More

    ಪದಕ ಗೆದ್ದ ಕ್ರೀಡಾಪಟುಗಳು ಅದನ್ನು ಕಚ್ಚುವುದು ಏಕೆ? ಇಲ್ಲಿದೆ ಕುತೂಹಲಕಾರಿ ಉತ್ತರ

    ಟೋಕಿಯೋ: ಜಪಾನ್​ನ ರಾಜಧಾನಿ ಟೋಕಿಯೋದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯುತ್ತಿದೆ. ಈ ಕ್ರೀಡಾಕೂಟದಲ್ಲಿ ಸಾಮಾನ್ಯವಾಗಿ ಯಾವುದೇ ಕ್ರೀಡಾಪಟು ಪದಕ ಗೆದ್ದರೆ ಅದನ್ನು ಅವರು ಬಾಯಿಯಲ್ಲಿ ಕಚ್ಚಿ ಹಿಡಿದು ಕ್ಯಾಮರಾಗೆ ಪೋಸ್ ಕೊಡುತ್ತಾರೆ. ಅಷ್ಟಕ್ಕೂ ಆ ರೀತಿ ಮಾಡುವುದು ಏಕೆ ಎನ್ನುವ ಪ್ರಶ್ನೆ ನಿಮಗಿದ್ದರೆ ಇಲ್ಲಿದೆ ಉತ್ತರ.

    ಇಂಟರ್ನ್ಯಾಷನಲ್ ಸೊಸೈಟಿ ಆಫ್ ಒಲಿಂಪಿಕ್ ಇತಿಹಾಸಕಾರರ ಅಧ್ಯಕ್ಷ ಡೇವಿಡ್ ವಾಲ್ಚಿನ್ಸ್ಕಿ ಹೇಳುವ ಪ್ರಕಾರ ಈ ರೀತಿ ಮೆಡಲ್ ಬೈಟ್ ಮಾಡುವುದಕ್ಕೆ ಯಾವುದೇ ಅರ್ಥವಿಲ್ಲವಂತೆ. ಇದು ಫೋಟೋಗ್ರಫರ್​ಗಳಿಗಾಗಿ ಮಾತ್ರವೇ ಮಾಡುವ ಕೆಲಸವಂತೆ. ಈ ರೀತಿ ಮೆಡಲ್ ಬೈಟ್ ಮಾಡುವ ಫೋಟೋ ನೋಡುವುದಕ್ಕೆ ಹೆಚ್ಚು ಚಂದ ಕಾಣುವುದರಿಂದ ಅಲ್ಲಿರುವ ಫೋಟೋಗ್ರಫರ್​ಗಳೇ ಒತ್ತಾಯ ಮಾಡಿ ಆ ಪೋಸ್ ಕೊಡುವಂತೆ ಹೇಳುತ್ತಾರೆ. ಅವರಿಗಾಗಿ ಮಾತ್ರವೇ ಕ್ರೀಡಾಪಟುಗಳು ಹಾಗೆ ಮಾಡುತ್ತಾರಂತೆ.

    ಈ ರೀತಿ ಮೆಡಲ್ ಕಚ್ಚುವುದಕ್ಕೆ ಇನ್ನೊಂದು ಕಾರಣವೂ ಇರಬಹುದು ಎನ್ನಲಾಗಿದೆ. ಸಾಮಾನ್ಯವಾಗಿ ಚಿನ್ನ ಬೇರೆ ಲೋಹಗಳಿಗಿಂತ ಮೃದು ಆಗಿರುತ್ತದೆ. ಹಾಗಾಗಿ ಚಿನ್ನವನ್ನು ಕಚ್ಚಿ ನೋಡುವ ಅಭ್ಯಾಸ ಕೆಲವು ಕಡೆಯಿದೆಯಂತೆ. ಅದೇ ರೀತಿ ಪದಕವನ್ನು ಚಿನ್ನವೇ ಎಂದು ನೋಡಲೂ ಕಚ್ಚಿ ಪರೀಕ್ಷಿಸಬಹುದು. ಪೂರ್ತಿ ಚಿನ್ನದ ಪದಕವಾದರೆ ಅಲ್ಲಿನ ಹಲ್ಲಿನ ಚಿಹ್ನೆ ಬೀಳುತ್ತದೆ. ಆದರೆ ಒಲಿಂಪಿಕ್ಸ್​ನಲ್ಲಿ ನೀಡುವ ಪದಕದಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ಚಿನ್ನ ಇರುವುದರಿಂದ ಮಾರ್ಕ್ ಬೀಳುವುದಿಲ್ಲ ಎನ್ನಲಾಗಿದೆ.

    ವರದಿಯೊಂದರ ಪ್ರಕಾರ, 2016ರ ರಿಯೋ ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕದಲ್ಲಿ ಕೇವಲ ಶೇ. 1ರಷ್ಟು ಚಿನ್ನವಿದ್ದು, ಶೇ. 93ರಷ್ಟು ಬೆಳ್ಳಿ ಹಾಗೂ ಶೇ. 6ರಷ್ಟು ಕಂಚು ಇತ್ತು. (ಏಜೆನ್ಸೀಸ್)

    ಉತ್ತರ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಇಂದು ಶೂನ್ಯ ಕರೊನಾ ಪ್ರಕರಣ!

    VIDEO| ಯುವತಿಯ ರೋಲರ್ ಕೋಸ್ಟರ್ ಖುಷಿಯನ್ನ ಹಾಳು ಮಾಡ್ತು ಆ ಒಂದು ಪಕ್ಷಿ!

    VIDEO| ಬೆಳ್ಳಿ ಗೆದ್ದ ಮೀರಾಬಾಯಿ ಭಾರತಕ್ಕೆ ವಾಪಸ್: ಏರ್​ಪೋರ್ಟ್​ನಲ್ಲಿ ಸಿಕ್ತು ಭರ್ಜರಿ ಸ್ವಾಗತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts