಲಿಪ್, ಕ್ಯಾಟ್ ವಾಕ್​ ಹೀಗೆ ಹಲವು ರೀತಿಯ ವಿಶೇಷ ಸ್ಟೆಪ್ಸ್​ಗಳನ್ನು ಹಾಕ್ತಾರೆ ಈ ಕ್ರಿಸ್ಟಿನಾ. ಆಕೆಯ ಡ್ಯಾನ್ಸ್ ಮೂವ್ಸ್​ಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಟಿಕ್​ಟಾಕ್, ಇನ್​ಸ್ಟಾಗ್ರಾಂ ಹೀಗೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಆಕೆ ತನ್ನ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಬಂದಿದ್ದಾರೆ. ಆ ಎಲ್ಲ ವಿಡಿಯೋಗಳನ್ನು ಲಕ್ಷಾಂತರ ಜನರು ನೋಡಿ, ಲೈಕ್ ಮಾಡಿದ್ದಾರೆ. ಈಕೆಯೇ ನಿಜವಾದ ಮತ್ಯ್ಯ ಕನ್ಯೆ ಎಂದೂ ಕೆಲವರು ಕರೆದಿದ್ದಾರೆ. (ಏಜೆನ್ಸೀಸ್)

     

    View this post on Instagram

     

    A post shared by Kristina Makushenko (@kristimakusha)

    ಪದಕ ಗೆದ್ದ ಕ್ರೀಡಾಪಟುಗಳು ಅದನ್ನು ಕಚ್ಚುವುದು ಏಕೆ? ಇಲ್ಲಿದೆ ಕುತೂಹಲಕಾರಿ ಉತ್ತರ

    VIDEO| ಬೆಳ್ಳಿ ಗೆದ್ದ ಮೀರಾಬಾಯಿ ಭಾರತಕ್ಕೆ ವಾಪಸ್: ಏರ್​ಪೋರ್ಟ್​ನಲ್ಲಿ ಸಿಕ್ತು ಭರ್ಜರಿ ಸ್ವಾಗತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts